ಸಿಡಿಲು, ಬಿರುಗಾಳಿ ಸಹಿತ ಮಳೆ: ವಿದ್ಯುತ್ ಕಂಬ, ಮರ ಧರೆಗೆ

0
76

ಗಜೇಂದ್ರಗಡ: ತಾಲೂಕಿನಾಧ್ಯಂತ ರವಿವಾರ ಸಂಜೆ ಸುರಿದ ಮಳೆ-ಗಾಳಿಯಿಂದಾಗಿ 20ಕ್ಕೂ ಅಧಿಕ ವಿದ್ಯುತ್ ಕಂಬಗಳು, 10 ದೊಡ್ಡ ಮರಗಳು ಬಿದ್ದಿದ್ದು, ಐದಕ್ಕೂ ಅಧಿಕ ಮನೆಗಳು ತಗಡಿನ ಶೆಡ್‍ಗಳು ಗಾಳಿಗೆ ಹಾರಿಹೋದ ಘಟನೆ ನಡೆದಿದೆ. ಮಳೆಯಿಂದ 20 ಕ್ಕೂ ಗ್ರಾಮಗಳ ವಿದ್ಯೂತ್ ಕಡಿತ ಮಾಡಲಾಗಿತ್ತು.

ಸಮೀಪದ ಚಿಲ್‍ಝರಿ ಹಾಗೂ ವೀರಾಪೂರ ಗ್ರಾಮದಲ್ಲಿ ಭಾರಿ ಪ್ರಮಾಣದ ಬೀರುಗಾಳಿ ಹಾಗೂ ಮಳೆಯಾದ ಹಿನ್ನಲೆಯಲ್ಲಿ ರಸ್ತೆಗಳು ಸಂಪೂರ್ಣವಾಗಿ ಜಲಾವೃತ ಗೊಂಡಿದ್ದು ಒಂದೆಡೆಯಾದರೆ ಇತ್ತ ರಸ್ತೆ ಬದಿಯ ಹೆಸ್ಕಾಂ ಇಲಾಖೆಯ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗೂ ಒಂದು ವಿದ್ಯುತ್ ಪರಿವರ್ತಕ ಗಾಳಿಯ ಹೊಡೆತಕ್ಕೆ ನೆಲಕ್ಕುರಿಳಿದೆ. ಹೀಗಾಗಿ ರಸ್ತಯ ಮೇಲೆಲ್ಲಾ ವಿದ್ಯುತ್ ಸರಬರಾಜು ತಂತಿಗಳು ರಸ್ತೆಯ ಮೇಲೆಲ್ಲಾ ಬಿದ್ದಿದ್ದವು. ಈ ವೇಳೆ ಸಂಚಾರಕ್ಕೆ ಅಡೆತಡೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಹೀಗಾಗಿ ವಿಷಯ ತಿಳಿದು ತಕ್ಷಣವೇ ಎಚ್ಚೇತ್ತುಕೊಂಡ ಸ್ಥಳೀಯ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ವಿದ್ಯುತ್ ಸರಬರಾಜು ಸ್ಥತಗಿತಗೊಳಿಸಿದ ಪರಿಣಾಮ ಯಾವೂದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಸಂಜೆ ಸುರಿದ ಮಳೆಯಿಂದಾಗಿ ಸಮೀಪದ ಚಿಲಝರಿ ಹಾಗೂ ವೀರಾಪೂರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ಮೇಲೆ ಮಳೆ ನೀರು ನದಿಯಂತೆ ಹರಿದ ಪರಿಣಾಮ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಅಲ್ಲದೆ ರಸ್ತೆಯ ಬದಿಯ ಗಿಡಗಳು ಹಾಗೂ ಹೊಲದಲ್ಲಿ ಸಂಗ್ರಹಿಸಲಾಗಿದ್ದ ಮೇವಿನ ಬಣವೆಯು ಬಹುತೇಕ ಗಾಳಿಗೆ ಹಾರಿದ್ದು ರೈತನಿಗೆ ಸಾವಿರಾರು ರೂಪಾಯಿ ನಷ್ಟವನ್ನುಂಟು ಮಾಡಿದೆ. ಅಲ್ಲದೆ ಚಿಲಝರಿ ಗ್ರಾಮದಲ್ಲಿ ಮೂರು ಗುಡಿಸಲಿನ ಮೇಲಿನ ತಗುಡುಗಳು ಗಾಳಿಗೆ ಹಾರಿಹೋಗಿವೆ. ಹೀಗಾಗಿ ನಿವಾಸಿಗಳು ತೀವ್ರ ಪರದಾಡುವಂತಾಗಿತ್ತು.

*ಬಾಕ್ಸ್**
ಹಲವಾರು ದಿನಗಳಿಂದ ಗ್ರಾಮದಲ್ಲಿ ಗುಡುಗು ಸಿಡಿಲು ಸಹಿತ ಚಿಕ್ಕಪ್ರಮಾಣದಲ್ಲಿ ಮಳೆಯಾಗಿತ್ತಿತ್ತು. ಆದರೆ, ರವಿವಾರ ಸಂಜೆ ಸುರಿದ ಮಳೆಯಿಂದಾಗಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತದ ಜೊತೆಗೆ ವ್ಯಾಪಕ ಪ್ರಮಾಣದ ನಷ್ಟವಾಗಿದೆ. ಬಹಳಷ್ಟು ಕಂಬಗಳು ಬಾಗಿದ್ದು, ಈಗಲೋ ಆಗಲೋ ಬೀಳುವ ಹಂತದಲ್ಲಿವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿ ಪರಶೀಲಿಸಿ ದುರಸ್ಥಿಗೆ ಮುಂದಾಗಬೇಕು.

ಎಸ್.ಎಸ್.ಕಡಬಲಕಟ್ಟಿ, ಗ್ರಾಮ ಪಂಚಾಯ್ತಿ ಸದಸ್ಯ

“ಚಿಲ್‍ಝರಿ ಗ್ರಾಮದಲ್ಲಿ ರವಿವಾರ ಸಂಜೆ ಸುರಿದ ಮಳೆಯಿಂದಾಗಿ ಇಲಾಖೆಯ ಕಂಬಗಳು ಹಾಗೂ ಒಂದು ವಿದ್ಯುತ್ ಪರಿವರ್ತಕ ನೆಲಕ್ಕೆ ಬಿದ್ದಿರುವ ಮಾಹಿತಿ ತಿಳಿದ ತ್ಷಕಣವೇ ಒಂದು ಟಾಸ್ಕ ಪೋರ್ಸನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ನಾಳೆಯಿಂದ ದುರಸ್ಥಿ ಕಾರ್ಯವನ್ನು ಕೈಗೊಳ್ಳಲಾಗುವುದು.”
ವೀರೇಶ ರಾಜೂರು, ಹೆಸ್ಕಾಂ ಎಇಇ

loading...