ಸುದ್ದಿಗೊಂದು ಚುಚ್ಚು ಮಾತು

0
34

ವಿಜಯ ದಶಮಿಯ ವೇಳೆಗೆ ಯಡಿಯೂರಪ್ಪ ಹೊಸ ಪಕ್ಷವನ್ನು ಕಟ್ಟಲಿದ್ದಾರೆ ಎಂದು ಹೇಳಲಾಗುತ್ತಿದೆ.                     -ಸುದ್ದಿ

ಇದನ್ನು ನೋಡಿದರೆ ಹುಚ್ಚು ಬಿಡದೆ ಮದುವೆ ಆಗುವುದಿಲ್ಲ ಮದುವೆಯಾಗದೆ ಹುಚ್ಚು ಬಿಡುವುದಿಲ್ಲ ಎಂಬ ಮಾತು ನೆನಪಿಗೆ ಬರುತ್ತದೆ. 

ಬರ ಉಂಟಾಗಿದ್ದರೂ ವಿದೇಶ ಪ್ರವಾಸಕ್ಕೆ ಹೊರಟು ನಿಂತ ಶಾಸಕರಿಗೆ ಸರಕಾರ ಆಶಾ ಭಂಗ ಮಾಡಿದೆ.

-ಸುದ್ದಿ

ಜನರು ತೊಂದರೆ ಅನುಭವಿಸಿದರೂ ಪರ್ವಾ ಇಲ್ಲ ನಾವು ಮಾತ್ರ ವಿದೇಶದಲ್ಲೇ ಹಾರಾಡಬೇಕು ಎಂಬ ಇವರ ಕನಸು  ಈಗ ಒಡೆದು ಹೋಗಿದೆ.

ಚಿತ್ರದುರ್ಗದಲ್ಲಿ ಮರಾಮಾರಿ ನಡೆಸಿದ್ದ ಕಾಂಗ್ರೆಸ್ ಣಾಯಕರು ಈಗ ಮಂಗಳೂರಿನಲ್ಲಿ ಅದೇ ರೀತಿಯ ಮಾರಾಮಾರು  ನಡೆಸಿದ್ದಾರೆ.                                                                                                              -ಸುದ್ದಿ

ಕೈ ನಾಯಕರ ಈ ವರ್ತನೆಯನ್ನು  ನೋಡಿದರೆ ಕೈ ನಾಯಕರು ತಾವು ಭಾಜಪದವರಿಗಿಂತ ಒಂದು ಹೆಜ್ಜೆ ಮುಂದೆ  ಇದ್ದೇವೆ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ.

ಸಣ್ಣಪುಟ್ಟ ಸಮಸ್ಯೆಗಳನ್ನು ತೆಗೆದುಕೊಂಡು ನ್ಯಾಯಾಲಯಕ್ಕೆ  ಬರಬೇಡಿ  ಎಂದು ನ್ಯಾಯಮೂರ್ತಿ ಶೈಲೇಂದ್ರ ಕುಮಾರ ಹೇಳಿದ್ದಾರೆ.                                           ಸುದ್ದಿ

ನ್ಯಾಯಾಲಯದ ಹೊರಗೆ ಪರಿಹರಿಸಿಕೊಳ್ಳುವ ಸಮಸ್ಯೆಗಳನ್ನು ನ್ಯಾಯಾಲಯಕ್ಕೆ ತರಬೇಡಿ ಎಂಬುದು ಅವರು ಬಯಕೆಯಾಗಿರಬಹುದು. 

ಶ್ರೀರಾಮಲು ಸಂಕಲ್ಪ ಯಾತ್ರೆಗಾಗಿ ಐದಯ ಕೋಟಿ ರೂಪಾಯಿಯ ಸುಸಜ್ಜಿತ ಬಸ್ ತರಿಸಲಾಗಿದೆ.                         -ಸುದ್ದಿ

ಹಣವನ್ನು ನೀರಿನಂತೆ ಬಳಸುವುದನ್ನು ಶ್ರೀ ರಾಮಲು ರೂಢಿ ಮಾಡಿಕೊಂಡಿರುವುದು ಕಂಡು ಬರುತ್ತದೆ.

ದೇವರಿಗಿಂತ ತಾಯಿ -ತಂದೆ ಮಿಗಿಲು ಎಂದು ಸಂಸದ ರಮೇಶ ಕತ್ತಿ ಹೇಳಿದ್ದಾರೆ.                                 – ಸುದ್ದಿ

ಆದರೆ ಇಂದಿನ ಯುವಕರು ತಂದೆ ತಾಯಿಗಳನ್ನು ಮನೆಯಿಂದ ಹೊರಗೆ ಹಾಕಿ ಕಾಣದ ದೇವರಿಗೆ ಕೈ ಮುಗಿಯುವ ಕಾರ್ಯ ಮಾಡುತ್ತಾರೆ.              ವಿಧಾನ ಸಭೆಯಲ್ಲಿ  ಮುಖ್ಯ ಮಂತ್ರಿಯಾಗಿದ್ದಾಗ ಯಡಿಯೂರಪ್ಪ ಮಾಡಿದ ಭಾಷಣದ ಪ್ರತಿಯನ್ನು ಸಿಬಿಐ ಅಧಿಕಾರಿಗಳು ಪಡೆದು ಕೊಂಡಿದ್ದಾರೆ.                                                                                – ಸುದ್ದಿ

ಎಲ್ಲ ಆಯಾಮಗಳಿಂದ ಯಡಿಯೂರಪ್ಪನವರ ವಿಚಾರಣೆ ಮಾಡುವುದು ಸಿಬಿಐ ದವರ ಉದ್ದೇಶವಾಗಿರಬಹುದು.

ಸಧ್ಯಕ್ಕೆ ಬಾಜಪದ ರಾಜ್ಯಾಧ್ಯಕ್ಷರ ನೇಮಕ ಇಲ್ಲವೆಂದು ಪಕ್ಷದ ಉನ್ನತ ಮೂಲಗಳು ಕಷ್ಟ ಪಡಿಸಿವೆ.

-ಸುದ್ದಿ

ಜೇನು ಹುತ್ತದಲ್ಲಿ ಕೈ ಹಾಕಿ ಜೇನು ನೋಣ ಕಡಿಸಿ ಕೊಳ್ಳುವುದು  ಬೇಡ ಎಂದು ಭಾಜಪ ನಾಯಕರು ಈ ನಿರ್ಧಾರಕ್ಕೆ ಬಂದಿರಬಹುದು.

 

loading...

LEAVE A REPLY

Please enter your comment!
Please enter your name here