ಸಿಎಂ ದೂರ ಆಗುವ ಪ್ರಶ್ನೆಯೇ ಇಲ್ಲ: ಸಚಿವ ರಮೇಶ

0
5

ಸಿಎಂ ದೂರ ಆಗುವ ಪ್ರಶ್ನೆಯೇ ಇಲ್ಲ: ಸಚಿವ ರಮೇಶ
ಬೆಳಗಾವಿ: ಸಿಎಂ ಬಿ.ಎಸ್.ಯಡಿಯೂರಪ್ಪನವರು ನಮ್ಮ ಅತ್ಯಂತ ಪ್ರೀತಿಯ ಮುಖ್ಯಮಂತ್ರಿಗಳು. ಹೀಗಾಗಿ ಅವರಿಂದ ದೂರ ಆಗುವ ಪ್ರಶ್ನೆಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಎಂ ಬಿಎಸ್‌ವೈರಿಂದ ರಮೇಶ ಜಾರಕಿಹೊಳಿ ದೂರ ಆಗುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ಅಂತಹ ಸ್ವಭಾವ ನಮ್ಮದಲ್ಲ.
ಕೆಲಸ ಇದ್ದರೆ ಮಾತ್ರ ಸಿಎಂ ಬಳಿ ಹೋಗುತ್ತೇವೆ. ಇಂತಹ ಮುಖ್ಯಮಂತ್ರಿಯನ್ನು ನಾವು ಯಾವತ್ತೂ ಕಂಡಿಲ್ಲ. ಒಳ್ಳೆಯ ಮುಖ್ಯಮಂತ್ರಿ, ನೇರ ಸ್ವಭಾವದವರು, ಅಭಿವೃದ್ಧಿಗೋಸ್ಕರ ಯಾವಾಗಲೂ ಎತ್ತಿದ ಕೈ, ಅವರ ಬಗ್ಗೆ ನಮಗೆ ಬಹಳ ಗೌರವವಿದೆ ಎಂದು ಹೇಳಿದರು.
೦೮

loading...