ಸ್ವ ಉದ್ಯೊÃಗ ಮಾಡಿ ಸ್ವಾವಲಂಬಿ ಜೀವನ ಸಾಗಿಸಿ

0
4

ಕನ್ನಡಮ್ಮ ಸುದ್ದಿ-ಧಾರವಾಡ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಜಿಯವರ ನೇತೃತ್ವದಲ್ಲಿ ರುಡ್‌ಸೆಟ್ ಸಂಸ್ಥೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ರುಡ್‌ಸೆಟ್‌ಗೆ ರುಡ್‌ಸೆಟಿಯೇ ಸರಿಸಾಟಿ ಎಂದು ರುಡ್‌ಸೆಟ್ ಮತ್ತು ಆರ್‌ಸೆಟ್ ಸಂಸ್ಥೆಗಳ ರಾಷ್ಟಿçÃಯ ನೀರ್ದೇಶಕ ಪಿ ಸಂತೋಷ ಅಭಿಪ್ರಾಯಪಟ್ಟರು.
ರುಡ್‌ಸೆಟ್ ಸಂಸ್ಥೆಯಲ್ಲಿ ಜರುಗಿದ ವಿವಿಧ ಸ್ವ ಉದ್ಯೊÃಗ ತರಬೇತಿಗಳ ಶಿಬಿರಾರ್ಥಿಗಳನ್ನುದ್ದೆÃಶಿಸಿ ಮಾತನಾಡಿದರು.

ನಿಮ್ಮ ದೌರ್ಬಲ್ಯಗಳನ್ನು ಹೊಡೆದೊಡಿಸಿ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚಿ. ಸಮಾಜದಲ್ಲಿ ಸ್ವ ಉದ್ಯೊÃಗ ಮಾಡಲಿಕ್ಕೆ ಹೇರಳ ಅವಕಾಶಗಳಿವೆ ಅವುಗಳನ್ನು ಬಳಸಿಕೊಳ್ಳಿ. ಉದ್ಯೊÃಗವನ್ನು ಅರಸಿ ಗ್ರಾಮೀಣ ಭಾಗದ ಯುವಕರು ಪಟ್ಟಣದತ್ತ ವಲಸೆ ಹೋಗುವುದನ್ನು ತಡೆದು ರುಡ್‌ಸೆಟ್ ಸಂಸ್ಥೆಯಲ್ಲಿ ಸಿಗುವ ತರಬೇತಿಗಳನ್ನು ಬಳಸಿಕೊಂಡು ಸ್ವ ಉದ್ಯೊÃಗ ಮಾಡಿ ಸ್ವಾವಲಂಬಿ ಜೀವನ ಸಾಗಿಸಿ ಎಂದರು.
ಆರ್‌ಸೆಟಿಸ್ ಸಂಸ್ಥೆಗಳ ರಾಜ್ಯ ನಿರ್ದೇಶಕರಾದ ಆರ್ ಬಿ ಮಾನೆ ಮಾತನಾಡಿ, ರುಡ್‌ಸೆಟ್ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಯನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು.

ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ರಾಜೇಂದ್ರ ಕಗ್ಗೊÃಡಿ ಸ್ವಾಗತಿಸಿ ಪರಿಚಯಿಸಿದರು.
ಹಿರಿಯ ಉಪನ್ಯಾಸಕ ಜಗದೀಶ ಪೂಜಾರ ನಿರೂಪಿಸಿದರು. ಚನ್ನಪ್ಪ ದೇವಗಿರಿ ವಂದಿಸಿದರು.

loading...