ಸಿದ್ದರಾಮ ಚರಿತ್ರೆ ಪುಸ್ತಕವನ್ನು ಮುಟ್ಟುಗೋಲು ಹಾಕುವಂತೆ ಒತ್ತಾಯಿಸಿ ಪ್ರತಿಭಟನೆ

0
82

ಗದಗ: ಕವಿ ರಾಘವಾಂಕ ವಿರಚಿತ ಸಿದ್ದರಾಮ ಚರಿತ್ರೆ ಕೃತಿಯನ್ನು ವಿಕೃತಗೊಳಿಸಿದ ಹೀನ ಮನಸುಗಳ ವಿರುದ್ದ ಹಾಗೂ ಪುಸ್ತಕವನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸಿ ಗದಗನಲ್ಲಿ ತೋಂಟದಾರ್ಯ ಮಠದ ಡಾ: ಸಿದ್ದಲಿಂಗ ಸ್ವಾಮೀಜಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ವೈಸ್ ಓವರ್: ಗದಗನ ತೋಂಟದಾರ್ಯ ಮಠದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಿದ್ದರಾಮ ಚರಿತ್ರೆಯ ಕೃತಿಯಲ್ಲಿ ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಇತರ ಶರಣರ ವಿರುದ್ದ ಅವಹೇಳನಕಾರಿ ಲೇಖನವನ್ನು ಪ್ರಕಟಿಸಿದ್ದರ ವಿರುದ್ದ ಕಠಿಣ ಕ್ರಮ ಕೈಕೊಳ್ಳುವಂತೆ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕವಿ ರಾಘವಾಂಕ ವಿರಚಿತ ಸಿದ್ದರಾಮ ಚರಿತ್ರೆ ಕೃತಿಯಲ್ಲಿ ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನ ಹಾಗೂ ಶಿವಶರಣೆ ಅಕ್ಕಮಹಾದೇವಿ ವಿರುದ್ದ ಅವಹೇಳನಕಾರಿ ಪುಸ್ತಕ ಪ್ರಕಟಿಸಿರುವುದು ಹೀನ ಮನಸ್ಸುಗಳ ವಿರುದ್ದ ಸರಕಾರ ಕೂಡಲೇ ಕ್ರಮಕೈಕೊಳ್ಳುವುದರ ಜೊತೆಗೆ ರಾಜ್ಯದಲ್ಲಿ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ತೋಂಟದಾರ್ಯ ಮಠದ ಡಾ: ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕವಿ ರಾಘವಾಂಕ ವಿರಚಿತ ಸಿದ್ದರಾಮ ಚರಿತ್ರೆ ಕೃತಿಯನ್ನು ಕೆಲವರು ಬಸವಣ್ಣ, ಅಕ್ಕಮಹಾದೇವಿಯ ಬಗ್ಗೆ ಹೀನವಾಗಿ ಅವಹೇಳನಕಾರಿಯಾಗಿ ಮುದ್ರಿಸಿರುವುದು ಸರಿಯಾದುದಲ್ಲ ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆಗಳಿದ್ದು ಕೂಡಲೇ ಸರಕಾರ ಅಂತವರ ವಿರುದ್ದ ಕಠಿಣ ಕ್ರಮ ಕೈಕೊಳ್ಳುವುದರ ಜೊತೆಗೆ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದರು.
ಡಾ: ಸಿದ್ದಲಿಂಗ ಸ್ವಾಮೀಜಿ ತೋಂಟದಾರ್ಯ ಮಠ ಗದಗ. ಪ್ರತಿಭಟನೆಯಲ್ಲಿ ಗದಗನ ಮಾಜಿ ಶಾಸಕ ಡಿ.ಆರ್.ಪಾಟೀಲ, ಲಿಂಗಾಯತ ಪ್ರಗತೀಶೀಲ ಸಂಘದ ಸದಸ್ಯರಾದ ಎಸ್.ಎಸ್.ಪಟ್ಟಣಶೆಟ್ಟರ, ಮೋಹನ ಅಲ್ಮೇಲಕರ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು.

loading...

LEAVE A REPLY

Please enter your comment!
Please enter your name here