ಸುರೇಶ ಅಂಗಡಿಯವರ ಸದಸ್ಯತ್ವ ರದ್ದುಪಡಿಸಲು ಮನವಿ

0
20

ಘಟಪ್ರಭಾ, ನ.22: ಕನ್ನಡ ಹೋರಾಟಗಾರರಿಗೆ ಧೈರ್ಯವಿದ್ದರೆ ಮಹಾರಾಷ್ಟ್ತ್ರದಲ್ಲಿ ಲಿಕರ್ನಾಟಕ ರಾಜ್ಯಳಿ ಎಂಬ ನಾಮಫಲಕ ಹಾಕಿ ಎಂದು ಸವಾಲು ಹಾಕಿರುವ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರ ಎಂಇಎಸ್ ಪರ ನಿಲುವು ಖಂಡಿಸಿ ಅವರ ಸದಸ್ಯತ್ವ ರದ್ದು ಪಡಿಸುವಂತೆ ಆಗ್ರಹಿಸಿ ಇಂದು ಕರ್ನಾಟಕ ಯುವ ವೇದಿಕೆ ಘಟಪ್ರಭಾ ಘಟಕದ ಕಾರ್ಯಕರ್ತರು ಇಲ್ಲಿಯ ಮೃತ್ಯುಂಜಯ ವೃತ್ತದಲ್ಲಿ ಸುಮಾರು ಅರ್ಧ ಗಂಟೆಕಾಲ ಸಂಕೇಶ್ವರ – ಯರಗಟ್ಟಿ ಹೆದ್ದಾರಿ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟಣೆನಡೆಸಿದರು.

ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಯಳ್ಳೂರು ಕಂಗ್ರಾಳಿ ಅಂಬೆವಾಡಿ ಸೇರಿದಂತೆ ಹಲವಾರು ಗ್ರಾಮಗಳಿಗೆೆ ಸರ್ಕಾರದ ನಾಮ ಫಲಕಗಳ ಮೇಲೆ ಮಹಾರಾಷ್ಟ್ತ್ರ ನಾಮ ಫಲಕ ಅಳವಡಿಸಿದನ್ನು ಖಂಡಿಸಿದ್ದಕ್ಕೆ ಸಂಸದ ಸುರೇಶ ಅಂಗಡಿಯವರು ಎಂಇಎಸ್ ಪ್ರರ ಹೇಳಿಕೆಗಳನ್ನು ನೀಡಿ ಪ್ರಚೋದನೆ ನೀಡಿದಲ್ಲದೆ ಮಹಾಪೌರ ಮತ್ತು ಉಪ ಮಹಾಪೌರ ಸದಸತ್ವವನ್ನು ರದ್ದು ಮಾಡಲಾಗುವದಿಲ್ಲಾ ಎಂದು ಹೇಳಿ ಕನ್ನಡಿಗರನ್ನು ಕೆರಳಿಸುವಂತೆ ಮಾಡಿದ್ದಾರೆ.

ಕೂಡಲೇ ಅವರ ಸದಸ್ಯತ್ವವವನ್ನು ರದ್ದುಪಡಿಸಬೇಕೆಂದು ಕರ್ನಾಟಕ ಯುವ ವೇದಿಕೆ ಕಾರ್ಯಕರ್ತರು ಮನವಿಯಲ್ಲಿ ಆಗ್ರಹಿಸಿ ಪಿ.ಎಸ್.ಐ ಮುಖಾಂತರ ರಾಷ್ಟ್ತ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿ ಮಾತನಾಡಿದ ಘಟಪ್ರಭಾ ಪಿ.ಎಸ್.ಐ ರವಿಕುಮಾರ ಕಪ್ಪತ್ನವರ ಮನವಿಯನ್ನು ತಹಶೀಲ್ದಾರ ಮುಖಾಂತರ ರಾಷ್ಟ್ತ್ರಪತಿಗಳಿಗೆ ರವಾನಿಸಲಾಗುವದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಯುವ ವೇದಿಕೆಯ ತಾಲೂಕ ಅಧ್ಯಕ್ಷ ಅಬ್ರಾಹಂ ಜಾನ ವಡೆರಟ್ಟಿ,ಉಸ್ತುವಾರಿ ಅಧ್ಯಕ್ಷ ವಿರಣ್ಣಾ ಸಂಗಮ್ಮನವರ, ಉಪಾಧ್ಯಕ್ಷ ಸಂತೋಷ ಅರಳಿಕಟ್ಟಿ, ಘಟಪ್ರಭಾ ಘಟಕದ ಅಧ್ಯಕ್ಷ ರಾಜೆಸಾಬ ಮುಲ್ಲಾ,  ದಸ್ತಗೀರ ಮುಲ್ಲಾ, ಪುಂಡಲೀಕ ನಾವಿ, ಸುಧೀರ ಜೋಡಟ್ಟಿ, ಮಲ್ಲೇಶ ಕೋಳಿ,ಪ್ರಕಾಶ ಬಾಗೇವಾಡಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿರಿದ್ದರು.

 

 

loading...

LEAVE A REPLY

Please enter your comment!
Please enter your name here