ಸೆನ್ಸೆಕ್ಸ್ 145.34 ಅಂಕ ಇಳಿಕೆ

0
6

ಮುಂಬೈ: ಮುಂಬೈ ಷೇರು ಪೇಟೆ ಸೂಚ್ಯಂಕ ಸೋಮವಾರ 145 ಅಂಕ ಇಳಿಕೆ ಕಂಡು 36,324.09 ರಲ್ಲಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಸಹ 53.85 ಅಂಕ ಕುಸಿದು 10,839.80 ಯಲ್ಲಿತ್ತು.
ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 36,456.22 ಮತ್ತು 36,273.67.
ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 10,878.75 ಮತ್ತು 10,829.90.
ಹಣಕಾಸು, ಬ್ಯಾಂಕೆಕ್ಸ್‌, ಟೆಲಿಕಾಂ ವಲಯದಲ್ಲಿ ಸೂಚ್ಯಂಕ ಇಳಿಕೆ ಕಂಡು ಬಂದಿತ್ತು.
ಟಾಟಾ ಸ್ಟೀಲ್ ಶೇ. 3.79 ರಷ್ಟು ಇಳಿಕೆಯಾಗಿ ರೂ.455.45; ಇಂಡಸ್ ಬ್ಯಾಂಕ್ ಶೇ.2.77 ರಷ್ಟು ಇಳಿಕೆಯಾಗಿ ರೂ.1475.60, ಭಾರ್ತಿ ಏರ್‌ಟೆಲ್ ಶೇ.2.09 ಇಳಿಕೆಯಾಗಿ ರೂ.304.80 ಮತ್ತು ಯೆಸ್ ಬ್ಯಾಂಕ್ ಶೇ. 1.97 ಇಳಿಕೆಯಾಗಿ ರೂ 182 ರಷ್ಟಿತ್ತು.

ಓಎನ್‌ಜಿಸಿ ಶೇ.1.65 ರಷ್ಟು ಏರಿಕೆಯಾಗಿ ರೂ.144.40, ಹಿಂದ್ ಯೂನಿಲಿವರ್ ಶೇ.1.06 ಏರಿಕೆಯಾಗಿ ರೂ.1,815.35, ಬಜಾಜ್ ಆಟೊ ಶೇ. 0.92 ರಷ್ಟು ಏರಿಕೆಯಾಗಿ ರೂ.2,626.25 ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇ. 0.86 ರಷ್ಟು ಏರಿಕೆಯಾಗಿ ರೂ. 1258.05 ರಷ್ಟಿತ್ತು

loading...