ಸಿದ್ದುಗೆ ಇಂಜೆಕ್ಷನ್ ಕೊಟ್ಟ ಡಿಸಿಎಂ ಅಶ್ವಥ್ ನಾರಾಯಣ

0
40

 

ಬೆಳಗಾವಿ

ಸಿದ್ದರಾಮಯ್ಯ ನವರೆ ನಮಗೆ ಧಮ್ ಇದೆ. ಎಲ್ಲರಿಗೂ ಕೋವ್ಯಾಕ್ಸಿನ್ ನೀಡುತ್ತೇವೆ.‌ ಆ ಧಮ್ ಇದೆ ಎಂದು ಡಿಸಿಎಂ ಡಾ.ಅಶ್ವಥ ನಾರಾಯಣ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಶನಿವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ನಾವು ಎಲ್ಲರಿಗೂ ಕೊರೋನಾ ವ್ಯಾಕ್ಸಿನ್ ನೀಡುತ್ತೇವೆ.‌ಇದರಲ್ಲಿ ಯಾವುದೇ ಸಂದೇಹ ಇಲ್ಲ. ಸಿದ್ದರಾಮಯ್ಯನವರು ಧಮ್ ಬಗ್ಗೆ ಮಾತನಾಡುವುದು ಸರಿಯಲ್ಲ. ನಮಗೆ ಧಮ್ ಇದೆ ಎಂದು ಪ್ರತ್ಯುತ್ತರ ನೀಡಿದರು.

ವಿಜಯ ಶಾಸಕ ಬಸರಾಜ ಪಾಟಿಲ್ ಯತ್ನಾಳ ಅವರು ನಾಯಕತ್ವ ಬದಲಾವಣೆ ಹೇಳಿಕೆ ನೀಡಿರುವುದು ರಾಜ್ಯಾಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರಕ್ಕೆ ಪಕ್ಷ ಬದ್ದವಾಗಿದೆ.

ಬಹಳ ವರ್ಷದ ಬೇಡಿಕೆಯಾಗಿತ್ತು ರಾಣಿ ಚನ್ನಮ್ಮ ವಿವಿಗೆ ಸ್ವಂತ ಜಾಗೆ ಆಗಬೇಕು ಎಂದು ಇತ್ತು ಆದ್ದರಿಂದ ಸರಕಾರ ಶಿಕ್ಷಣಕ್ಕಾಗಿ ವಿಶೇಷ ಆದ್ಯತೆ ನೀಡಿ ಹಿರೇಬಾಗೇವಾಡಿಯ ಗುಡ್ಡದಲ್ಲಿ ವಿವಿ ಸ್ಥಾಪನೆಗೆ ಸರಕಾರ ಮುಂದಾಗಿದೆ. ಇದರಲ್ಲಿ ಯಾರೂ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ಶಿಕ್ಷಣ ದೊಡ್ಡ ವ್ಯತ್ಯಾಸ ಮಾಡುವುದು. ಎಲ್ಲಾ ಕ್ಷೇತ್ರದಲ್ಲಿ ಶಿಕ್ಷಣ ಬೇಕೆಬೇಕು. ಮಲ್ಟಿ ವಿಲೇಜ್ ಸ್ಕೀಮ್ ಗೆ ಎಲ್ಲ ಕಡೆಯೂ ನೀರು ಸರಬರಾಜು ಬೇಕು. ಇದರಲ್ಲಿ ರಾಜಕೀಯ ಮಾಡುವುದು ಬೇಡ. ಕ್ಯಾಂಪಸ್ ಮಾಡಲು ಸರಕಾರ ಬದ್ದವಾಗಿದೆ ಎಂದರು.

ಕಾನೂನುನಲ್ಲಿ ವಿವಿ ಎಲ್ಲಿ ನಿರ್ಮಾಣ ಮಾಡಬೇಕೆಂದು ನಿರ್ಣಯ ಮಾಡಿರುತ್ತದೆ. ಉನ್ನತ ಶಿಕ್ಷಣ ಮಾಡಲು ವಿದ್ಯಾರ್ಥಿಗಳಿಗೆ ಇದು ಸೂಕ್ತ ಸ್ಥಳ. ಕಿತ್ತೂರು ನಲ್ಲಿ ಏನೇನು ಬೇಕು ಅದನ್ನು ಮಾಡಲಾಗುವುದು ಎಂದರು.

ಆದಷ್ಟು ಬೇಗದಲ್ಲಿ ಇಲ್ಲಿ ಯುನಿವರ್ಸಿಟಿ ನೋಡಲು ಕಾತುರದಿಂದ ನೋಡುತ್ತಿದ್ದೇವೆ. ಸದ್ಯ 12 5ಎಕರೆ ಜಾಗೆ ಇದೆ. ಮುಂದೆ ರೈತರು ಜಾಗೆ ನೀಡಿದರೆ ಹೆಚ್ಷಿನ ಅನುಕೂಲವಾಗುತ್ತದೆ ಎಂದರು.

ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಬೆಳಗಾವಿ ನಾಯಕರ ಸಾಕಷ್ಟು ಶ್ರಮಿಸಿದ್ದಾರೆ.

loading...