ಸಿದ್ದರಾಮಯ್ಯ ಗೋಮುಖ ವ್ಯಾಘ್ರ ಆಗಬಾರದು: ಸಚಿವ ಸಿ.ಟಿ.ರವಿ

0
33

ಬೆಳಗಾವಿ: ರಾಜ್ಯದಲ್ಲಿ 99 ರಷ್ಟು ಕಬ್ಬಿನ ಬಾಕಿ ಹಣವನ್ನು ಪಾವತಿ ಮಾಡಲಾಗಿದೆ.84ಕೋಟಿ ರು. ಹಣ ಬಾಕಿ ಇದ್ದು ಶೀಘ್ರದಲ್ಲೇ ಪಾವತಿಸಲು ಸೂಚನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಹಾಗೂ ಸಕ್ಕರೆ ಸಚಿವ ಸಿ.ಟಿ.ರವಿ ಹೇಳಿದರು.

ಶನಿವಾರ ಬೆಳಗಾವಿ ಜಿಲ್ಲಾಧಿಕಾರಿ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ ಸರಕಾರ‌ ಬಂದ ಮೇಲೆ ಗೋ ರಕ್ಷಣೆ ಹೆಸರಿನಲ್ಲಿ ಹತ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪದ ಕುರಿತು ಮಾತನಾಡಿದ ಅವರು, ಗೋ ರಕ್ಷಣೆಯ ಹೆಸರಿನಲ್ಲಿ ಯಾರ ಯಾರ ಸರಕಾರದಲ್ಲಿ ಎಷ್ಟು ಹತ್ಯೆಯಾಗಿದೆ ಎಂದು ಸಿದ್ದರಾಮಯ್ಯ ಪಟ್ಟಿ ಕೊಡಲಿ. ಬೇಜವಾಬ್ದಾರಿ ಹೇಳಿಕೆ ನೀಡುವುದು ಅವರ ಸ್ಥಾನಕ್ಕೆ ಶೋಭೆ ತರುವುದಲ್ಲ.

ದೇಶದಲ್ಲಿ ಅಲ್ಲೊಂದು ಇಲ್ಲೊಂದು ಘಟನೆ ನಡೆದಿದೆ.ಪ್ರಧಾನಿ ಮೋದಿಯೇ ಇದನ್ನು ಖಂಡಿಸಿದ್ದಾರೆ. ಸಗಣಿ ಎತ್ತಿದ್ದವರಿಗೆ ಮಾತ್ರ ಭಾವನೆ ಇರಬೇಕು. ಅಂತಲ್ಲ‌.

ನಾನು, ವಿಪಕ್ಷ ನಾಯಕ ಇಬ್ಬರು ಸಗಣಿ ಎತ್ತಿದ್ದವರು. ಆದರೆ ನಮ್ಮ ಮನಸ್ಸು ರಕ್ಷಣೆ ಪರವಿದೆ‌. ಆದರೆ ಅವರ ಮನಸ್ಸು ಗೋ ಹತ್ಯೆ ಮಾಡೋವರ ಪರವಿದೆ.
ಅಧಿಕಾರ ಸಿಕ್ಕ ತಕ್ಷಣ ಗೋ ಮೇಲಿನ ಪ್ರೀತಿ ಬದಲಾವಣೆಯಾಗಬಾರದು.

ಹೀಗೆ ಬದಲಾವಣೆಯಾದರೆ ಗೋಮುಖ ವ್ಯಾಘ್ರ ವಾಗುತ್ತದೆ. ಸಿದ್ದರಾಮಯ್ಯ ಗೋ ಮುಖ ವ್ಯಾಘ್ರ ಆಗಬಾರದು.

ರಾಜ್ಯಕ್ಕೆ ಕೇಂದ್ರದಿಂದ ನ್ಯಾಯಯುತವಾದ ಪರಿಹಾರ ಸಿಗಲಿದೆ. ವಿಶ್ವಾಸ ಇದ್ದ ಮೇಲೆ ದೈರ್ಯದಿಂದ ಪ್ರಶ್ನೆ ಬರಲ್ಲ. ದೇಶದ ಜನರ ವಿಶ್ವಾಸದ ಮೇಲೆ ಪ್ರಧಾನಿ ನರೇಂದ್ರ ಮೋದಿ ಆಯ್ಕೆಯಾಗಿದ್ದಾರೆ‌.

ದೈರ್ಯಸ್ಥರು ಎಂದು ಭಾವಿಸೋದು ಸೈನಿಕರನ್ನು.‌ಮಾಧ್ಯಮದವರ ಮುಂದೆ ಬಾಯಿಗೆ ಬಂದಂತೆ ಮಾತನಾಡುವವರು ದೈರ್ಯವಂತರಲ್ಲ. ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಚಿವ ಸಿ.ಟಿ.ರವಿ.
ಪ್ರಧಾನಿ ನರೇಂದ್ರ ಮೋದಿ ಅವರು ಯಾವ ರಾಜ್ಯಕ್ಕೂ‌ ಮೋಸ ಮಾಡಿಲ್ಲ. ಮನಸ್ಥಿತಿ ಇರದವರು ಅನುಮಾನದಿಂದ ನೋಡುತ್ತಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇ ಬೇಕು. ಅದು ಆಗುವುದು ಶತಸಿದ್ದ. ನ್ಯಾಯಾಲಯ ತೀರ್ಪಿಗಾಗಿ ಕಾಯುತ್ತಿದ್ದೇವೆ.
ಹೆತ್ತವರ ಬಗ್ಗೆ ನಂಬಿಕೆ ಇಲ್ಲದವರು ರಾಮ ಮಂದಿರದ ಬಗ್ಗೆ ಸಾಕ್ಷಿ ಕೇಳುತ್ತಾರೆ.
ಉಮೇಶ ಕತ್ತಿ ಪ್ರತ್ಯೇಕ ರಾಜ್ಯ ಹೇಳಿಕೆ ವಿವಾರವಾಗಿ ಉತ್ತರಿಸಿದ ಅವರು, ಉಮೇಶ ಕತ್ತಿ ಅವರು ನಮ್ಮ ಸ್ನೇಹಿತರು ಆಗಾಗ ಹೇಳುತ್ತಿರುತ್ತಾರೆ. ಅವರು ಅಂದುಕೊಂಡಿದ್ದು ಆಗಿದೆಯಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವದಿ ಮುಗಿದ ಬಳಿಕ ಸಿಎಂ ಅಭ್ಯರ್ಥಿ ಯಾರು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸದ್ಯ ಖುರ್ಚಿ ಕಾಲಿಯಿಲ್ಲ ಎಂದು ಹೇಳಿದರು.

loading...