ಸ್ಪರ್ದಾತ್ಮಕ ಪರೀಕ್ಷೆ ಎದುರಿಸಲು ಸಮಾಜದ ಯುವಕರಿಗೆ ಕರೆ ಡಾಃ ಜಿ.ರಮೇಶ

0
89

 

ಬಾಗಲಕೋಟ ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಎಲ್ಲ ರಂಗಗಳಲ್ಲಿಯೂ (ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ) ಅನೇಕ ಸವಾಲುಗಳಿಗೆ ಅವುಗಳನ್ನು ಎದುರಿಸಿ ಯಶಸ್ವಿಯಾಗಿ ಮುನ್ನಡೆದಾಗ ಮಾತ್ರ ನಾವು ಸಮಾಜದ ಅಭಿವೃದ್ಧಿಯೊಂದಿಗೆ ನಾವು ಮುಂದೆ ಬರಲು ಸಾಧ್ಯ ಎಂದು ಡಾಃ ಜಿ.ರಮೇಶ, ನಿವೃತ್ತ ಡಿ.ಐ.ಜಿ. ಬೆಂಗಳೂರುರವರು ದಿನಾಂಕ: 08/08/2015 ಶನಿವಾರದಂದು ತೋಟಗಾರಿಕೆ ವಿಶ್ವವಿದ್ಯಾಲಯ ಎದುರಗಡೆ ಇರುವ ಹೊಟೇಲ್ ಡ್ರೈವ್ ಇನ್ ನವನಗರ ಬಾಗಲಕೋಟ ಸಭಾಬವನದಲ್ಲಿ ಬಾಗಲಕೋಟ ಜಿಲ್ಲಾ ನೇಕಾರರ ಸಮಾಜದ ಸೇವಾ ಕೇಂದ್ರ ಇವರ ಆಶ್ರಯದಲ್ಲಿ ಜಿಲ್ಲೆಯ ನೇಕಾರರ ಅಭ್ಯರ್ಥಿಗಳಿಗೆ ಏರ್ಪಡಿಸಿರುವ ಎಸ್.ಡಿ.ಎ. ಎಫ್.ಡಿ.ಎ. ಸ್ಪರ್ದಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಸನ್ಮಾನ್ಯ ಶ್ರೀ. ವಿನಾಯಕ. ಜಿ. ಸೂಗೂರ, ಅಧೀಕ್ಷಕ ಅಭಿಯಂತರವರು ನಮ್ಮ ನೇಕಾರರ ಸಮಾಜದ ಆಧ್ಯ ವಚನಕಾರ ದೇವರ ದಾಸಿಮಯ್ಯನವರು ಎಲ್ಲ ಹಿಂದುಳಿದ ವರ್ಗಗಳ ಅಭಿವೃದ್ಧಿಗೋಸ್ಕರ ಹಾಗೂ ಗಂಡು ಹೆಣ್ಣು ಎಂಬ ಬೇದಬಾವ ಇಲ್ಲದೇ ಸರ್ವರಿಗೂ ಸಮಬಾಳು ಎಂದು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಅಂತಹ ಮಹಾಪುರುಷರ ವಚನಗಳನ್ನು ನಾವುಗಳು ಸರಿಯಾಗಿ ಅರ್ಥೈಸಿಕೊಂಡು ನಡೆದರೆ ಇನ್ನುಳಿದ ಸಮಾಜದ ಜನರಂತೆ ನಾವೂ ನಮ್ಮ ಸಮಾಜದ ಆಚಾರ ವಿಚಾರ, ಸಂಸ್ಕøತಿಯನ್ನು ಉಳಿಸಿ ಬೆಳಸುವ ಕೆಲಸವನ್ನು ಇಂದಿನ ಯುವಕರು ಮಾಡಬೇಕೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ಬಾಗಲಕೋಟ ಜಿಲ್ಲೆಯ ನೇಕಾರರ ನಾಯಕರಾದ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರು ನೂತನ ಬಿ.ಡಿ.ಸಿ.ಸಿ. ಬ್ಯಾಂಕ್ ಬಾಗಲಕೋಟಿನ ನಿರ್ದೇಶಕರಾದ ಡಾಃ ಎಂ.ಎಸ್.ದಡ್ಡೇನ್ನವರವರು ನಮ್ಮ ನೇಕಾರರ ಸಮುದಾಯಗಳ (ದೇವಾಂಗ, ಹಟಗಾರ, ಕುರುಹಿನಶೆಟ್ಟಿ, ಪದ್ಮಸಾಲಿ, ಪಟ್ಟಸಾಲಿ, ತೊಗಟವೀರ, ಶಿವಸಮಸಾಲಿ) ಜಿಲ್ಲೆಯಲ್ಲಿ ಈಗ ಸಂಘಟನೆ ಆದ ಪ್ರಯುಕ್ತ ಎಲ್ಲ ನೇಕಾರರ ಮುಖಂಡರು ಒಟ್ಟಾಗಿ ನನ್ನ ಗೆಲುವಿಗೆ ಶ್ರಮಿಸಿದ ಕಾರಣ ನಾನು ನಿರ್ದೇಶಕನಾದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಇದೇ ಸಂಘಟನೆಯೊಂದಿಗೆ ನಾವು ಜಿಲ್ಲೆಯಲ್ಲಿ ನಮ್ಮ ವಿದ್ಯಾವಂತ ಯುವಕರನ್ನು ಇಂದಿನ ಸ್ಪರ್ದಾತ್ಮಕ ಪರೀಕ್ಷೆಗೆ ಸಿದ್ಧಗೊಳಿಸಬೇಕಾಗಿದೆ. ಮುಂಬರುವ ದಿನಗಳಲ್ಲಿ ನಾವು ಕೆ.ಎ.ಎಸ್. ಐ.ಎ.ಎಸ್. ಸ್ಪರ್ದಾತ್ಮಕ ಪರೀಕ್ಷೆಗಳಿಗೆ ನಮ್ಮ ವಿದ್ಯಾವಂತ ಯುವಕ ಯುವತಿರಿಗೆ ತರಬೇತಿ ನೀಡಲು ಯೋಚಿಸಿದ್ದೇವೆ. ಕಾರಣ ಈಗ ಉದ್ಘಾಟನೆಗೊಂಡಿರುವ ಎಸ್.ಡಿ.ಎ. ಎಫ್.ಡಿ.ಎ. ಸ್ಪರ್ದಾತ್ಮಕ ಪರೀಕ್ಷೆಗಳ ಉಚಿತ ತರಬೇತಿಯನ್ನು ನಮ್ಮವರೇ ಆದ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಂದ ಸರಿಯಾದ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕೆಂದು ಹೇಳಿದರು.
ಸಮಾರಂಭದಲ್ಲಿ ಸಮಾಜ ಸೇವಾ ಕೇಂದ್ರದ ಪರವಾಗಿ ಹಾಗೂ ಬಿ.ಡಿ.ಸಿ.ಸಿ. ಬ್ಯಾಂಕ್ ಬಾಗಲಕೋಟ ಇದರ ನೂತನ ನಿರ್ದೇಶಕರಾದ ಡಾಃ ಎಂ.ಎಸ್.ದಡ್ಡೇನ್ನವರ ಅವರನ್ನು ಸನ್ಮಾನ್ಯಶ್ರೀ. ಡಾಃ ಜಿ.ರಮೇಶ, ಐ.ಪಿ.ಎಸ್., ನಿವೃತ್ತ ಡಿ.ಐ.ಜಿ. ಬೆಂಗಳೂರು ಹಾಗೂ ಸನ್ಮಾನ್ಯಶ್ರೀ. ವಿನಾಯಕ. ಜಿ. ಸೂಗೂರ, ಅಧೀಕ್ಷಕ ಅಭಿಯಂತರರು ಉಚಿತ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಸನ್ಮಾನ್ಯ ಶ್ರೀ. ಶ್ರೀನಿವಾಸ. ಎಸ್. ಬಳ್ಳಿ, ಸಿಂಡಿಕೇಟ್ ಸದಸ್ಯರು, ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಮತ್ತು ಸನ್ಮಾನ್ಯಶ್ರೀ. ಎಚ್.ವಾಯ್.ಗದ್ದನಕೇರಿ, ಕೆ.ಸಿ.ಎಸ್. ಮುಖ್ಯ ಆಡಳಿತಾಧಿಕಾರಿಗಳು, ಬಿ.ಡಿ.ಸಿ.ಸಿ. ಬ್ಯಾಂಕ್, ಬಾಗಲಕೋಟ ತರಬೇತಿ ಕಾರ್ಯಕ್ರಮದ ಮುಖ್ಯಸ್ಥರಾದ ಪ್ರೊ. ಶಿವಶಂಕರ. ಎನ್. ಮುತ್ತಗಿ, ಸನ್ಮಾನ್ಯಶ್ರೀ. ಎಸ್.ವ್ಹಿ.ವಚಡಾಪೂರ, ನಿವೃತ್ತ ಉಪನ್ಯಾಸಕರವರನ್ನು ಜಿಲ್ಲಾ ನೇಕಾರರ ಸಮಾಜ ಸೇವಾ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ. ಭಾಗ್ಯಶ್ರೀ. ಎಂ. ಹಂಡಿ ಹಾಗೂ ಕೇಂದ್ರದ ಖಜಾಂಚಿಯಾದ ಪ್ರವೀಣ. ಎಸ್. ಹೆರೂರ ಹಾಗೂ ಇನ್ನುಳಿದ ಎಲ್ಲ ಪದಾಧಿಕಾರಿಗಳಿಂದ ಸನ್ಮಾನಿಸಲಾಯಿತು.

ಪ್ರಾರ್ಥನೆ : ಶ್ರೀಮತಿ. ಇಂದಿರಾ.ಎನ್.ಹುಬ್ಬಳ್ಳಿ ಮತ್ತು ಶೈಲಾ.ಐ.ಹಂಡಿ
ಸ್ವಾಗತ : ಶ್ರೀಮತಿ. ಅನುರಾಧಾ. ಪಿ. ಜಿಡಗಿ
ಪ್ರಸ್ತಾವನೆ : ಶ್ರೀ. ಈರಣ್ಣ. ಎಸ್. ಚಲ್ಮಿ
ವಂದನಾರ್ಪಣೆ : ಶ್ರೀಮತಿ. ಭಾಗ್ಯಶ್ರೀ. ಎಂ. ಹಂಡಿ
ಕಾರ್ಯಕ್ರಮ ನಿರೂಪಣೆ : ಶ್ರೀ. ಕೆ.ಎಸ್.ಸೋಮನಕಟ್ಟಿ

loading...

LEAVE A REPLY

Please enter your comment!
Please enter your name here