ಸ್ವಚ್ಛತಾ ಕಾರ್ಯಕ್ರಮ

0
34

ನರಗುಂದ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲಾ ಆವರಣದಲ್ಲಿ ಬುಧವಾರ ಕೊಣ್ಣೂರಿನ ಜೈ ಕಿಸಾನ ಸಾಂಸ್ಕೃತಿಕ ಹಾಗೂ ಜಾನಪದ ಕಲಾ ತಂಡದ ಸದಸ್ಯರು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಶಾಲಾ ಆವರಣದ ಸುತ್ತಲಿರುವ ಮುಳ್ಳಿನ ಜಾಲಿಕಂಟಿ ಹಾಗೂ ಕಸ ಕಡ್ಡಿಯನ್ನು ಸ್ವಚ್ಛತೆಗೊಳಿಸಿದರು. ಜೈ ಕಿಸಾನ ಕಲಾ ತಂಡದ ಅಧ್ಯಕ್ಷ ಪ್ರಕಾಶ ಚಂದನ್ನವರ, ಪಿ.ಕೆ.ಕಡ್ಡಿ, ಶಂಕರ ಕಡ್ಡಿ, ಬಸವರಾಜ ವಾಸನ, ಎಸ್‌ಡಿಎಂಸಿ ಅಧ್ಯಕ್ಷ ಗೂಳಪ್ಪ ಚಂದನ್ನವರ, ಮಾಂತೇಶ ಕುಂದರಗಿ, ಕೃಷ್ಣ ವಾಸನ, ಈರಣ್ಣ ನರಗುಂದ ಅನೇಕರು ಹಾಜರಿದ್ದರು.

loading...