ಹಣ ಪಡೆದು ಮನೆ ಹಂಚಿಕೆ; ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

0
12

ಬೆಳಗಾವಿ: ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆ ಹಂಚಿಕೆ ಮಾಡುವಂತೆ ಹಾಗೂ ಹಣ ಪಡೆದು ಬೇರೆಯವರಿಗೆ ಆಶ್ರಯ ಮನೆಗಳನ್ನು ಹಂಚಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಣ್ಣೂರ ಗ್ರಾಮದ ಎಸ್‌ಸಿ,ಎಸ್‌ಟಿ ನಾಗರಿಕರು ಬುಧವಾರ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಣ್ಣೂರ ಗ್ರಾಮದ ಸರ್ಕಾರಿ ಜಾಗೆಯಲ್ಲಿ ೧೯೮೯-೯೦ ಸಾಲಿನಲ್ಲಿ ಸರ್ಕಾರದಿಂದ ನಿರ್ಮಾಣವಾದ ಆಶ್ರಯ ಮನೆಗಳು ಎಸ್‌ಸಿ,ಎಸ್‌ಟಿ ಜನಾಂಗ ಹಾಗೂ ಬಡ ಕುಟುಂಬದ ಮಂಜೂರಾಗಿವೆ. ಆಶ್ರಯ ಮನೆಗಳು ನಿರ್ಮಾಣವಾದ ನಂತರ ಮೂಲ ಫಲಾನುಭವಿಗಳಿಗೆ ಮನೆ ವಿತರಣೆ ಮಾಡದೆ ಮನೆಗಳನ್ನು ಹೊಂದಿರುವ ಜನರಿಂದ ಹಣ ಪಡೆದು ಗ್ರಾಪಂ ಅಧಿಕಾರಿಗಳು ಹಾಗೂ ಸದಸ್ಯರು ವಿತರಣೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
೧೯೮೯-೯೦ ರಿಂದ ಇವತ್ತಿನವರೆಗೂ ಅಂಬೇವಾಡಿ ಗ್ರಾಪಂನ ದಾಖಲಾತಿಗಳಲ್ಲಿ ಮೂಲ ಫಲಾನುಭವಿಗಳ ಹೆಸರು ಕಡಿಮೆ ಮಾಡಿ ಕಾನೂನು ಬಾಹೀರವಾಗಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಕೆಲವೊಂದು ಪಂಚಾಯತಿ ಸದಸ್ಯರು ಸರ್ಕಾರಿ ಜಾಗೆಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳ ಹಾಗೂ ಸದಸ್ಯರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅರ್ಹ ಮೂಲ ಫಲಾನುಭವಿಗಳಿಗೆ ಆಶ್ರಯ ಮನೆಗಳನ್ನು ವಿತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೃಷ್ಣಾ ದೇವರಮನಿ, ಶಿವಾಜಿ ಕದಂ, ಪರುಶರಾಮ ನಾಯಿಕ, ಎನ್.ಎಸ್.ಪಾಟೀಲ, ನಾಗವ್ವಾ ಸೊಳಗೇಕರ, ಅನಿತಾ ನಾಯಿಕ, ಕಾಶವ್ವಾ ಮರಣ್ಣವರ, ವಿಮಲ ಪಾಟೀಲ, ಕಲ್ಪನಾ ನಾಯಿಕ, ಸೋಮನಾಥ ಚೌಗಲೆ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

loading...