ಸ್ವಚ್ಛಮೇವ ಜಯತೆ ಜಾಗೃತಿ ವಾಹನಕ್ಕೆ ಚಾಲನೆ

0
13

 

ಖಾನಾಪುರ: ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ಬುಧವಾರ ಸ್ಥಳೀಯ ತಾಲೂಕು ಪಂಚಾಯ್ತಿ ವತಿಯಿಂದ ಆಯೋಜಿಸಿದ್ದ ಸ್ವಚ್ಛಮೇವ ಜಯತೆ ಜಾಗೃತಿ ವಾಹನಕ್ಕೆ ಶಾಸಕಿ ಡಾ.ಅಂಜಲಿ ನಿಂಬಾಳಕರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೆÃಶಿಸಿ ಮಾತನಾಡಿದ ತಾಪಂ ಇಒ ಲಕ್ಷö್ಮಣರಾವ್ ಯಕ್ಕುಂಡಿ, ಜುಲೈ ೧೦ರವರೆಗೆ ಪ್ರತಿನಿತ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸ್ವಚ್ಛಮೇವ ಜಯತೆ ಜಾಗೃತಿ ವಾಹನ ಸಂಚರಿಸಲಿದೆ. ತಾಲೂಕಿನ ಪ್ರತಿಯೊಂದು ಗ್ರಾಮಕ್ಕೆ ಈ ವಾಹನ ಭೇಟಿ ನೀಡಲಿದ್ದು, ಗ್ರಾಮಸ್ಥರಲ್ಲಿ, ಗ್ರಾಮದ ಶಾಲೆಗಳ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಶಿವಾನಂದ ಉಳ್ಳೆÃಗಡ್ಡಿ, ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗುರುರಾಜ ಮನಗೂಳಿ, ಸಹಾಯಕ ಕೃಷಿ ನಿರ್ದೇಶಕ ಡಿ.ಬಿ ಚವಾಣ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಹಾದಿಮನಿ, ತಾಪಂ ಅಧ್ಯಕ್ಷೆ ನಂದಾ ಕೊಡಚವಾಡಕರ ಸೇರಿದಂತೆ ತಾಲೂಕಿನ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

loading...