ಸೋಪಾ ಸೆಟ್‌ಗಾಗಿ ವಿವಾಹಿತೆ ಆತ್ಮಹತ್ಯೆ !

0
93

ಸೋಪಾ ಸೆಟ್‌ಗಾಗಿ ವಿವಾಹಿತೆ ಆತ್ಮಹತ್ಯೆ
ಬೆಳಗಾವಿ:
ವಿವಾಹಿತ ಯುವತಿಯೊರ್ವಳು ನೇಣಿಗೆ ಶರಣಾಗಿರುವ ದುರ್ಘಟನೆ ಬುಧವಾರ ತಾಲೂಕಿನ ಸುಳಗಾ ಗ್ರಾಮದಲಿ ಸಂಭವಿಸಿದೆ.
ತಾಲೂಕಿನ ಸುಳಗಾ ಗ್ರಾಮದ ನಿವಾಸಿ ಜ್ಯೋತಿ ಚೋಪ್ಡೆ (೧೯) ಮೃತ ಯುವತಿ. ಜ್ಯೋತಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ನಿಖಿಲ್ ಚೋಪ್ಡೆ ಅವರ ಜತೆಯಲ್ಲಿ ಮೂರು ತಿಂಗಳ ಹಿಂದಷ್ಟೇ ದಾಪಂತ್ಯ ಜೀವನಕ್ಕೆ ಕಾಲ ಇಟ್ಟಿದ್ದರು.

ಅದ್ಧೂರಿಯಾಗಿ ಮದುವೆ ಮಾಡಿಕೊಂಡ ಉಚಗಾಂವ ಮೂಲದ ದಂಪತಿಗಳು ಅನುನ್ಯವಾಗಿದ್ದರು. ಇದಾದ ಬಳಿಕ ತವರೂರಿಗೆ ಆಗಮಿಸಿದ ಜ್ಯೋತಿ ಸಮಯ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದಳು, ಸುಖ ಸಂಸಾರಲ್ಲಿ ಆತ್ಮಹತ್ಯೆಗೆ ಕಲಹ ಉಂಟಾಗಿರುವುದು ಸ್ಪಷ್ಟವಾಗಿಲ್ಲ. ತವರೂರಲ್ಲ ಉಳಿದ ಜ್ಯೋತಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣಿಗೆ ಕೊರಳೊಡಿದ್ದಾಳೆ.

ಯುವತಿ ಸಾವಿನ ಆಘಾತ ಕುಟುಂಬಸ್ಥರು, ಪ್ರದೇಶದ ಜನರನ್ನು ಆತಂಕಕ್ಕೆ ದೂರಿದೆ. ಯುವತಿಯ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕಾಕತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...