ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ: ಮೇಘಾಲಯದಲ್ಲಿ ಬಿಗಿ ಭದ್ರತೆ

0
2

ಶಿಲ್ಲಾಂಗ್:- ಮೇಘಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಗೆ ಎಂದಿನಂತೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕ್ಲೌಡಿಯಾ ಎ ಲಿಂಗ್ವಾ ಹೇಳಿದ್ದಾರೆ.
‘ನಗರದಲ್ಲಿ ಈಗಾಗಲೇ ನಾಕಾಬಂದಿಗಳನ್ನು ಹಾಕಲಾಗಿದೆ. ಸಂಚಾರಿ ಶಾಖೆಗಳು ತಡರಾತ್ರಿಯವರೆಗೆ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಹೊಂದಿರುವ ಪೋಲಿಸ್ ವ್ಯವಸ್ಥೆಗೆ ಯಾವಾಗಲೂ ತೊಂದರೆಗಳೇ ಎದುರಾಗುತ್ತವೆ. ಆದ್ದರಿಂದ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಗಡಿ ಪ್ರದೇಶಗಳಲ್ಲಿನ ಎಲ್ಲ ಪೊಲೀಸ್ ಠಾಣೆಗಳಲ್ಲಿ ತಪಾಸಣೆ ತೀವ್ರಗೊಳಿಸಲು ಸೂಚಿಸಲಾಗಿದೆ. ಹಲವಾರು ಸ್ಥಳಗಳಲ್ಲಿ ನಾಕಾಗಳನ್ನು ಹಾಕಲಾಗಿದೆ. ವಿಶೇಷ ಕಾರ್ಯಾಚರಣಾ ತಂಡಗಳು ಸಹ ಕಾರ್ಯನಿರತವಾಗಿವೆ ಎಂದು ಲಿಂಗ್ವಾ ತಿಳಿಸಿದ್ದಾರೆ.
‘ಜನರು ಸುರಕ್ಷಿತವಾಗಿರಲು ನಾವು ಬಯಸುತ್ತೇವೆ. ಇದು ರಾಜ್ಯದಲ್ಲಿರುವ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯ ಆಲೋಚನೆಯಾಗಿದೆ. ಸ್ವಾತಂತ್ರ್ಯ ದಿನ ಅಥವಾ ಗಣರಾಜ್ಯೋತ್ಸವವನ್ನು ಹೆಚ್ಚು ಸಂಭ್ರಮದಿಂದ ಆಚರಿಸಬೇಕೆಂದು ನಾವು ಬಯಸುತ್ತೇವೆ.ಜನರು ಮುಕ್ತವಾಗಿ ಸಂಚರಿಸಲು ಸ್ವಾತಂತ್ರ್ಯವಿದೆ. ಇದು ಈ ಹಿಂದೆ ಸಾಧ್ಯವಿರಲಿಲ್ಲ. ನಗರವು ಹಿಂದಿನ ದಿನಗಳಿಗೆ ಹಿಂತಿರುಗಲು ನಾವು ಬಯಸುವುದಿಲ್ಲ. ನಗರ ಈಗಿನಂತೆಯೇ ಇರಬೇಕೆಂದು ನಾವು ಇಚ್ಛಿಸುತ್ತೇವೆ.’ ಎಂದು ಲಿಂಗ್ವಾ ಹೇಳಿದ್ದಾರೆ.

loading...