ಸಿಡಿಲಿಗೆ ಮಹಿಳೆಯರಿಬ್ಬರು ಸಾವು

0
86

ಸಿಡಿಲಿಗೆ ಮಹಿಳೆಯರಿಬ್ಬರು ಸಾವು
ಬೆಳಗಾವಿ:
ಸಿಡಿಲ ಅಬ್ಬರಕ್ಕೆ ಮಹಿಳೆಯರಿಬ್ಬರೂ ಸ್ಥಳದಲ್ಲೇ ಸಾವನಪ್ಪಿರುವ ದುರ್ಘಟನೆ ಮಂಗಳವಾರ ಚಿಕ್ಕ ಉಳ್ಳಿಗೇರಿ ನಡೆದಿದೆ.
ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ಮಲ್ಲವ್ವ ವಿಠ್ಠಲ್ ಇಂಚಲ (36) ಬಾಗವ್ವ ಮಾದೇವಪ್ಪ ಕಡಕೋಳ (55) ಇಬ್ಬರು ಮೃತ ದುರ್ದೈವಿಗಳು, ಇನ್ನೋರ್ವ ಮಹಿಳೆ ಮಹಿಳೆ ರೇಣವ್ವ ಗದಿಗೆಪ್ಪ (45) ಇವರಿಗೆ ಗಂಭೀರ ಗಾಯಗಳಾಗಿದ್ದು, ಇನಾಮಹೊಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಹೊಲದ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮೂವರು ಮಹಿಳೆಯರಿಗೆ ಸಿಡಿಲಿನ ಹೊಡೆತ ಸಿಲುಕ್ಕಿದ್ದಾರೆ. ಈ ವೇಳೆ ನವಿಲು ತೀರ್ಥಿನ 47 ಕುರಿಗಳು ಬಲಿಯಾಗಿವೆ.
ಘಟನಾ ಸ್ಥಳಕ್ಕೆ ಶಾಸಕ, ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ಭೇಟಿ ನೀಡಿ ಮೃತಪಟ್ಟ ಕುಟುಂಬದವರಿಗೆ ಸರಕಾರದಿಂದ ಐದು ಲಕ್ಷ ರೂ. ಪರಿಹಾರಧನವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ತಹೀಲ್ದಾರ್ ಪ್ರಶಾಂತ್ ಬಿ ಪಾಟೀಲ ಪಿಎಸ್‍ಐ ಬಸನಗೌಡ ಕಟ್ಟಿಮನಿ ಗೌಡ್ರು ಭೇಟಿ ನೀಡಿ ಘಟನಾ ಸ್ಥಳವನ್ನು ಪರಿಶೀಲಿದ್ದಾರೆ.

loading...