ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ: ಶಾಸಕ ಬೊಮ್ಮಾಯಿ

0
4

ಶಿಗ್ಗಾವಿ: ಲೋಕಸಭಾ ಚುನಾವಣೆಯಲ್ಲಿ ಕಾಶ್ಮಿÃರದಿಂದ ಕನ್ಯಾಕುಮಾರಿವರೆಗೂ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವನ್ನು ಇನ್ನು ಐದು ವರ್ಷ ಸೇವೆ ಮಾಡಲು ಅವಕಾಶ ಕಲ್ಪ್ಪಿಸಿದ ಎಲ್ಲ ಮತದಾರರಿಗೂ ಹಾಗೂ ಧಾರವಾಡ ಕ್ಷೆÃತ್ರದ ಪ್ರಲ್ಹಾದ ಜೋಶಿಯವರಿಗೆ ಅತಿಹೆಚ್ಚಿನ ಮತಗಳ ಅಂತರದಿಂದ ಗೆಲವು ದೊರಕಿಸಿ ಕೊಟ್ಟ ತಮ್ಮೆಲ್ಲರಿಗೂ ವಂದನೆಗಳು ಅದೇ ರೀತಿಯ ಬೆಂಬಲವನ್ನು ಸ್ಥಳಿಯ ಪುರಸಭೆ ಚುನಾವಣೆಯಲ್ಲಿ ನೀಡುವಂತೆ ಶಾಸಕ ಬಸವರಾಜ ಬೊಮ್ಮಾಯಿ ವಿನಂತಿಸಿದರು.
ಪಟ್ಟಣದ ವಾರ್ಡ ೩ ರಲ್ಲಿ ಅರಳೇಶ್ವರ ಅವರ ಮನೆಯಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಸುನಿತಾ ಶಶಿಧರ ಯಲಿಗಾರ ಅವರ ವಾರ್ಡ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ೩ ಬಾರಿ ನನ್ನನು ಆಯ್ಕೆ ಮಾಡಿದ ನಿಮ್ಮ ಆರ್ಶೀವಾದದಿಂದ ನಾನು ಪ್ರಾಮಾಣಿಕವಾಗಿ ತಾಲೂಕಿನ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸಿದ್ದು, ನಮ್ಮೊಂದಿಗೆ ನಗರ ಅಭಿವೃದ್ದಿಯಲ್ಲಿ ಪುರಸಭೆ ಸದಸ್ಯರ ಪಾತ್ರ ಕೂಡಾ ತುಂಬಾ ಪ್ರಮೂಖವಾಗಿದ್ದು ನಿಮ್ಮ ನಿಮ್ಮ ವಾರ್ಡಗಳ ಅಭಿವೃದ್ದಿಗಾಗಿ ತಾವೆಲ್ಲರೂ ತಮ್ಮ ಅಮೂಲ್ಯ ಮತ ನೀಡುವ ಮೂಲಕ ಬಿಜೆಪಿಗೆ ಬೆಂಬಲ ನೀಡುವಂತೆ ವಿನಂತಿಸಿದರು. ಅರಳೇಶ್ವರ ಅವರು ಬಿಜೆಪಿ ಅಪೇಕ್ಷಿತರಾಗಿದ್ದರು ಅವರು ಯಾವುದೇ ಮನಸ್ಥಾಪವಿಲ್ಲದೇ ಸುನಿತಾ ಎಲಿಗಾರ ಅವರಿಗೆ ಬೆಂಬಲ ನೀಡಿ ತಮ್ಮ ಮನೆಯಲ್ಲಿ ಪ್ರಚಾರ ಸಭೆ ಏರ್ಪಡಿಸಿರುವದು ಅವರ ಪಕ್ಷ ಅಭಿಮಾನದ ಪ್ರತೀಕವಾಗಿದೆ ಎಂದು ಅಭಿನಂದಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ದೇವಣ್ಣ ಚಾಕಲಬ್ಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮ್ಯಾಗೇರಿ, ಗಂಗಣ್ಣ ಸಾತಣ್ಣವರ, ಶಶಿಧರ ಯಲಿಗಾರ, ವಾರ್ಡಿನ ಹಿರಿಯರು ಮಹಿಳೆಯರು ವಾರ್ಡ ಪ್ರಚಾರದಲ್ಲಿ ಇದ್ದರು.

loading...