ಹಕ್ಕುಗಳಿಗಾಗಿ ಮಹಿಳಾ ಚಳುವಳಿಯ ಆರಂಭ : ಪ್ರೊ. ಸಬಿಹಾ

0
44

Oct28-Bjp5

 

 

 

ವಿಜಯಪುರ (ಅಕ್ಕಮಹಾದೇವಿ ವೇದಿಕೆ) : ಮಹಿಳೆಯರು ತಮ್ಮ ಹಕ್ಕುಗಳಿಗಾಗಿ, ಸಮಾನತೆಗಾಗಿ, ಮಹಿಳಾ ಆರೋಗ್ಯಕ್ಕಾಗಿ, ತಮ್ಮ ಮೇಲೆ ನಿರಂತರವಾಗಿ ನಡೆಯುವ ದೌರ್ಜನ್ಯ ವಿರೋಧಿಸುವುದಕ್ಕಾಗಿ ಮಹಿಳಾ ಚಳುವಳಿಗಳನ್ನು ಆರಂಭಿಸಿದವರೆ ಹೊರತು ಯಾವುದೇ ವೈಯಕ್ತಿಕ ವಿಷಯಕ್ಕಾಗಿ ಅಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಪ್ರೊ.ಸಬಿಹಾ ಹೇಳಿದರು.
ಇಲ್ಲಿಯ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಪ್ರಥಮ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಮಹಿಳಾ ಸಾಹಿತ್ಯ ಚಳವಳಿ ಮತ್ತು ಅಭಿವ್ಯಕ್ತಿಯ ನೆಲೆಗಳು ಎಂಬ ವಿಷಯ ಕುರಿತ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಹಿತ್ಯದ ಓದು ಒಂದು ಕಾಲಕ್ಕೆ ಮನರಂಜನೆಯಾಗಿತ್ತು. ಆದರೆ ಈಗ ಲಿಂಗರಾಜಕಾರಣವನ್ನು ಪ್ರಶ್ನಿಸುವ ಮಟ್ಟಕ್ಕೆ ಬೆಳೆದಿದೆ. ಸಾಹಿತ್ಯ ಬರವಣಿಗೆ ಮಾತ್ರ ಬದಲಾಗದೆ ಸಾಹಿತ್ಯವನ್ನು ಓದುವ ಕ್ರಮವೂ ಬದಲಾಗಿದೆ ಎಂದು ಅವರು ಹೇಳಿದರು.
ಆರಂಭ ಕಾಲದ ಲೇಖಕಿಯರನ್ನು ಮೂರು ಮಾದರಿಯಾಗಿ ವಿಂಗಡಿಸಬಹುದು. ಮೊದಲನೆಯ ಮಾದರಿ ಲೇಖಕಿಯರು ಆದರ್ಶ ಗ್ರಹಣಿಯ ಪಡಿಯಚ್ಚನ್ನು ಒಪ್ಪಿಕೊಂಡು ಬರೆಯುವ ಮಾದರಿ. ಮತ್ತು ಎರಡನೇಯ ಮಾದರಿಯು ಇತರರಿಗಿಂತ ಭಿನ್ನವಾಗಿ ಬರೆಯಬೇಕು ಎನ್ನುವ ಮಾದರಿ. ಮೂರನೆಯ ಮಾದರಿ ಸ್ತ್ರೀವಾದಿ ಚಿಂತನೆಯನ್ನು ಬೆಳೆಸುವ ಮಾದರಿ. ಈ ರೀತಿ ಮಹಿಳಾ ಲೇಖಕಿಯರು ಕಾಲ ಕಾಲಕ್ಕೆ ಅನುಗುಣವಾಗಿ ವಿವಿಧ ರೀತಿಯ ಬರವಣಿಗೆಗಳನ್ನು ಬರೆದಿದ್ದಾರೆ ಎಂದು ಪ್ರೊ.ಸಬಿಹಾ ವಿವರಿಸಿದರು.
‘ಮಹಿಳಾ ಸಾಹಿತ್ಯದಲ್ಲಿ ಪಿತೃ ಪ್ರಧಾನತೆಯ ಸ್ವರೂಪ’ ವಿಷಯದ ಕುರಿತು ಪ್ರಬಂಧ ಮಂಡಿಸಿದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಸಂಶೋಧಕಿ ದು. ಸರಸ್ವತಿ ಅವರು, ಕನ್ನಡದ ಖ್ಯಾತ ಲೇಖಕಿಯರಾದ ಸವಿತಾ ನಾಗಭೂ,ಷಣ ವೈದೇಹಿ, ಸಂ.ಉಷಾ ಅವರ ಕೃತಿಗಳು ಪಿತೃ ಪ್ರಧಾನತೆಯ ಚೌಕಟ್ಟುಗಳನ್ನು ವಿವಾಹ, ಕೌಂಟುಂಬಿಕ ಚೌಕಟ್ಟುಗಳನ್ನು ಧಿಕ್ಕರಿಸದೆ, ತಿರಸ್ಕರಿಸಿದೆ, ಗಟ್ಟಿಯಾದ ಪ್ರತಿರೋಧವನ್ನು ವ್ಯಕ್ತಪಡಿಸದೆ ಚೌಕಟ್ಟುಗಳನ್ನು ಹಿಗ್ಗಿಸುವ ಪ್ರಯತ್ನ ಮಾಡಿವೆ. ಆದರೆ ದಲಿತ- ಬಂಡಾಯದ ಪ್ರಭಾವ ಹೊಂದಿರುವಂತಹ ಬಿ.ಟಿ.ಲಲಿತಾನಾಯಕ್, ಪ್ರೊ.ಆರ್. ಸುನಂದಮ್ಮ, ಗೀತಾ ನಾಗಭೂಷಣ ಹಾಗೂ ಇನ್ನಿತರ ಕೃತಿಗಳು ಭಿನ್ನರೂಪದ ಪ್ರತಿರೋಧವನ್ನು, ಸಾಂಸ್ಕøತಿಕ ಸ್ವರೂಪವನ್ನು ಮತ್ತು ಪಿತೃಪ್ರಧಾನತೆ ಸ್ವರೂಪವನ್ನು ಬಿಚ್ಚಿಟ್ಟವು. ಈ ಭಿನ್ನತೆ ಸ್ತ್ರೀವಾದಿ ವಿಮರ್ಶೆ ಮತ್ತು ಚಳುವಳಿಯ ಹರವನ್ನು ವಿಸ್ತರಿಸಬಲ್ಲದು ಎಂದರು.

loading...

LEAVE A REPLY

Please enter your comment!
Please enter your name here