ಸ್ವಾಭಿಮಾನ ಉಕ್ಕಿಸಿದ ರಾಯಣ್ಣನ ಅದ್ದೂರಿ ಜ್ಯೋತಿ ಯಾತ್ರೆ !!

0
77

ಕಣ್ಮನ ಸೆಳೆದ ಕಲಾತಂಡ !!!!!!

ಬೈಲಹೊಂಗಲ 27: ಪ್ರಥಮ ಸ್ವಾತಂತ್ರ್ಯ ಹೋರಾಟಗಾರ, ರಾಣಿ ಚನ್ನಮ್ಮಳ ಬಲಗೈಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 185ನೇ ಪುಣ್ಯತಿಥಿ ಅಂಗವಾಗಿ ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿಯಿಂದ ಅದ್ದೂರಿ ಜ್ಯೋತಿಯಾತ್ರೆ ನಡೆಸಿ ಚನ್ನಮ್ಮಾಜಿ ಸಮಾಧಿಗೆ ಸಮರ್ಪಿಸಲಾಯಿತು.

ಸಂಗೊಳ್ಳಿ ರಾಯಣ್ಣನ ಆತ್ಮಜ್ಯೋತಿಯನ್ನು ಗಲ್ಲಿಗೇರಿದ ದಿನ ಜ.26ರಂದು, ಆತನ ಸಮಾಧಿ ಸ್ಥಳ ನಂದಗಡದಿಂದ ತಂದು ಬೈಲಹೊಂಗಲದಲ್ಲಿರುವ ಕಿತ್ತೂರ ಚನ್ನಮ್ಮನ ಸಮಾಧಿಗೆ ಅರ್ಪಿಸುವ ಪುಣ್ಯ ಕಾರ್ಯ ಕಳೆದ 17 ವರ್ಷಗಳಿಂದ ನಡೆಯುತ್ತಿದೆ. ಯಾವುದೇ ದೇಣಿಗೆ ಸಂಗ್ರಹವಿಲ್ಲದೆ, ಸರ್ಕಾರದ ನೆರವಿಲ್ಲದೆ ಸಮಿತಿ ನೂರಾರು ಸದಸ್ಯರು ಸ್ವಯಂಪ್ರೇರಣೆಯಿಂದ 50 ವಾಹನಗಳಲ್ಲಿ ಸುಮಾರು 400 ಜನ ಯುವಕರು ನಂದಗಡಕ್ಕೆ ತೆರಳಿ ಜ್ಯೋತಿ ಯಾತ್ರೆ ನಡೆಸಿದ್ದು ವಿಶೇಷವಾಗಿತ್ತು. ಪುರಸಭೆ ಸದಸ್ಯ ವಿರುಪಾಕ್ಷ ವಾಲಿ 2ಕೆ.ಜಿ.ಬೆಳ್ಳಿಯಲ್ಲಿ ತಯಾರಿಸಿದ ಬೆಳ್ಳಿ ಪಂಜನ್ನು ರಾಯಣ್ಣ ಸಮಿತಿಗೆ ದೇಣಿಗೆ ನೀಡಿದರು.
ಯರಗಟ್ಟಿಯ ಸಂತೋಷ ಹಾದಿಮನಿ ನೇತೃತ್ವದಲ್ಲಿ ಆಗಮಿಸಿದ್ದ ನೂರಾರು ಜನ ರಾಯಣ್ಣನ ಅಭಿಮಾನಿಗಳು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ರಾಯಣ್ಣನ ಅಭಿಮಾನಿ ಕಾಶ್ಮೀರದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕ ವೀರು ದೊಡ್ಡವೀರಪ್ಪನವರ ವಿಮಾನದ ಮೂಲಕ ಆಗಮಿಸಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಪಟ್ಟಣಕ್ಕೆ ಆಗಮಿಸಿದ ರಾಯಣ್ಣನ ಜ್ಯೋತಿಯನ್ನು ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮಿಗಳು, ಶಾಸಕ ಡಾ.ವಿಶ್ವನಾಥ ಪಾಟೀಲ, ಪುರಸಭೆ ಅಧ್ಯಕ್ಷೆ ಶೋಭಾ ವಾಲಿ, ಚಿತ್ರನಟ ಶಿವರಂಜನ್ ಬೋಳಣ್ಣವರ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಕಲಾವಿದ ಸಿ.ಕೆ.ಮೆಕ್ಕೇದ, ಮಹಾಂತೇಶ ತುರಮರಿ, ಪುರಸಭೆ ವಿಪಕ್ಷ ನಾಯಕ ಮಡಿವಾಳಪ್ಪ ಹೋಟಿ, ಪ್ರಭಾರ ತಹಶೀಲ್ದಾರ ಎ.ಎಫ್.ಕಾರವಾರ, ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಪಿಎಸ್‍ಐ ಸಮೀರ್ ಮುಲ್ಲಾ, ಸಾಹಿತಿ ಮಂಗಲಾ ಮೆಟಗುಡ್ಡ, ಪ್ರೇಮಾ ಅಂಗಡಿ, ಅನ್ನಪೂರ್ಣಾ ಕನೋಜ, ಗೌರಾದೇವಿ ತಾಳಿಕೋಟಿಮಠ ಅದ್ದೂರಿಯಿಂದ ಸ್ವಾಗತಿಸಿದರು.
ಮುತ್ತಲಗೇರಿಯ ಕುರಿಗೌಡಪ್ಪಜ್ಜನ ಡೊಳ್ಳಿನ ಸಂಘ, ಬೀರದೇವರ ಭಜನಾ ಮಂಡಳಿ ಸೇರಿದಂತೆ ನೂರಾರು ಯುವಕರು ಜ್ಯೋತಿಯಾತ್ರೆಯಲ್ಲಿ ಪಾಲ್ಗೊಂಡು ಸಾಂಸ್ಕøತಿಕ ವೈಭವ ಸೃಷ್ಟಿಸಿದ್ದರು. ಜ್ಯೋತಿಗೆ ಪುಷ್ಪಗುಚ್ಛಗಳ ಮಳೆಗೈದು, ಪಟಾಕಿ ಸಿಡಿಸಿ ರಾಯಣ್ಣನ ವೀರಾಭಿಮಾನದ ಕೆಚ್ಚು ಪಸರಿಸಿದ್ದು ಗಮನ ಸೆಳೆಯಿತು. ಕಿತ್ತೂರು, ಸಂಗೊಳ್ಳಿ ಗ್ರಾಮಸ್ಥರು ಜ್ಯೋತಿಗೆ ನೀರು ಹಾಕಿ ಪೂಜಿಸಿ ವಂದನೆ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ರಾಜು ಸೊಗಲ, ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಗೌರವಾಧ್ಯಕ್ಷ ಕುಮಾರ ದೇಶನೂರ, ಕುಮಾರ ದಳವಾಯಿ, ಬಸವರಾಜ ನೀಲಗಾರ, ಕುಮಾರ ವಕ್ಕುಂದಮಠ, ಶ್ರೀಶೈಲ ಯಡಳ್ಳಿ, ರಾಯಣ್ಣನ ವಂಶಸ್ಥ ಬಸವರಾಜ ರೋಗನ್ನವರ, ನಾಗಪ್ಪಾ ಮಾರಿಹಾಳ, ಸಿದ್ಧಲಿಂಗ ಸಿದ್ದಯ್ಯನವರ, ಅಭಿಷೇಕ ಈಟಿ, ಈರಬಸ್ಸು ಮುನವಳ್ಳಿ, ನಿಂಗಪ್ಪ ಕುರಿ, ಕರವೇ, ನವನಿರ್ಮಾಣ ವೇದಿಕೆ, ಜಯ ಕರ್ನಾಟಕ, ನ್ಯಾಯವಾದಿ ಸಂಘಟನೆಗಳ ಸದಸ್ಯರು ನೇತೃತ್ವವಹಿಸಿದ್ದರು.
ನಂತರ ಚನ್ನಮ್ಮ ಸಮಾಧಿ ಬಳಿ ಜ್ಯೋತಿಯಾತ್ರೆಯ ನಿಮಿತ್ಯ ಜರುಗಿದ ಸಮಾರೋಪ ಸಮಾರಂಭದಲ್ಲಿ ಗಣ್ಯರು ಪಾಲ್ಗೊಂಡು ರಾಯಣ್ಣನ ಆದರ್ಶಗಳನ್ನು ಇಂದಿನ ಯುವಕರು ಅಳವಡಿಸಿಕೊಳ್ಳಲು ಕರೆ ನೀಡಿದರು.

ಕಿತ್ತೂರಲ್ಲಿ ಜ್ಯೋತಿಗೆ ಸ್ವಾಗತ : ರಾಯಣ್ಣನ ಆತ್ಮ ಜ್ಯೋತಿಯನ್ನು ಮಾಜಿ ಶಾಸಕ ಸುರೇಶ ಮಾರಿಹಾಳ, ಮಹಾಂತೇಶ ದೊಡಗೌಡರ, ಚನ್ನಬಸಪ್ಪ ಮೊಖಾಸಿ, ಬಸವರಾಜ ಕುಪ್ಪಸಗೌಡರ, ಮಾಜಿ ತಾ.ಪಂ.ಸದಸ್ಯ ದಿನೇಶ ವಳಸಂಗ ಹಾಗೂ ಕಿತ್ತೂರು ನಾಡಾಭಿಮಾನಿಗಳೊಂದಿಗೆ ಆತ್ಮೀಯವಾಗಿ ಭರಮಾಡಿಕೊಂಡರು. ರಾಯಣ್ಣ ಸ್ಮರಣೋತ್ಸವ ಸಮಿತಿಯಿಂದ ಕಳೆದ 17 ವರ್ಷದಿಂದ ನಡೆದುಕೊಂಡು ಬಂದಿರುವ ಜ್ಯೋತಿ ಕಾರ್ಯಕ್ರಮವನ್ನು ಶಾಸಕ ಮಾರಿಹಾಳ ಶ್ಲಾಘಿಸಿದರು.

==>

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೀರತ್ವವನ್ನು ಸ್ಮರಣೆ ಮಾಡುತ್ತ ಭಕ್ತಿಯಿಂದ ಪಾಲ್ಗೊಂಡಿದ್ದ ಅಪಾರ ಜನಸ್ತೋಮ ಅಲ್ಲಿ ನೆರೆದಿತ್ತು…!! ವೀರಮಾತೆ ಕಿತ್ತೂರ ಚನ್ನಮ್ಮಾಜಿ, ಶೂರ ಸಂಗೊಳ್ಳಿ ರಾಯಣ್ಣನಿಗೆ ಜೈ ಎಂದು ಹಷೋದ್ಘಾರದಿಂದ ಜಯಘೋಷ ಹೇಳುತ್ತಿದ್ದ ಯುವಕರು ರಾಯಣ್ಣ ಕೆಚ್ಚು ಪ್ರದರ್ಶಿಸಿದರು…!!

loading...

LEAVE A REPLY

Please enter your comment!
Please enter your name here