ಸ್ತನಪಾನ ಮಾಡಿಸ್ತಾ ರ್ಯಾಂಪ್ ವಾಕ್ ಮಾಡಿದ್ಲು ಮಾಡೆಲ್

0
20

ಮಿಯಾಮಿ:ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಸ್ವಿಮ್ ಸೂಟ್ ಫ್ಯಾಷನ್ ಶೋನಲ್ಲಿ ಮಾಡೆಲ್ ಮಾರಾ ಮಾರ್ಟಿನ್ ದಂಗಾಗಿಸಿದ್ದಾಳೆ. ೩೦ ವರ್ಷದ ಮಾಡೆಲ್ ೫ ತಿಂಗಳ ಮಗುವಿಗೆ ಸ್ತನಪಾನ ಮಾಡಿಸ್ತಾ ಬಿಕನಿಯಲ್ಲಿ ರ್ಯಾಂಪ್ ವಾಕ್ ಮಾಡಿದ್ದಾಳೆ.ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಸ್ವಿಮ್ ಸೂಟ್ ನಿಯತಕಾಲಿಕೆ ಮಿಯಾಮಿ ಸ್ವಿಮ್ ವೀಕ್ ಸ್ಪರ್ಧೆ ನಡೆಸುತ್ತಿದೆ. ಇದ್ರಲ್ಲಿ ಆಯ್ಕೆಯಾದ ೧೬ ಮಾಡೆಲ್ ಗಳಲ್ಲಿ ಮಿಚಿಗನ್ ನಿವಾಸಿ ಮಾರ್ಟಿನ್ ಕೂಡ ಒಬ್ಬಳು. ಸ್ತನಪಾನ ಮಾಡಿಸ್ತಾ ಕ್ಯಾಟ್ ವಾಕ್ ಮಾಡಿದ ಮಾರ್ಟಿನ್ ನಿಯತಕಾಲಿಕಕ್ಕೆ ಧನ್ಯವಾದ ಹೇಳಿದ್ದಾಳೆ.ಫ್ಯಾಷನ್ ಶೋಗೂ ಮುನ್ನ ಮಾರ್ಟಿನ್ ಮಗಳೊಂದಿಗಿನ ಫೋಟೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಳು. ಸ್ತನಪಾನ ಮಾಡಿಸ್ತಿರುವ ಮಾರ್ಟಿನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಗತ್ತಿನ ಸುಂದರ ವಿಷ್ಯ ಇದು ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಕಮೆಂಟ್ ಮಾಡ್ತಿದ್ದಾರೆ.

loading...