ಸಿದ್ದು, ಡಿಕೆಶಿ ಚಿಲ್ಲರೆ ರಾಜಕಾರಣ ಬಿಡಲಿ: ಸಚಿವ ಶೆಟ್ಟರ್ ವಾಗ್ದಾಳಿ

0
21

 

ಬೆಳಗಾವಿ

ಮಾಜಿ‌ ಸಚಿವ ರಮೇಶ ಜಾರಕಿಹೊಳಿ ವೈಯಕ್ತಿಕ ವಿಚಾರದಲ್ಲಿ ಕೆಪಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಚಿಲ್ಲರೆ ರಾಜಕಾರಣ ಮಾಡುವುದ ಸರಿಯಲ್ಲ ಎಂದು ಬೃಹತ್ ಕೈಗಾರಿಕಾ ‌ಸಚಿವ ಜಗದೀಶ್ ‌ಶೆಟ್ಟರ್ ವಾಗ್ದಾಳಿ‌ ನಡಸಿದರು.

ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ‌ ಅವರು,

ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ನಿರಂತರವಾಗಿ ಫೋನ್ ಮೂಲಕ‌ ಮಾತನಾಡಿದ್ದೇನೆ. ಅವರು ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ. ಅವರು ಅಭೂತಪೂರ್ವ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ ಮಾನವೀಯತೆ ಇರಬೇಕು. ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಚಿಲ್ಲರೆ ರಾಜಕಾರಣ ಮಾಡಬಾರದು. ವಿಚಾರಣೆ ಹಂತದಲ್ಲಿದೆ. ಯಾರ ತಪ್ಪು, ಯಾರದ್ದು ಸರಿ ಎನ್ನುವುದು ಹೊರ ಬರುತ್ತದೆ. ಈ ರೀತಿಯಲ್ಲಿ ವಿಚಾರ, ನಡುವಳಿಕೆಯ ಬಗ್ಗೆ ಸಂಶಯ ಬರುತ್ತದೆ. ವೈಯಕ್ತಿಕ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹರಿಹಾಯ್ದರು.

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಂದಿನ ಸಚಿವರಾಗಿದ್ದ ಮೇಟಿ ಪ್ರಕರಣದಲ್ಲಿ ಸಿಐಡಿ ತನಿಖೆ ಮಾಡಿಸಿದ್ದರು. ಆಗ ಅವರಿಗೆ ಕ್ಲೀನ್ ಚೀಟ್ ನೀಡಿದ್ದಾರೆ. ನಮ್ಮ ಸರಕಾರದಲ್ಲಿ ಸಮಗ್ರ ತನಿಖೆ ನಡೆಸುತ್ತಿದೆ ಕಾಯಲಿ ಎಂದರು.

 

 

loading...