ಹನುಮಂತ ದೇವರ ಓಕಳಿ ನಿಮಿತ್ತ ಬೈಲಾಟ ಪ್ರದರ್ಶನ

0
10

ಹನುಮಂತ ದೇವರ ಓಕಳಿ ನಿಮಿತ್ತ ಬೈಲಾಟ ಪ್ರದರ್ಶನ
ಕನ್ನಡಮ್ಮ ಸುದ್ದಿ-ಗೋಕಾಕ: ಸವದತ್ತಿ ತಾಲೂಕಿನ ಗುಡಮಕೇರಿ ಗ್ರಾಮದ ಹಣುಮಂತ ದೇವರ ಓಕಳಿ ಪ್ರಯುಕ್ತವಾಗಿ ಗೋಕಾಕದ ತ್ರಿಮೂರ್ತಿ ಬೈಲಾಟ ಸಂಘದಿಂದ ‘ಸತ್ಯವಾನ ಸಾವಿತ್ರಿ’ ಬಯಲಾಟವು ಪ್ರದರ್ಶನವಾ ಯಿತು.
ಸತ್ಯವಾನನಾಗಿ ತುಕಾರಾಮ ಗೋವಿಂದಪ್ಪ ಮುತ್ನಾಳ, ಸಾವಿತ್ರಿ ಪಾತ್ರದಲ್ಲಿ ಈಶ್ವರಚಂದ್ರ ಶಿವಪುತ್ರಪ್ಪ ಬೆಟಗೇರಿ, ಯಮರಾಜ ಮತ್ತು ಅಶ್ವಪತಿಮಹಾರಾಜನಾಗಿ ಬಸವಣ್ಣೆಪ್ಪ ಮಲ್ಲಪ್ಪ ಬನ್ನಿಶೆಟ್ಟಿ, ಬ್ರಹ್ಮದೇವನಾಗಿ ಶಾಂತಯ್ಯ ರುದ್ರಯ್ಯ ಕಂಬಿ, ದುಮ್ಮತ್ಸೆÃನರಾಜನಾಗಿ ನಾಮದೇವ ಯಶವಂತಪ್ಪ ಹರಿಜನ, ಮಹಾಮಂತ್ರಿಯಾಗಿ ಅವರಗೋಳದ ಲಕ್ಷö್ಮಣ ಕಾಡಪ್ಪ ಪೂಜೇರಿ, ನಾರದ ಪಾತ್ರದಲ್ಲಿ ಲಕ್ಕಪ್ಪ ಯಮನಪ್ಪ ಪೂಜೇರಿ ಭಾಗವತರಾಗಿ ಈಶ್ವರಪ್ಪ ಅರ್ಜುನಪ್ಪ ಗಡಕರಿ, ಇಸಾಮುದ್ದಿÃನ ಮನಸೂರಸಾಬ ಪೀರಜಾದೆ, ಮಹಾಂತೇಶ ಸತ್ತೆಪ್ಪ ಬನ್ನಿಶೆಟ್ಟಿ, ಮನಸೂರ ಅಬ್ದುಲ್‌ಸಾಬ ಪೀರಜಾದೆ ಅಭಿನಯಿಸಿದರು. ಶಿವಾನಂದ ದುಂಡ್ಪಪ ಗುರವ ಅವರು ಹಾರ್ಮೋನಿಯಂ ಸಾಥ, ಉದಗಟ್ಟಿಯ ಭೀಮಶೆಪ್ಪ ಲಕ್ಷö್ಮಣ ಹುಲೆಣ್ಣವರ ತಬಲಾ ಸಾಥ ನೀಡಿದರು. ಹಿನ್ನೆಲೆಯಲ್ಲಿ ಗುಡಮಕೇರಿ ಗ್ರಾಮದ ಗುರು-ಹಿರಿಯರು ಸಹಕರಿಸಿದರು.

loading...