ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ ಆತ್ಮಹತ್ಯೆಗೆ ಯತ್ನ

0
14

 

ಬೆಂಗಳೂರು
ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಸಂತೋಷ್‌ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ನಿದ್ದೆ ಮಾತ್ರೆ ಸೇವಿಸಿ ಸಂತೋಷ್‌ ಆತ್ಮಹತ್ಯೆಗೆ ಯತ್ನಿಸಿದ್ದು, ರಾಮಯ್ಯ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿರವಾಗಿದೆ ಎನ್ನುವ‌ ಮಾಹಿತಿ ಲಭ್ಯವಾಗಿದೆ.
ಸಂತೋಷ್ ಅವರನ್ನು ಭೇಟಿ ಮಾಡಲು ಸಿಎಂ ಯಡಿಯೂರಪ್ಪ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಈ ವೇಳೆ ಪ್ರತಿಕ್ರಿಯೆ ನೀಡಿದ ಸಿಎಂ, ನಿನ್ನೆ ಮದುವೆ ಮನೆಯಲ್ಲಿ ಚೆನ್ನಾಗಿದ್ದರು. ಯಾಕೆ ಏನು ಎನ್ನುವುದು ನನಗೂ ತಿಳಿದಿಲ್ಲ. ಈಗ ನಾನು ಅವರ ಕುಟುಂಬದ ಜೊತೆ ಮಾತನಾಡಲು ಹೋಗುತ್ತಿದ್ದೇನೆ ಎಂದು ತಿಳಿಸಿ  ಆಸ್ಪತ್ರೆಯ ಒಳಗಡೆ ತೆರಳಿದರು.

loading...