ಸ್ವಾತಂತ್ರ್ಯ ಚಳುವಳಿಗೆ ಬೆಳಗಾವಿ ಬಳುವಳಿ

0
53

ಬೆಳಗಾವಿ ಜ.11 ಮುಂದಿನ ಪೀಳಿಗೆಯವರು ರಾಯಣ್ಣನ ಆದರ್ಶ ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡರೆ; ಈ ವಿಚಾರ ಸಂಕಿರಣ ಸಾರ್ಥಕವಾಗುವುದು. ಸದಾಶಿವ ವಡೆಯರ್‍ರವರ ಕಿತ್ತೂರು ಚೆನ್ನಮ್ಮ ಕೃತಿಯಲ್ಲಿ ಶ್ರೇಷ್ಠ ಹಾಗೂ ಕೆಟ್ಟ ಅಂಶಗಳು ಬಂದಿವೆ. ಕಿತ್ತೂರಿನ ಮೂಲ ಸಂಸ್ಥಾಪಕರು ಶಿವಮೊಗ್ಗದ ಸಾಗರದ ಕಡೆಯವರು ಆಗಿರದೇ ಗುಲ್ಬರ್ಗ ಕಡೆಯ `ಸಗರ’ ನಾಡಿನಿಂದ ಬಂದವರು. ಕಿತ್ತೂರು ಸಂಸ್ಥಾನ ಉದಯವಾದಾಗ ಶಿವಮೊಗ್ಗದ ಸಾಗರ ಇರಲೇ ಇಲ್ಲ. ಪ್ರಯುಕ್ತ ವಿಚಾರ ಸಂಕಿರಣಗಳಲ್ಲಿ ಸರಿಯಾದ ಚರಿತ್ರೆ ಬರಬೇಕೆಂದು ನಾಡಿನ ಹಿರಿಯ ವಿದ್ವಾಂಸರಾದ ಪ್ರೊ.ಜ್ಯೋತಿ ಹೊಸೂರರವರು ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತ;

ವಿವಿಧ ಉತ್ಸವಗಳಿಗೆ ಮಂಜೂರಾದ ಅನುದಾನದಲ್ಲಿ ಶೇ 25 ಮೊತ್ತವನ್ನು ಸಂಶೋಧನಾ ಕೃತಿಗೆ ಮೀಸಲಿಡಬೇಕು. ವಿಚಾರ ಸಂಕಿರಣದ ವಿದ್ವಾಂಸರ ಉಪನ್ಯಾಸಗಳು ದಾಖಲೆಯಾಗಬೇಕು. ರಾಯಣ್ಣನ ಜೊತೆಗಾರರಿಗೆ ಗಲ್ಲುಶಿಕ್ಷೆ ಹಾಗೂ ಅಂಡಮಾನಕ್ಕೆ ಕರಿನೀರಿನ ಶಿಕ್ಷೆಗೆ ಒಳಗಾದರು. ಇವರ ಹೆಸರು ಊರು ಎಲ್ಲರಿಗೂ ಗೊತ್ತಿದೆ. ಆದರೆ ಪ್ರಚಾರದಲ್ಲಿಲ್ಲ. ಇಂದಿನ ಪೀಳಿಗೆ ಇವರನ್ನು ಗುರುತಿಸಬೇಕು. ಇಂದಿನ ಶೇ. 70 ಇತಿಹಾಸ ದೋಷಪೂರ್ಣವಾಗಿದೆ. ಹೋರಾಡಿದ ಮತ್ತು ಮೃತಪಟ್ಟ ಜನಸಾಮಾನ್ಯರು ರಣಭೂಮಿಯಲ್ಲಿದ್ದರೆ ಹೋರಾಟಕ್ಕೆ ಕುಮ್ಮಕ್ಕು ನೀಡಿದವರು ಮನೆಯಲ್ಲಿ ಆರಾಮವಾಗಿ ಕುಳಿತಿದ್ದರು. 35 ವರ್ಷ ಬದುಕಿದ್ದ ರಾಯಣ್ಣ ಇಂದಿನ ಯುವರಿಕಗೆ ಸ್ಫೂರ್ತಿ. ಸಂಗೊಳ್ಳಿ ರಾಯಣ್ಣನ ಉತ್ಸವದ ಪ್ರಯುಕ್ತ ಬೆಳಗಾವಿಯಲ್ಲಿ ವಿಚಾರ ಸಂಕಿರಣ ಏರ್ಪಡಿಸಿದ್ದು ಅರ್ಥಪೂರ್ಣವಾಗಿದ್ದು, ಜಿಲ್ಲೆಯಾದ್ಯಂತ ಉತ್ಸವದ ಮುನ್ನಾ ದಿನ ವಾತಾವರಣ ಬೆಳೆದಿದೆ. ಎಂದರು.
ರಾಣಿ ಚೆನ್ನಮ್ಮ ವಿ.ವಿ. ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಡಾ ಎಸ್.ಎಂ.ಗಂಗಾಧರಯ್ಯನವರು ಆಶಯ ನುಡಿ ಹೇಳುತ್ತ ಪರದೆಯ ಹಿಂದಿದ್ದ ಸಂಗೊಳ್ಳಿ ರಾಯಣ್ಣ ಇತ್ತೀಚೆಗೆ ಬೆಳಕಿಗೆ ಬರುತ್ತಿದ್ದಾನೆ. ಆದರೂ ಇನ್ನೂ ಶಿಸ್ತುಬದ್ಧ ಹಾಗೂ ಶಾಸ್ತ್ರೀಯ ಅಧ್ಯಯನವಾಗಬೇಕು. `ಕಿತ್ತೂರು’ ಸಂಶೋಧಕರಿಂದ ನಿರ್ಲಕ್ಷಕ್ಕೆ ಒಳಗಾಗಿದೆ. ನಾವು ಚರಿತ್ರೆ ಮರೆಯುವವರು. ಚರಿತ್ರೆ ಬರೆಯುವವರಲ್ಲ. ರಾಣಿ ಚೆನ್ನಮ್ಮ ವಿ.ವಿ.ಒಂದು ಹೆಜ್ಜೆ ಮುಂದಿಟ್ಟು ಜಿಲ್ಲೆಯ ಚರಿತ್ರೆ ಕುರಿತು ಅಧ್ಯಯನ ಪೀಠ ಸ್ಥಾಪಿಸುವಲ್ಲಿ ಗಮನ ಹರಿಸಿದೆ. ಚರಿತ್ರೆಯ ಹುಡುಕಾಟ ಆರಂಭವಾಗಿದ್ದು, ವಾಸ್ತವ ಸಂಗತಿಗಳನ್ನು ಹೆಕ್ಕಿ ತೆಗೆಯುವಲ್ಲಿ ವಿಶ್ವವಿದ್ಯಾಲಯ ಕಾಳಜಿ ವಹಿಸಿದೆ ಎಂದರು.
ಬೆಳಗಾವಿ ರಾಣಿ ಚೆನ್ನಮ್ಮ ವಿ.ವಿ.ಸಹಾಯಕ ಪ್ರಾಧ್ಯಾಪಕರಾದ ಡಾ. ಗಜಾನನ ನಾಯ್ಕರವರು `ಕಿತ್ತೂರು ಸಂಗ್ರಾಮದಲ್ಲಿ ರಾಯಣ್ಣನ ಪಾತ್ರ’ ಕುರಿತು ಉಪನ್ಯಾಸ ನೀಡಿ ಕಿತ್ತೂರು ಹೋರಾಟದಲ್ಲಿ ರಾಯಣ್ಣ ಪಾತ್ರ ಮಹತ್ತರವಾಗಿದೆ. ಚೆನ್ನಮ್ಮಾಜಿ ಬಂಧಿತಳಾದ ನಂತರ ಕ್ರಾಂತಿಗಿಳಿದ ರಾಯಣ್ಣ ತನ್ನ ಸೈನಿಕರ ಖರ್ಚು ವೆಚ್ಚಕ್ಕಾಗಿ ಬೀಡಿ, ಸಂಪಗಾವಿÀ ಖಾನಾಪುರ ಲೂಟಿ ಮಾಡಿ ಸಾವಿರಾರು ರೂ. ತರುತ್ತಿದ್ದ. ಛತ್ರಪತಿ ಶಿವಾಜಿ ಗೆರಿಲ್ಲಾ ಸಮರದಲ್ಲಿ ನಿಪುಣನಾದಂತೆ ರಾಯಣ್ಣನು ಇದೇ ಸಮರ ನೀತಿಯಲ್ಲಿ ನಿಪುಣನಾಗಿದ್ದ. ಒಂದು ಕಡೆ ಬರುತ್ತೇನೆ ಎಂದು ಹೇಳುವುದು; ಆದರೆ ಬೇರೆ ಕಡೆ ಹೋಗಿ ವೈರಿಗಳನ್ನು ಸದೆ ಬಡಿಯುತ್ತಿದ್ದ. 1830ರ ಡಿಸೆಂಬರ 30ರಂದು ರಾಯಣ್ಣನಿಗೆ ಗಲ್ಲುಶಿಕ್ಷೆ ತೀರ್ಮಾನವಾಯಿತು. ಆದರೆ ಜನೇವರಿ 26ಕ್ಕೆ ಹೇಗೆ ಈ ಶಿಕ್ಷೆ ಅನುಷ್ಠಾನವಾಗುವುದಕ್ಕೆ ಸಾಧ್ಯ? 26 ದಿನಗಳ ಕಾಲ ಹೇಗೆ ರಕ್ಷಿಸಿದರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಇನ್ನಷ್ಟು ಸಂಶೋಧನೆಗಳಾಗಬೇಕು. ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಯ.ರು.ಪಾಟೀಲರವರು `ಸ್ವಾತಂತ್ರ್ಯ ಚಳುವಳಿಗೆ ಬೆಳಗಾವಿ ಬಳುವಳಿ’ ಕುರಿತು ಮಾತನಾಡುತ್ತ ದೇಶದ ಸ್ವಾತಂತ್ರ್ಯ ಚಳುವಳಿಗೆ ಬೆಳಗಾವಿ ಕೊಡುಗೆ ಅಪೂರ್ವ ಮತ್ತು ಅನನನ್ಯವಾಗಿದ್ದು; 1824ರ ಕಿತ್ತೂರು ವಿಜಯೋತ್ಸವ ಮತ್ತು ಪರಿಣಾಮ ಒಂದು ಕಾಲಘಟ್ಟವಾದರೆ, 1924ರಲ್ಲಿ ಮಹಾತ್ಮಾ ಗಾಧೀüಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಜರುಗಿದ 39ನೇ ಕಾಂಗ್ರೆಸ್ ಅಧಿವೇಶನ ಮತ್ತು ಪರಿಣಾಮ ಇನ್ನೊಂದು ಕಾಲಘಟ್ಟವಾಗಿದೆ. ಎರಡೂ ಸಂದರ್ಭದಲ್ಲಿ ಜಿಲ್ಲೆಯ ಜನ ದೇಶದ ಸ್ವಾತಂತ್ರ್ಯ ಚಳುವಳಿಗೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆಂದು ಹೇಳುತ್ತ `ಜಿಲ್ಲೆಯ ಸಂಸ್ಥಾನ ಹಾಗೂ ಹೋರಾಟಗಳ ಕುರಿತು ಸಂಶೋಧನೆ ಬಂದಿಲ್ಲವೆಂದು ಹೇಳುವುದು ಇಂದಿನ ಫ್ಯಾಶನ್ ಆಗಿದೆ. ಆದರೆ ರಾಶಿಗಟ್ಟಲೆ ಬಂದ ಕೃತಿಗಳನ್ನು ಯಾರು ಓದಿದ್ದೀರಿ? 4-5 ವರ್ಷಗಳ ಕಿತ್ತೂರು ವಿಚಾರ ಸಂಕಿರಣದಲ್ಲಿ ವಿದ್ವಾಂಸರು ಮಂಡಿಸಿದ ಉಪನ್ಯಾಸಗಳನ್ನು 2013ರಲ್ಲಿ ಜಿಲ್ಲಾಡಳಿತ `ಕಿತ್ತೂರು ಅಂದು-ಇಂದು’ ಕೃತಿ ತಂದಿದ್ದು ಯಾರಿಗೆ ಗೊತ್ತಿದೆ ಎಂದು ಪ್ರಶ್ನಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಹನುಮಂತಪ್ಪ ಸಂಜೀವಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಎಸ್.ಓ. ಹಲಸಗಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮರೆತು ಹೋದ ನೆಲದ ನೈಜ ಇತಿಹಾಸ ನೆನಪು ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ. ಸರಿಯಾದ ಇತಿಹಾಸವಿದ್ದರೆ ಯಾರೂ ತಪ್ಪು ಮಾಡಲಾರರು, ಇಂತಹ ಸಂಕಿರಣಗಳು ವಿದ್ಯಾರ್ಥಿಗಳಿಗೆ ಉಪಯುಕ್ತ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಪುಸ್ತಕಪ್ರೀತಿ ಹುಟ್ಟಿಸುವ ದಿಸೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಯ.ರು.ಪಾಟೀಲರವರ ವೈಯಕ್ತಿಕ ಸಹಯೋಗದಲ್ಲಿ ಪುಸ್ತಕ ಮಾರಾಟ ಹಾಗೂ ಪ್ರದರ್ಶನ ಏರ್ಪಡಿಸಲಾಗಿತ್ತು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕು. ವಿದ್ಯಾವತಿ ಭಜಂತ್ರಿಯವರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ನಿವೃತ್ತ ಶಿಕ್ಷಣಾಧಿಕಾರಿ ದೊಡ್ಡಕುರುಬರ, ಸಾಹುಕಾರ ಕಾಂಬಳೆ, ನಾಗರತ್ನಾ ಪರಾಂಡೆ, ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿಯರಾದ ಸಬಿಯಾ ಪಠಾನ ಸ್ವಾಗತಿಸಿದರು, ಮಡ್ಯಪ್ಪ ಪೂಜಾರ ಹಾಗೂ ಅಕÀ್ಷತಾ ಪಾರಿಶ್ವಾಡ ನಿರೂಪಿಸಿದ ಕಾರ್ಯಕ್ರಮವನ್ನು ಕು. ಲಕ್ಷ್ಮೀ ರೊಟ್ಟಿಯವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.

loading...

LEAVE A REPLY

Please enter your comment!
Please enter your name here