ಸಿಬ್ಬಂದಿ ನಿಯೋಜನೆ : ಜಿಲ್ಲಾಧಿಕಾರಿ -ಎಣಿಕೆ ಕೇಂದ್ರದ ಸುತ್ತ ಭಾರೀ ಭದ್ರತೆ

0
4

ಕನ್ನಡಮ್ಮ ಸುದ್ದಿ-ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೆÃತ್ರದ ಮತ ಎಣಿಕೆಯು ಮೇ. ೨೩ ರಂದು ಬೆಳಿಗ್ಗೆ ೦೮ ಗಂಟೆಯಿಂದ ನಗರದ ಗವಿಸಿದ್ಧೆÃಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು.

ನಗರದ ಎಣಿಕೆ ಕೇಂದ್ರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮತ ಎಣಿಕೆ ಕಾರ್ಯವು ಮುಕ್ತ, ಶಾಂತ ರೀತಿಯಿಂದ ಹಾಗೂ ನ್ಯಾಯಸಮ್ಮತವಾಗಿ ಕೈಗೊಳ್ಳಲು ಹಾಗೂ ಮತದಾನದ ಗೌಪ್ಯತೆಯನ್ನು ಕಾಪಾಡಲು ಸಹಕರಿಸಲು ಕೋರಲಾಗಿದೆ, ಕ್ಷೆÃತ್ರದಲ್ಲಿ ಎಂಟು ವಿಧಾನಸಭಾ ಕ್ಷೆÃತ್ರಗಳು ಬರಲಿದ್ದು ಪ್ರತಿ ವಿಭಾನಸಭಾ ಕ್ಷೆÃತ್ರದಲ್ಲಿ ೧೪ ಟೇಬಲ್‌ಗಳಲ್ಲಿ ಎಣಿಕೆ ನಡೆಯಲಿದೆ. ಮತ್ತು ಅಂಚೆ ಮತಗಳ ಎಣಿಕೆಯು ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ನಾಲ್ಕು ಟೇಬಲ್‌ಗಳಲ್ಲಿ ನಡೆಯಲಿವೆ. ಬೆಳಗ್ಗೆ ೭.೪೫ ಕ್ಕೆ ಎಲ್ಲಾ ವಿಧಾನಸಭಾ ಕ್ಷೆÃತ್ರಗಳ ಇವಿಎಂ ಭದ್ರತಾ ಕೊಠಡಿಗಳನ್ನು ತೆರೆಯಲಾಗುತ್ತದೆ. ಎಣಿಕೆ ಕೇಂದ್ರದೊಳಗೆ ಚುನಾವಣಾ ವೀಕ್ಷಕರು ಮತ್ತು ಚುನಾವಣಾಧಿಕಾರಿಗಳಿಗೆ ಮಾತ್ರ ಮೊಬೈಲ್ ತರಲು ಅವಕಾಶ ಇದ್ದು ಬೇರೆ ಯಾರಿಗೂ ಮೊಬೈಲ್‌ಗೆ ಅವಕಾಶ ಇರುವುದಿಲ್ಲ. ಎಣಿಕಾ ಕೇಂದ್ರಕ್ಕೆ ಆಗಮಿಸುವ ಎಲ್ಲಾ ಸಿಬ್ಬಂದಿ ಮತ್ತು ಅಧಿಕಾರಿಗಳು ಮತ್ತು ಏಜೆಂಟರು ತಮ್ಮ ಮೊಬೈಲ್‌ಗಳನ್ನು ಕೇಂದ್ರಕ್ಕೆ ತರಬಾರದೆಂದು ತಿಳಿಸಿದರು. ಒಟ್ಟು ಎಂಟು ಕ್ಷೆÃತ್ರಗಳಿಂದ ೧೭೩೬೧೧೮ ಮತದಾರರ ಪೈಕಿ ೬೦೬೨೮೧ ಪುರುಷ ಹಾಗೂ ೫೮೧೪೦೧ ಮಹಿಳಾ ಮತದಾರರು ಮತ್ತು ೮ ಇತರೆ ಸೇರಿ ೧೧೮೭೬೯೦ ಜನರು ಮತದಾನ ಚಲಾವಣೆಯಾಗಿತ್ತೆಂದರು. ಪ್ರತಿ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಅಂಚೆ ಮತಪತ್ರಗಳ ಎಣಿಕೆಗೆ ೦೪+೧, ವಿಧಾನಸಭಾ ಕ್ಷೆÃತ್ರದಲ್ಲಿನ ಎಣಿಕಾ ಟೇಬಲ್‌ಗಳಿಗೆ ೧೪*೮=೧೧೨ ಸೇರಿ ಒಟ್ಟು ೧೧೭ ಏಜೆಂಟರಗಳ ನೇಮಕ ಮಾಡಲಾಗಿದೆ. ಅಭ್ಯರ್ಥಿಗಳಿಗೆ ಹಾಗೂ ಮತ ಎಣಿಕಾ ಏಜೆಂಟರಿಗೆ ಊಟ, ಉಪಹಾರ ಹಾಗೂ ಚಹಾಗಳ ವ್ಯವಸ್ಥೆಯನ್ನು ಪಾವತಿ ಆಧಾರದ ಮೇಲೆ, ಮತ ಎಣಿಕಾ ಕೇಂದ್ರದ ಆವರಣದಲ್ಲಿರುವ ಕ್ಯಾಂಟೀನ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕಾ ಕೊಠಡಿಗಳು ಲೋಕಸಭಾ ಕ್ಷೆÃತ್ರಕ್ಕೆ ಒಳಪಡುವ ವಿಧಾನಸಭಾ ಕ್ಷೆÃತ್ರಗಳಾದ ರಾಯಚೂರು ಜಿಲ್ಲೆಯ ೫೮-ಸಿಂಧನೂರು, ೫೯-ಮಸ್ಕಿ ಹಾಗೂ ಕೊಪ್ಪಳ ಜಿಲ್ಲೆಯ ೬೧-ಕನಕಗಿರಿ, ಬಳ್ಳಾರಿ ಜಿಲ್ಲೆಯ ೯೨-ಸಿರಗುಪ್ಪ ಕ್ಷೆÃತ್ರಗಳ ಮತ ಎಣಿಕೆಯು ಗವಿಸಿದ್ಧೆÃಶ್ವರ ಮಹಾವಿದ್ಯಾಲಯದ ನೆಲ ಮಹಡಿಯಲ್ಲಿ ಹಾಗೂ ೬೦-ಕುಷ್ಟಗಿ, ೬೨- ಗಂಗಾವತಿ, ೬೩-ಯಲಬುರ್ಗಾ ಹಾಗೂ ೬೪-ಕೊಪ್ಪಳ ಕ್ಷೆÃತ್ರಗಳ ಮತ ಎಣಿಕೆಯು ಗವಿಸಿದ್ಧೆÃಶ್ವರ ಮಹಾವಿದ್ಯಾಲಯದ ಮೊದಲನೇ ಮಹಡಿಯಲ್ಲಿ ನಡೆಯಲಿದೆ.

ವ್ಯಾಪಕ ಭದ್ರತೆ, ಬಿಗಿ ಪೊಲೀಸ್ ಬಂದೋಬಸ್ತ : ಎಸ್ಪಿ ರೇಣುಕಾ ಸುಕುಮಾ : ಎಣಿಕೆ ಕೇಂದ್ರ ಮತ್ತು ಸುತ್ತ ಮುತ್ತಾ ಭಾರಿ ಭದ್ರತೆಯನ್ನು ಒದಗಿಸಲಾಗುತ್ತಿದ್ದು ಭದ್ರತಾ ವ್ಯವಸ್ಥೆಯಲ್ಲಿ (೪ ಟಿಯರ್ ಸೆಕ್ಯೂರೆಟಿ) ಇನ್ನೆರ್ ಕೇರ್: ಸಿಎಪಿಎಫ್ ಸೆಕ್ಷನ್, ಗೇಟ್: ಡಿಎಆರ್ ಪೊಲೀಸ್, ಪೆರಿಮೆಟರ್: ಸಿವಿಲ್ & ಆರ್ಮೆಡ್ ಪೊಲೀಸ್, ಒನ್ ಪ್ಲಾಟೂನ ಆಫ್ ಕೆಎಸ್‌ಆರ್‌ಪಿ. ತುಕಡಿಗಳಿರುತ್ತವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ರೇಣುಕಾ ಕೆ.ಸುಕುಮಾರ್ ತಿಳಿಸಿದರು. ಮೇ ೨೨ ರ ಸಂಜೆ ೬ ಗಂಟೆಯಿಂದ ಮೇ ೨೪ ರ ಬೆಳಗ್ಗೆ ೬ ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು ಈ ಅವಧಿಯಲ್ಲಿ ವಿಜಯೋತ್ಸವ, ಸಂಭ್ರಚಾರಣೆಗೆ ಅವಕಾಶ ಇರುವದಿಲ್ಲ, ಈ ಬಗ್ಗೆ ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರು, ಅಭ್ಯರ್ಥಿಗಳಿಗೂ ತಿಳಿಸಲಾಗುತ್ತದೆ ಹಾಗೂ ಮದ್ಯ ಮಾರಾಟವು ಇರುವುದಿಲ್ಲ ಎಂದರು.

ರೇಣುಕಾ ಸುಕುಮಾರ, ಎಸ್.ಎಸ್.ಹುಲ್ಲೂರು, ಜೆ,ಬಿ.ಮಜ್ಜಗಿ, ಶಿವಾನಂದ ವಾಲಿಕಾರ, ಸೋಮಶೇಖರ್ ಜುಟ್ಟಲ್, ರವಿ ಉಕ್ಕಂದ, ಧನಂಜಯಪ್ಪ, ನಾಗರಾಜ, ಶಿವುಕುಮಾರ ಇತರರು ಉಪಸ್ಥಿತರಿದ್ದರು.

loading...