ಸುಪ್ರೀಂ ಕೋರ್ಟ್ ಆರು ನ್ಯಾಯಮೂರ್ತಿಗಳಿಗೆ ಹೆಚ್ ೧ ಎನ್ ೧ ಸೋಂಕು; ಸಿಜೆಐ ಜೊತೆ ತುರ್ತುಸಭೆ

0
41

ನವದೆಹಲಿ:- ಹೆಚ್ ೧ ಎನ್ ೧ ಸೋಂಕು ದೇಶದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ದೇಶದ ಅತ್ಯುನ್ನತ ನ್ಯಾಯಸ್ಥಾನವಾಗಿರುವ ಸರ್ವೋಚ್ಛನ್ಯಾಯಾಲಯದ ಆರು ಮಂದಿ ನ್ಯಾಯಮೂರ್ತಿಗಳು ಈ ಮಾರಕ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲೇ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರೊಂದಿಗೆ ತುರ್ತು ಸಭೆ ನಡೆಸಿದರು.
ಹೆಚ್ ೧ ಎನ್ ೧ ಹರಡುತ್ತಿರುವುವ ಬಗ್ಗೆ ಪರಿಶೀಲನೆ ನಡೆಸಿದರು. ಈ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿರುವುದಾಗಿ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ತುರ್ತು ಪರಿಸ್ಥಿತಿಯಲ್ಲಿ ಕೈಕೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆಗಳನ್ನು ನೀಡುವಂತೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಗೆ ಮನವಿ ಮಾಡಿದ್ದಾಗಿ, ಸುಪ್ರೀಂ ಕೋರ್ಟ್ ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಲಸಿಕೆ ಹಾಕಿಸುವ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ದುಶ್ಯಂತ್ ದೇವ್ ಅವರನ್ನು ಭೇಟಿ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದೇವ್, ಸಿಜೆ ಐ ಎಸ್ ಎ ಬೊಬ್ಡೆ ಅವರು ಸೋಂಕು ಹರಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ವ್ಯಾಪ್ರತಿಯಲ್ಲಿ ಲಸಿಕೆ ಹಾಕಲು ಪ್ರತ್ಯೇಕ ಔಷಧಾಲಯ ಸ್ಥಾಪಿಸಲಾಗುವುದು ಎಂದು ಹೇಳಿದರು. ಕಾಶ್ಮೀರ ಮತ್ತು ಬೆಂಗಳೂರಿನಲ್ಲಿ ಇತ್ತೀಚಿನ ಹಂದಿ ಜ್ವರ ಪ್ರಕರಣಗಳು ವರದಿಯಾಗಿದ್ದವು. ಈಗ ದೆಹಲಿಗೂ ವೈರಸ್ ಹರಡಿದೆ.
ಬೆಂಗಳೂರಿನಲ್ಲಿರುವ ಜರ್ಮನಿ ಮೂಲದ ಸ್ಯಾಪ್ ಇಂಡಿಯಾ ಕಂಪನಿಯಲ್ಲಿ ಇಬ್ಬರು ಉದ್ಯೋಗಿಗಳಿಗೆ ಎಚ್ ೧ ಎನ್ ೧ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಭಾರತದಲ್ಲಿರುವ ತನ್ನ ಕಚೇರಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಿರುವ ಕಂಪನಿ, ನೌಕರರು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಿತ್ತು.

loading...