ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ: ಮೆಟಗುಡ್ಡ

0
35

ಬೈಲಹೊಂಗಲ 07: ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಕೆ.ಎಲ್.ಇ.ನಿರ್ದೇಶಕ ಬಾಬಣ್ಣ ಮೆಟಗುಡ್ಡ ಹೇಳಿದರು.
ಅವರು ಪಟ್ಟಣದ ಶೂರ ಸಂಗೊಳ್ಳಿ ರಾಯಣ್ಣ ಪೌಢಶಾಲೆ ಮೈದಾನದಲ್ಲಿ ಬುಧವಾರ ನಡೆದ ವಿಜಯ ಟ್ರೋಫಿ ಪೈನಲ್ ಪಂದ್ಯದಲ್ಲಿ ವಿಜೇತರಾದ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿ, ಯುವ ಪೀಳಿಗೆ ವ್ಯರ್ಥವಾಗಿ ಕಾಲಹರಣ ಮಾಡದೆ ಉತ್ತಮ ತರಬೇತಿ ಹೊಂದಲು ಇಂತಹ ಪಂದ್ಯಗಳು ಸಹಾಯಕಾರಿ ಎಂದರಲ್ಲದೇ ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದ್ದು ಯುವ ಪೀಳಿಗೆ ಕ್ರೀಡೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಚಿತ್ರನಟ ಶಿವರಂಜನ ಬೋಳನ್ನವರ, ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಗುರು ಮೆಟಗುಡ್ಡ, ಡಾ.ತೌಸೀಫ ಸಂಗೊಳ್ಳಿ ಮಾತನಾಡಿ, ಪಟ್ಟಣದ ಯುವಕರು ಇಂತಹ ಕ್ರಿಕೆಟ ಪಂದ್ಯಾವಳಿಗಳನ್ನು ಆಯೋಜಿಸಿ, ಯುವಕರಲ್ಲಿ ಕ್ರೀಡೆಗಳ ಬಗ್ಗೆ ಹುಮ್ಮಸ್ಸು ಹುಟ್ಟುವಂತೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದರು.
ಇಂಡಿಯನ್ಸ್ ಬಾಯ್ಸ 1 ಹಾಗೂ ಇಂಡಿಯನ್ ವಿನ್ನರ್ಸ ನಡುವೆ ನಡೆದ ರೋಚಕ ಪೈನಲ್ ಪಂದ್ಯದಲ್ಲಿ ಇಂಡಿಯನ್ಸ ಬಾಯ್ಸ 1 ತಂಡ ಜಯಗಳಿಸಿ ಪ್ರಥಮ ಬಹುಮಾನ 25.000 ರೂ ಗಳನ್ನು ಬಾಚಿತು, ಇಂಡಿಯನ್ ವಿನ್ನರ್ಸ ತಂಡವು ದ್ವಿತಿಯ ಸ್ಥಾನ ಗಳಿಸಿ 12.500 ಹಾಗೂ ಎಲೆವನ್ ಸೋಲ್ಜರ್ ತಂಡವು ಮೂರನೇ ಬಹುಮಾನ 7.500 ಪಡೆದುಕೊಂಡವು.
ಜಿಪಂ.ಸದಸ್ಯ ಅನಿಲ ಮೇಕಲಮರ್ಡಿ, ಪುರಸಭೆ ಸದಸ್ಯ ಮಹಾಂತೇಶ ತುರಮರಿ, ಸಂಘಟಕ ರವಿ ತುರಮರಿ, ಸುನೀಲ ಮರಕುಂಬಿ, ಆರ್.ಎಸ್.ಬ್ರಹ್ಮಾವರ ಹಾಗೂ ಸಾವಿರಾರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here