ಸಿಎಂ ಕುಮಾರಸ್ವಾಮಿ ಹೇಳಿಕೆ ಖಂಡನೀಯ: ದೇವಪ್ಪ ಇಟಗಿ

0
13

ಮುಂಡರಗಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯಕ್ಕಾಗಿ ರಾಯಚೂರ ಜಿಲ್ಲೆಯ ಮಾನ್ವಿ ತಾಲೂಕಿನ ಕರೇಗುಡ್ಡಕ್ಕೆ ಬಸ್‌ನಲ್ಲಿ ತೆರಳುತ್ತಿದ್ದ ವೇಳೆ ವೈಟಿಪಿಎಸ್ ಕಾರ್ಮಿಕರ ಸಂಘದ ಸದಸ್ಯರು ಅಡ್ಡಿಸಿ ಸಮಸ್ಯೆ ಹೇಳಿಕೊಂಡರೇ ಲಾಟಿ ಚಾರ್ಜ್ ಮಾಡಿಸ್ತಿÃನಿ ಅಂತ ಹೇಳಿದ್ದು ಖಂಡನೀಯ ಎಂದು ಬಿಜೆಪಿ ಮುಖಂಡ ದೇವಪ್ಪ ಇಟಗಿ ಹೇಳಿದರು.
ಈ ಕುರಿತು ಬುಧವಾರ ಸಂಜೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಪ್ರತಿಯೊಬ್ಬರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸಬೇಕಾದ ಎಚ್.ಡಿ.ಕುಮಾರಸ್ವಾಮಿ ಅವರು ಸಮಸ್ಯೆ ಹೇಳಿಕೊಂಡ ಬಂದಂತ ಕಾರ್ಮಿಕರಿಗೆ ದುರಂಕಾರದಿಂದ ಬೇಜವಾಬ್ದಾರಿಯಿಂದ ಮಾತನಾಡುವುದು ಸರಿಯಲ್ಲ ಎಂದು ಆಕ್ರೊÃಶ ವ್ಯಕ್ತಪಡಿಸಿದರು.
ನರೇಂದ್ರ ಮೋದಯವರಿಗೆ ವೋಟ್ ಹಾಕ್ತಿÃರಿ.. ಸಮಸ್ಯೆ ನಾನು ಬಗೆಹರಿಸಬೇಕಾ? ಎಂದು ಬೇಜವಾಬ್ದಾರಿಯಿಂದ ಮಾತನಾಡುವುದು ಸಿಎಂ ಅವರಿಗೆ ಗೌರವ ತರುವಂತದಲ್ಲ. ನಾಡಿನ ಸರ್ವ ಜನಾಂಗದ ಏಳ್ಗೆಗೆ ಶ್ರಮಿಸಬೇಕಾಗಿರುವುದು ಸಿಎಂ ಕೆಲಸವಾಗಿದೆ. ಇನ್ನು ಮುಂದೆ ಅವರು ಮಾತನಾಡುವಾಗ ಎಚ್ಚರಿಕೆಯಿಂದ ಎಲ್ಲರಿಗೂ ಗೌರವ ಪೂರಕವಾಗಿ ಮಾತನಾಡಬೇಕು ಎಂದಿದ್ದಾರೆ.

loading...