ಸ್ವಾರ್ಥಕ್ಕಾಗಿ ಸಮಾಜ ವಿಂಗಡನೆ ಮಾಡಿಕೊಂಡಿದ್ದೆÃವೆ: ಸಿದ್ದರಾಮಯ್ಯ ವಿಷಾದನೀಯ

0
5

ವಿಜಯಪುರ: ಕೆಲವು ಪಟ್ಟಭದ್ದ ಹಿತಾಸಕ್ತಿಗಳು ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಘಟನೆಗೆ ಪ್ರೊÃತ್ಸಾಹಿಸಿದರು, ಸ್ವಾರ್ಥಕ್ಕಾಗಿ ಜಾತಿ, ಧರ್ಮ ಎಂದು ವಿಂಗಡನೆ ಮಾಡಿಕೊಂಡಿದ್ದೆÃವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಷಾದಿಸಿದರು.
ಕಿತ್ತೂರ ರಾಣಿ ಚೆನ್ಮಮ್ಮ ಸಂಸ್ಥೆ ವತಿಯಿಂದ ನಿರ್ಮಿಸಲಾಗಿರುವ ಕಿತ್ತೂರ ರಾಣಿ ಚೆನ್ಮಮ್ಮ ಸಮುದಾಯ ಭವನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಾಗರಿಕತೆ ಬೆಳೆಯಿತು, ಮನುಷ್ಯ ಸಂಘಜೀವಿಯಾಗಿ ರೂಪುಗೊಂಡ. ಆದರೆ ಕಾಲ ಕಳೆದಂತೆ ಸ್ವಾರ್ಥಕ್ಕಾಗಿ ಸಮಾಜವನ್ನು ವಿನಾಕಾರಣ ವಿಂಗಡನೆ ಮಾಡಿಕೊಂಡ, ಮನುಷ್ಯ ಎಂದರೆ ಎಲ್ಲರೂ ಒಂದೇ, ಕೆಲವೊಬ್ಬರು ಸ್ವಾರ್ಥಕ್ಕಾಗಿ ಜಾತಿ, ಧರ್ಮ ಎಂದು ವಿಂಗಡನೆ ಮಾಡಿದ್ದೆÃವೆ, ಕೆಲವು ಪಟ್ಟಭದ್ದ ಹಿತಾಸಕ್ತಿಗಳು ಈ ವಿಂಗಡನೆಯ ವ್ಯವಸ್ಥೆ ರೂಪಿಸಿದರು ಎಂದು ವಿಷಾದಿಸಿದರು.ಪಂಚಮಸಾಲಿ ಸಮಾಜದ ಜನತೆ ಜಾತ್ಯಾತೀತ ಮನೋಭಾವದ ಸಮುದಾಯದವರು. ಕಿತ್ತೂರ ರಾಣಿ ಚೆನ್ನಮ್ಮ ಎಲ್ಲ ಸಮಾಜದ ಆಸ್ತಿ, ಕಿತ್ತೂರ ಸಂಸ್ಥಾನದ ಸ್ವಾತಂತ್ರö್ಯಕ್ಕಾಗಿ ಬ್ರಿಟಿಷರ ವಿರುದ್ಧ ಎದೆಗುಂದದೇ ಹೋರಾಡಿದರು, ೧೮೫೭ ಸ್ವಾತಂತ್ರö್ಯ ಸಂಗ್ರಾಮ ಪ್ರಾರಂಭ ಎನ್ನುತ್ತೆÃವೆ, ಆದರೆ ಅದಕ್ಕಿಂತ ಹಿಂದೆಯೇ ಕಿತ್ತೂರ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದರು ಎಂದರು. ಅನೇಕರು ಬ್ರಿಟಿಷ ವಿರುದ್ಧ ಹೋರಾಡಿ ಈ ಮಣ್ಣಿನ ಪ್ರಿÃತಿಯನ್ನು ಪ್ರದರ್ಶಿಸಿದ ಅನೇಕ ಉದಾಹರಣೆಗಳು ಇತಿಹಾಸ ಪುಟಗಳಲ್ಲಿ ದೊರಕುತ್ತವೆ. ಈ ಮಣ್ಣಿನ ಪ್ರಿÃತಿಗಾಗಿ ಹೋರಾಡಿದ ವೀರರ ಆದರ್ಶಗಳು ನಮಗೆ ನಿತ್ಯ ಸ್ಪೂರ್ತಿ. ಸಂಗೊಳ್ಳಿ ರಾಯಣ್ಣ ಕಿತ್ತೂರ ಸಂಸ್ಥಾನದ ಭಂಟನಾಗಿ ಕಿತ್ತೂರನ್ನು ಸ್ವಾತಂತ್ರö್ಯಗೊಳಿಸುವುದಕ್ಕಾಗಿ ಪ್ರಾಣವನ್ನೆÃ ಅರ್ಪಿಸಿದ ಮಹಾನ್ ಚೇತನ ಎಂದರು.
ಸಚಿವ ಶಿವಾನಂದ ಪಾಟೀಲ, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಯಶವಂತರಾಯಗೌಡ ಪಾಟೀಲ, ಡಾ.ದೇವಾನಂದ ಚವ್ಹಾಣ, ಅರುಣ ಶಹಾಪೂರ, ಹನಮಂತ ನಿರಾಣಿ, ಮೇಯರ್ ಶ್ರಿÃದೇವಿ ಲೋಗಾಂವಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವ ಗೋವಿಂದ ಕಾರಜೋಳ, ಡಾ.ಸಾರ್ವಭೌಮ ಬಗಲಿ, ಪ್ರೊ.ರಾಜು ಆಲಗೂರ, ಜಿ.ಪಂ. ಸದಸ್ಯ ಉಮೇಶ ಕೋಳಕೂರ, ಸಂಸ್ಥೆಯ ಅಧ್ಯಕ್ಷ ಶರಣು ಆಲೂರ, ಭೀಮನಗೌಡ ಬಿರಾದಾರ ಮೊದಲಾದವರು ಉಪಸ್ಥಿತರಿದ್ದರು. ಡಾ.ಸುರೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.

loading...