ಹಲ್ಲೆ ಮಾಡಿ ಎಮ್ಮೆ ಕದ್ದ ಖದೀಮರು

0
181

ಬೆಳಗಾವಿ

ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದ ಹೊರವಲಯದಲ್ಲಿ ಎಮ್ಮೆ ಸಾಕಾಣಿಕೆಗೆ ಮಾಡಿರುವ ಶೇಡ್ (ಡೈರಿ ಪಾರ್ಮ) ನಲ್ಲಿರುವ ೨ ಎಮ್ಮೆಗಳನ್ನು ಕಳ್ಳತನ ಮಾಡಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಕಳ್ಳರನ್ನು ತಡೆಯಲ್ನೆತಿಸಿದ ಕಾವಲುಗಾರ ಅಪ್ಪಯ್ಯಾ ಶೇಲಾರ ಎಂಬುವನ ಬಾಯಿಗೆ ಅರಿವೆ ಹಾಕಿ, ಕೈ ಕಾಲು ಕಟ್ಟಿ , ಹಿಗ್ಗಾಮುಗ್ಗಾ ತಳಿಸಿರುವ ಕಳ್ಳರು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಯಾವಾಗಾ ಹಗ್ಗ ಬಿಚ್ಚಿದ ಒಂದು ಎಮ್ಮೆ ಕಳ್ಳರ ನಿಯಂತ್ರಣಕ್ಕೆ ಬರದೆ ಜಿಗಿ ಆರಂಭಿಸಿದ ತಕ್ಷಣ ಕೈಗೆ ಸಿಕ್ಕ ೨ ಎಮ್ಮೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಶೆಡ್ ನಲ್ಲಿ ಎಮ್ಮೆ ಮತ್ತು ಆಕಳು ಸೇರಿ ಸುಮಾರು ೧೦ ದನಗಳಿದ್ದು .

ಕಳೆದ ೮ ತಿಂಗಳ ಹಿಂದೆ ಈ ದನದ ಕೋಟ್ಟಿಗೆಯನ್ನು ಕಟ್ಟಿದ್ದು ಹೋರ ರಾಜ್ಯಗಳಿಂದ ನಾನಾ ತಳಿಯ ಲಕ್ಷಕ್ಕೂ ಹೆಚ್ಚು ಮೊತ್ತದ ಎಮ್ಮೆಗಳನ್ನು ತರಲಾಗಿತ್ತು. ಖಾಸಗಿ ಉದ್ಯೋಗಿಯಾಗಿದ್ದ ಪ್ರಿಯಾ ಪುಂಡಲಿಕ ಸೋಮನಟ್ಟಿ ಎಂಬುವರು ಹೈನುಗಾರಿಕೆ ಮಾಡುವ ಹಂಬಲದಿಂದ ಗ್ರಾಮದಲ್ಲಿ ಬಾಡಿಗೆ ರೂಪದಲ್ಲಿ ಜಮೀನು ಪಡೆದು ಡೈರಿ ಪಾರ್ಮ ಮಾಡಲು ಮುಂದಾಗಿದ್ದರು.

ಈ ಘಟನೆ ಸದ್ಯ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಹಳ್ಳಿಗಳಲ್ಲಿ ಬೆಸಿಗೆಯ ಸಂದರ್ಭದಲ್ಲಿ ದನಕರುಗಳನ್ನು ಹೋಲದಲ್ಲಿ ಕಟ್ಟುವುದು ಸರ್ವೆ ಸಾಮಾನ್ಯ. ಇದರಿಂದಾಗಿ ಹೋಲಗಳಲ್ಲಿ ವಾಸವಾಗಿರುವ ಜನ ಅದರಲ್ಲೂ ಮಹಿಳೆಯರು ಭಯಭಿತರಾಗಿದ್ದಾರೆ. ಈ ಘಟನೆ ಅಗಸಗಿ ಮಾತ್ರ ಅಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡುವಂತೆ ಮಾಡಿದೆ.

ಇದೆ ಮೊದಲು.
ಅಗಸಗಿ ಗ್ರಾಮದಲ್ಲಿ ಈ ಹಿಂದೆ ದನಗಳ ಕಳ್ಳತನ ನಡೆದಿತ್ತು. ಆದರೆ ಈ ರೀತಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದು ಇದೇ ಮೊದಲಾಗಿದೆ.

ಈ ಪ್ರಕರಣ ಸಂಬಂಧಿಸಿದಂತೆ ಕಾಕತಿ ಪೋಲಿಸ್ ಸಿಪಿಐ ಗೌಂಡಿ, ಪಿ ಎಸ್ ಐ ಅರ್ಜುನ ಹಂಚಿನಮನಿ ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದರು.
ಇದು ೨ನೇ ಪ್ರಕರಣವಾಗಿದ್ದು ಈ ಹಿಂದೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ಎಪ್ರಿಲ್ 16 ರಂದು ಇದೆ ರೀತಿ ಲಕ್ಷ್ಯಾಂತರ ಬೆಲೆಬಾಳುವ ೩ ಎಮ್ಮೆಗಳನ್ನು ಕಳ್ಳತನ ಮಾಡಲಾಗಿತ್ತು.

ಪೇಲಾದ ಪೋಲಿಸರು ..

ಕಾಕತಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಇದು ಎರಡನೇ ಪ್ರಕರಣವಾಗಿದ್ದು ಇವರೆಗೆ ಮೊದಲನೆಯ ಪ್ರಕರಣಕ್ಕೆ ಸಂಭವಿಸಿದಂತೆ ಯಾವುದೇ ಸುಳುವು ಸಿಕ್ಕಿರುವುದಿಲ್ಲ.
ಇದರಿಂದ ನಾವು ಹತಾಶರಾಗಿದ್ದು ರೈತರ ವಸ್ತುಗಳಿಗೆ ಬೆಲೆಯಿಲ್ಲದಂತಾಗಿದೆ. ಒಂದು ವೇಳೆ ಯಾರಾದರೂ ಸರ್ಕಾರಿ ಅಧಿಕಾರಿಗಳ ಕೇವಲ ೧೦- ೨೦ ಸಾವಿರ ಮೌಲ್ಯದ ವಸ್ತು ಕಳುವಾದರೆ ಇಡಿ ಪೋಲಿಸ್ ಇಲಾಖೆ ನಿಂತು ಕಳ್ಳರನ್ನ ಹಿಡಿಯುತ್ತದೆ. ಆದರೆ ಅದೆ ರೈತರ ಲಕ್ಷಾಂತರ ಬೆಲೆ ಬಾಳುವ ಎಮ್ಮೆ, ಹಸು ಮತ್ತು ಯಂತ್ರೊಪಕರಣಗಳು ಕಳುವಾಗುತ್ತಿದ್ದರು ಅದರ ಯಾವುಂದೂ ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿಲ್ಲ. ಇದರಿಂದಾಗಿ ನಮಗೆ ಸರ್ಕಾರ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ .

ಮಲ್ಲಪ್ಪಾ ಬೈರು ಭಾತಕಾಂಡೆ. ಅಂಬೇವಾಡಿ ಗ್ರಾಮದ
ಎಮ್ಮೆ ಕಳೆದುಕೊಂಡ ರೈತ.
ಘಟನಾ ಸ್ಥಳಕ್ಕೆ ಪೋಲಿಸ್ ಅಧಿಕಾರಳಾದ ಡಿಸಿಪಿ ಯಶೋಧಾ ವಂಟಮೂರಿ ಎಸಿಪಿ ಶಿವಾರೆಡ್ಡಿ ಭೇಟಿ ನೀಡಿ ಹೆಚ್ಚಿನ ತನಿಖೆಗಾಗಿ ಆದೇಶಿಸಿದರು.

loading...