`ಸೌಲಭ್ಯವಂಚಿತ ಕಾಲೇಜ, ಪ್ರವೇಶಕ್ಕಾಗಿ ವಿದ್ಯಾರ್ಥಿನಿಯರ ಅಲೆದಾಟ,

0
6

`ಸೌಲಭ್ಯವಂಚಿತ ಕಾಲೇಜ, ಪ್ರವೇಶಕ್ಕಾಗಿ ವಿದ್ಯಾರ್ಥಿನಿಯರ ಅಲೆದಾಟ,

ಶೌಚಾಲಯ ಅವಾಂತರ, ೨೫ ವಿದ್ಯಾರ್ಥಿನಿಯರಿಗೆ ಕಿಡ್ನಿ ಸ್ಟೊÃನ್ | ಸ್ವಂತ ಜಾಗವಿಲ್ಲದೇ ೪ ವರ್ಷಪೂರೈಸಿದ ಕಾಲೇಜ
ಅಶೋಕ ಬಾ.ಮಗದುಮ್ಮ.
ಬೆಳಗಾವಿ: ನಗರದ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ವಿದ್ಯಾರ್ಥಿನಿಯರು ಪ್ರವೇಶ ಪಡೆದುಕೊಳ್ಳಲು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯ ಸರ್ದಾರ ಶಾಲೆಯ ವ್ಯಾಪ್ತಿಯಲ್ಲಿ, ವಿದ್ಯಾರ್ಥಿನಿಯರ ಕಾಲೇಜ ಮೂಲಭೂತ ಸೌಲಭ್ಯಗಳ ಕೊರತೆ ನಲುಗುತ್ತಿದ್ದರೂ. ಪಾಲಕರು, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಕಡುಬಿಸಿನಲ್ಲಿ ನಿಂತು, ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಸರಕಾರದ ಹಿತಾಸಕ್ತಿ ಕೊರತೆಯಿಂದ, ಬಡವಿದ್ಯಾರ್ಥಿಗಳ ಪಾಡು ಬೀದಿಗೆ ಬರುತ್ತಿವೆ.
೨೦೧೪-೧೫ ರಲ್ಲಿ ಆರಂಭವಾದ ಕಾಲೇಜ ಕೇವಲ ೧೧೨ ವಿದ್ಯಾರ್ಥಿನಿಯರು ಪ್ರವೇಶ ಪಡೆಯಲಾಗಿತ್ತು, ೨೦೧೯ ರ ವೇಳೆಗೆ ಸುಮಾರು ೫೪೨ ವಿದ್ಯಾರ್ಥಿನಿಯರು ಈ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಸಹ ಸರಕಾರದಿಂದ ಸೌಲಭ್ಯದಿಂದ ಕಾಲೇಜ ವಂಚಿತವಾಗಿದೆ.
ನಿವೇಶನ ಜಾಗಕ್ಕಾಗಿ ದಾನಿಗಳ ಮೊರೆ:- ಸರಕಾರದಿಂದ ಕೈತಪ್ಪಿದರೆ, ನಿವೇಶನ ಜಾಗಕ್ಕಾಗಿ ಸರಕಾರ ದಾನಿಮೊರೆಹೋಗುತ್ತಿದ್ದಾರೆ. ಶ್ರೆÃಷ್ಠದಾನಿಗಳು ನಿವೇಶನಕ್ಕೆ ಜಾಗ ದಾನದ ರೂಪದಲ್ಲಿ ನೀಡಿದರೆ. ಈ ಕಾಲೇಜನ ಸಂಪೂರ್ಣ ಜವಾಬ್ದಾರಿ ಸರಕಾರ ವಹಿಸಿಕೊಂಡು, ಕಾಲೇಜಿಗೆ ದಾನಿಗಳ ಹೆಸರನ್ನು ನಾಮಕರಣ ಮಾಡಲಾಗುವುದೆಂದು ಖುದ್ದಾಗಿ ಸಂಬ್ಬದ ಅಧಿಕಾರಿಗಳು ಶಿಕ್ಷಕರಿಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.
ಶೌಚಾಲಯ ಅವಾಂತರ, ವಿದ್ಯಾರ್ಥಿನಿಯರಿಗೆ ಕಿಡ್ನಿ ಸ್ಟೊÃನ್ : ಈಗಿರುವ ಸರ್ದಾರ ಸರಕಾರಿ ಶಾಲೆಯ ನೂರಾರೂ ವಿದ್ಯಾರ್ಥಿಗಳಿಗೆ ಶುಲಭ ಶೌಚಾಲಯದ ಕೊರತೆ ಕಾಡತೊಡಗಿದೆ. ಅದರಲ್ಲಿ, ಮಹಿಳಾ ಪದವಿ ಕಾಲೇಜಿನ ೫೦೦ ವಿದ್ಯಾರ್ಥಿನಿಯರಿಗೆ ಶೌಚಾಲಯ ಕಟ್ಟಡ ಇಲ್ಲದಿರುವದರಿಂದ ೨೦-೨೫ ವಿದ್ಯಾರ್ಥಿನಿಯರು ಕಿಡ್ನಿ ಸ್ಟೊÃನ್ ತೊಂದರೆಯಿಂದಾಗಿ ಅನುಭವಿಸಿ, ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಮಹಿಳಾ ಪದವಿಯಲ್ಲಿ ಕಲೆ, ವಾಣಿಜ್ಯ ವಿಷಯದ ಅನುಗುಣವಾಗಿ ೫೨೨ ವಿದ್ಯಾರ್ಥಿಗಳು ಓದುತ್ತಿದ್ದರೆ, ಇಲ್ಲಿರುವ ಅವವ್ಯಸ್ಥೆಕಂಡು ನೂರಾರೂ ವಿದ್ಯಾರ್ಥಿನಿಯರು ಪಾಲಕರಿಗೆ ದೂರು ನೀಡಿದ್ದಾರೆ. ಬಡತ್ತನದಲ್ಲಿ ಜೀವನ ಸಾಗಿಸುವ ಪಾಲಕರೂ, ಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರಿ ಕಾಲೇಜಗಳನ್ನು ಹುಡುಕುತ್ತಾರೆ ಹೊರತು, ಕಾಲೇಜ ಸೌಲಭ್ಯದ ಬಗ್ಗೆ ಗಮನ ಹರಿಸುವುದಿಲ್ಲ.
ನೀರಿನ ಕೊರತೆ: ಶುದ್ಧ ಕುಡಿಯುವ ನೀರಿಗಾಗಿ ಅಲ್ಲೆದಾಡುವÀ ಕಾಲದಲ್ಲಿ, ಕಾಲೇಜ ವಿದ್ಯಾರ್ಥಿನಿಯರಿಗಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ, ಮನೆಯಿಂದ ನೀರಿನ ಬಾಟಗಳನ್ನು ತಂದು ಸೇವಿಸಲಾಗುತ್ತಿದೆ. ಕಾಲೇಜ ಉದ್ದಕ್ಕೂ ಅವ್ಯವಸ್ಥೆ ತಾಂಡವಾಡುತ್ತಿದ್ದು. ಕಂಡಲ್ಲೆಲ್ಲ ಕಸದ ರಾಶಿ ತುಂಬಿಕೊಂಡಿದ್ದೆ.
ಶಿಥಿಲಗೊಂಡ ಗೊಡೆಗಳು : ಸರ್ದಾರ ಶಾಲೆ ಬಿಡುವಿನಂತರ, ಮಹಿಳಾ ವಿದ್ಯಾರ್ಥಿನಿಯರ ಶಾಲೆ ಪ್ರಾರಂಭವಾಗುವುದು. ಶಾಲೆಯ ಗೊಡೆಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಭಯದ ವಾತಾವರಣದ ಮಧ್ಯವೇ ವಿದ್ಯಾರ್ಥಿನಿಯರು ೫-೬ ಐಚ್ಚಿಕ ವಿಷಯ ವಿದ್ಯಾಭ್ಯಾಸ್ ಮಾಡುತ್ತಿದ್ದಾರೆ. ಶಾಲೆಯ ಮೇಲ್ಛಾವಣಿ ಹಾಳಾಗಿದ್ದು, ವಿದ್ಯಾರ್ಥಿಗಳ ಆಸನಗಳು, ಗೊಡೆಯ ಕಿಟಕಿ ಹಾಗೂ ಬಾಗಿಲಗಳು ಶಿಥಿಲಗೊಂಡಿವೆ.
ಕ್ರಿÃಡೆಗೂ ನೂರಾರೂ ಸಮಸ್ಯೆ: ಶಾಲೆಯ ಆವರಣದ ಆಟದ ಮೈದಾನ ಚಿಕ್ಕದಾಗಿದ್ದು, ಪದವಿ ವಿದ್ಯಾರ್ಥಿನಿಯರ ಕ್ರಿÃಡೆಗೆ ತೀರಾ ತೊಂದರೆ ಅನುಭವಿಸುತ್ತಿದ್ದಾರೆ. ಕ್ರಿÃಡೆಗೆ ಉತ್ತೆÃಜನ ನೀಡುವ ಸೌಲಭ್ಯವನ್ನು ಸರಕಾರ ವಿದ್ಯಾರ್ಥಿನಿಯರಿಗೆ ಒದಿಸಿಕೊಟ್ಟಿಲ್ಲ. ಇರುವ, ಆಟದ ಮೈದಾನಲ್ಲಿ ವರ್ಷದ ಕ್ರಿÃಡಾಕೂಟ ಸ್ಪರ್ಧೆಯನ್ನು ಆಡಲೂ ಸಾಧ್ಯವಾಗುತ್ತಿಲ್ಲ, ಇದರಿಂದ ವಿದ್ಯಾರ್ಥಿನಿಯರೂ ಆಟದಿಂದ ದೂರ ಉಳಿದುಕೊಂಡಿದ್ದಾರೆ.
ಈ ಕಾಲೇಜ ಕೊರತೆ ನಿಗಿಸಲು ಶಾಸಕ, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಈಗಿರುವ ಕಾಲೇಜನಲ್ಲಿಯಾದರೂ ಸೌಲಭ್ಯ ಕಲ್ಪಿಸಿದರೆ ಇನ್ನೂ ಹೆಚ್ಚಿನ ಪ್ರಯಾಣದಲ್ಲಿ ವಿದ್ಯಾರ್ಥಿನಿಯರೂ ಪ್ರವೇಶ ಪಡೆದುಕೊಳ್ಳತ್ತಾರೆ. ಈ ಕಾಲೇಜಿಗೆ ೧೧ ಶಿಕ್ಷಕರಿದ್ದೂ, ೨೫ ಅತಿಥಿಉಪನ್ಯಾಸಕರೂ ಇದ್ದಾರೆ. ಸೌಲಭ್ಯಗಳ ಕೊರತೆ ಬಿಟ್ಟರೆ, ಶಿಕ್ಷಕರ ಕೊರತೆಯಿಲ್ಲ. ಸರಕಾರ ನಿವೇಶನ ಜಾಗಕ್ಕಾಗಿ ಕಾಲೇಜ ಅಭಿವೃದ್ಧಿಯನ್ನು ತಡೆಹಿಡಿಲಾಗಿದ್ದು, ಇದರಿಂದ ವಿದ್ಯಾರ್ಥಿಗಳು ಅವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ್ ಮಾಡುವಂತಾಗಿದೆ.

ಬಾಕ್ಸ್===
ಸರಿಯಾಗಿ ಸೌಲಭ್ಯವಿಲ್ಲ, ಸರಕಾರ ಹಾಗೂ ದಾನಿಗಳು ನಿವೇಶಕ್ಕಾಗಿ ಜಾಗ ನೀಡಿದರೆ ಕಾಲೇಜಿಗೆ ದಾನಿಗಳ ಹೆಸರನ್ನು ನಾಮಕರಣ ಮಾಡಲಾಗುವುದು ಮೇಲಾಧಿಕಾರಿಗಳು ಹೇಳಿದ್ದಾರೆ. ವಿದ್ಯಾರ್ಥಿನಿಯರ ಪರಿಸ್ಥಿತಿ ಗಮನಿಸಿ, ಯಾರಾದರೂ ದಾನಿಗಳು ಮುಂದೆ ಬಂದು ಕಾಲೇಜ ನಿರ್ಮಾಣಕ್ಕಾಗಿ ಜಾಗ ನೀಡಬೇಕಾಗಿದೆ.

ಈಶ್ವರ ಚಂದ್ರ
ಪ್ರಾಚಾರ್ಯ ಮಹಿಳಾ ಸರಕಾರಿ ಕಾಲೇಜ, ಬೆಳಗಾವಿ.
೦೨—-೧
^^^^^^^^

loading...