ಹಾವು ಕಚ್ಚಿ ಇಬ್ಬರು ಬಾಲಕರ ಸಾವು : ಪರಿಹಾರಕ್ಕೆ ರೈತರ ಒತ್ತಾಯ

0
6

ಹಾವು ಕಚ್ಚಿ ಇಬ್ಬರು ಬಾಲಕರ ಸಾವು : ಪರಿಹಾರಕ್ಕೆ ರೈತರ ಒತ್ತಾಯ
ಘಟಪ್ರಭಾ: ಮಕ್ಕಳನ್ನು ಹೊಲದ ಪಕ್ಕದಲ್ಲಿ ಆಟವಾಡಲು ಬಿಟ್ಟು ಹೋಲದಲ್ಲಿ ಕೆಲಸ ಮಾಡುತ್ತ್ತಿರುವಾಗ ಆಟದಲ್ಲಿ ತೊಡಗಿದ್ದ ಮಕ್ಕಳಿಗೆ ಹಾವು ಕಚ್ಚಿದ ಪರಿಣಾಮ ಇಬ್ಬರು ಮಕ್ಕಳು ಸಾವನಪ್ಪಿದ ಘಟನೆ ಸಮೀಪದ ರಾಜಾಪೂರ ಗ್ರಾಮದಲ್ಲಿ ಮಂಗಳವಾರ ಸಂಜೆ ಜರುಗಿದೆ.
ಗ್ರಾಮದ ಕಟ್ಟಿಕಾರ ತೋಟದಲ್ಲಿ ಮಂಗಳವಾರ ಸಂಜೆ ೫ ಗಂಟೆ ಸುಮಾರಿಗೆ ಸಿದ್ದಪ್ಪ ಭೀಮಪ್ಪಾ ಕಟ್ಟಿಕಾರ ದಂಪತಿಗಳು ತಮ್ಮ ಮಕ್ಕಳಾದ ಕಾವೇರಿ (೬) ಹಾಗೂ ಮುತ್ತುರಾಜ (೬ ತಿಂಗಳ) ಇವರನು ತಮ್ಮ ಹೋಲದ ಪಕ್ಕದಲ್ಲಿ ಆಟವಾಡಲು ಬಿಟ್ಟು ಕೆಲಸದಲ್ಲಿ ತೊಡಗಿದಾಗ ಆಟವಾಡುತ್ತಿದ್ದ ಎರಡೂ ಮಕ್ಕಳಿಗೆ ಹಾವು ಕಚ್ಚಿದ ಪರಿಣಾಮ ಸಾವು ಸಂಭವಿಸಿದೆ.
ಬುಧವಾರ ಘಟನಾ ಸ್ಥಳಕ್ಕೆ ಬೇಟಿ ನೀಡಿದ ಮೂಡಲಗಿ ತಹಶೀಲ್ದಾರ ಮುರಳಿಧರ ಅವರು ಪರಿಶೀಲಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದಭದಲ್ಲಿ ತಹಶೀಲ್ದಾರ ಅವರಿಗೆ ಭೆಟ್ಟಿಯಾದ ರೈತ ಸಂಘದ ಕಾರ್ಯಕರ್ತರು ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

loading...