ಸೋಂಕಿನ ಜಾಗೃತ ಮೂಡಿಸುವುದು ಅಗತ್ಯ: ಡಾ.ಸುಧಾಕರ

0
5

ಸಚಿವ ಡಾ. ಸುಧಾಕರಗೆ ಮಾಜಿ ಶಾಸಕ ಪಾಟೀಲ ಅವರು ಸನ್ಮಾನ
ಸೋಂಕಿನ ಜಾಗೃತ ಮೂಡಿಸುವುದು ಅಗತ್ಯ: ಡಾ.ಸುಧಾಕರ
ಬೆಳಗಾವಿ: ಗ್ರಾಮಾಂತರ ಜಿಲ್ಲೆಯ ಕಾರ್ಯಾಲಯಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ ಕೆ. ಸುಧಾಕರ ಅವರು ಭೇಟಿ ನೀಡಿದರು. ಈ ವೇಳೆ ಸಚಿವರಿಗೆ ಮಾಜಿ ಶಾಸಕ ಸಂಜಯ ಪಾಟೀಲ ಸನ್ಮಾನಿಸಿದರು.
ಸಚಿವ ಡಾ ಕೆ. ಸುಧಾಕರ ಅವರು ಮಾತನಾಡಿ, ರಾಜ್ಯದ ಅಭಿವೃದ್ಧಿ ಕಾರ್ಯಗಳಲ್ಲಿ ಸರಕಾರ ತಲ್ಲಿಣವಾಗಿದೆ. ಈ ಕೋವಿಡ್-೧೯ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಸರಕಾರ ಯಶಸ್ವಿ ಕಂಡಿದೆ. ಆದರೂ, ಸೋಂಕಿನ ಬೀತಿ ಇದೆ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಸಾರ್ವಜನಿಕರಿಗೆ ಅದರ ಬಗ್ಗೆ ಅರಿವು ಮೂಡಿಸಲು ಕ್ರಮಕೈಗೊಳ್ಳಬೇಕೆಂದು ಎಂದು ಸೂಚನೆ ನೀಡಿದರು.

ಮಾಜಿ ರಾಜ್ಯ ಸಭಾ ಸದಸ್ಯರು ಹಾಗೂ ಕೆ.ಎಲ್.ಇ.ಸಂಸ್ಥೆಯ ಕಾರ್ಯಾದ್ಯಕ್ಷ ಡಾ.ಪ್ರಭಾಕರ ಕೋರೆ, ಶಾಸಕ ಅನಿಲ ಬೆನಕೆ, ಜಿಲ್ಲಾ ಉಪಾಧ್ಯಕ್ಷರಾದ ಯುವರಾಜ ಜಾಧವ, ಪ್ರಧಾನ ಕಾರ್ಯದರ್ಶಿ ಮಹೇಶ ಮೋಹಿತೆ, ಸುಭಾಷ ಪಾಟೀಲ, ಹೇಮಂತ ಪಾಟೀಲ, ಕಾಚು ಸಾವಂತ, ಡಾ.ಗುರು ಕೋತಿನ, ಡಾ.ಸೋನಾಲಿ ಸರ್ನೋಬತ, ರಂಜನಾ ಕೋಲಕಾರ, ಮಲ್ಲಿಕಾರ್ಜುನ ಮಾದಮ್ಮನವರ, ದಿನೇಶ ಪಾಟೀಲ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

loading...