ಸ್ಮಾರ್ಟ್‍ಸಿಟಿಯನ್ನು ಹಳ್ಳಹಿಡಿಸಿದ ಗುತ್ತಿಗೆದಾರ: ಬ್ಲಾಕ್ ಲಿಸ್ಟ್‍ಗೆ ಹಾಕ್ತಾರಾ ಎಂಡಿ ?

0
64

ಸ್ಮಾರ್ಟ್‍ಸಿಟಿಯನ್ನು ಹಳ್ಳಹಿಡಿಸಿದ ಗುತ್ತಿಗೆದಾರ: ಬ್ಲಾಕ್ ಲಿಸ್ಟ್‍ಗೆ ಹಾಕ್ತಾರಾ ಎಂಡಿ ?

ಬೆಳಗಾವಿ:
ಲಾಕ್‍ಡೌನ್ ತೆರವಾದ ಬಳಿಕ ರಾಜ್ಯದ ಸ್ಮಾರ್ಟ್‍ಟಿಸಿ ಕಾಮಗಾರಿಯಲ್ಲಿ ಬೆಳಗಾವಿ ಸ್ಮಾರ್ಟ್‍ಟಿಸಿ ಅಗ್ರಸ್ಥಾನಕ್ಕೆ ಏರಿದರೂ, ಗೋಗಟೆ ಕಾಲೇಜಿ ಎದುರಿನ ರಸ್ತೆ ಪಕ್ಕದ ಪೇವರ್ಸ್ ಕಿತ್ತು ಬೀದಿ ದೀಪ ಮುಗುಚಿ ಬಿದ್ದಿದೆ.
ಬೆಳಗಾವಿ ನಗರದಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಯಥೋಪಾದಿಯಲ್ಲಿ ಸಾಗುತ್ತಿವೆ. ಗುತ್ತಿಗೆದಾರರ ದಿವ್ಯನಿರ್ಲಕ್ಷ್ಯ ನಗರ ಸೌಂದರ್ಯ ಹೆಚ್ಚಿಸಬೇಕಿದ್ದ ಸ್ಮಾರ್ಟ್‍ಸಿಟಿಯನ್ನು ಕಳಪೆ ಕಾಮಗಾರಿಯಿಂದ ಕುರೂಪಿಯನ್ನಾಗಿ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನÀ ಮೇಲೆ ಸ್ಮಾರ್ಟ್‍ಸಿಟಿ ಅಧಿಕಾರಿಗಳು ಕ್ರಮಕೈಗೊಂಡು ಅವರನ್ನು ಬ್ಲಾಕ್ ಲಿಸ್ಟ್‍ಗೆ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

 

loading...