ಸಿ.ಪಿ.ತೆರದಾಳಗೆ ಬೀಳ್ಕೊಡುಗೆ

0
4

ಗದಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಗದಗ ಬಸ್‌ನಿಲ್ದಾಣದಲ್ಲಿ ಸಾರಿಗೆ ನಿಯಂತ್ರಕರಾಗಿ ಸೇವಾ ನಿವೃತ್ತರಾದ ಸಿ.ಪಿ.ತೆರದಾಳ ಅವರಿಗೆ ಸಂಸ್ಥೆಯ ಕಾರ್ಮಿಕ ಸಂಘಟನೆಗಳು ಗದಗ ಹೊಸ ಬಸ್‌ನಿಲ್ದಾಣದ ಆವರಣದಲ್ಲಿ ಬಿಳ್ಕೊÃಡುವ ಸಮಾರಂಭವನ್ನು ಏರ್ಪಡಿಸಿದ್ದವು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವಿಭಾಗೀಯ ಸಂಚಲನಾಧಿಕಾರಿ ಬಸವಂತಪುರ ಅವರು ತೆರದಾಳ ಅವರ ಕಾರ್ಯವೈಖರಿಯನ್ನು ಬಣ್ಣಿಸಿ ಮಾತನಾಡಿದರು. ಕಾರ್ಮಿಕರು ತಮ್ಮ ಕರ್ತವ್ಯವನ್ನು ಅರಿತು ಕಾರ್ಯ ಮಾಡುವ ಮೂಲಕ ಸಂಸ್ಥೆಯ ಶ್ರೆÃಯೋಭಿವೃದ್ಧಿಗೆ ಶ್ರಮಿಸಬೇಕೆಂದರು.

ಪಿ.ಎಂ.ತೆರದಾಳ, ಅಖಿಲ ಕರ್ನಾಟಕ ರಾಜ್ಯ ರಸ್ತೆ ನೌಕರರ ಮಹಾಮಂಡಳದ ಅಧ್ಯಕ್ಷ ಬಿ.ಎಚ್.ರಾಮೇನಹಳ್ಳಿ, ಎ.ಐ.ಟಿ.ಯು.ಸಿ ಅಧ್ಯಕ್ಷ ಶಾಂತಣ್ಣ ಮುಳವಾಡ, ಪ್ರಧಾನ ಕಾರ್ಯದರ್ಶಿ ವೈ.ಆರ್.ಮಾಳವಾಡ ಹಾಗೂ ಮಹಾಮಂಡಳ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಅಂiÀÄ್ಯನಗೌಡ್ರ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಎಂ.ವೈ.ಮರಿಬಸಣ್ಣವರ, ಪಿ.ಎಚ್.ಬದಿ, ಎಚ್.ಎಸ್.ಕರಿಯಪ್ಪನವರ, ಬಿ.ಕೆ.ಕಮ್ಮಾರ, ಎಸ್.ಎಚ್.ಹಿತ್ನಳ್ಳಿ, ಎಸ್.ಎಚ್.ಸಂಶಿ ಸೇರಿದಂತೆ ಸಂಸ್ಥೆಯ ಕಾರ್ಮಿಕ ವರ್ಗ ಸಿಬ್ಬಂದಿ ಇದ್ದರು.

ಸೇವಾ ನಿವೃತ್ತ ಸಿ.ಪಿ.ತೆರದಾಳ ಹಾಗೂ ತೆರದಾಳ ದಂಪತಿಗಳನ್ನು ಸನ್ಮಾನಿಸಲಾಯಿತು. ಅಮೃತೇಶ ಹೊಸಳ್ಳಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

loading...