ಹಾಸ್ಯ ಸಂಜೆಗೆ ಬೆಳಗಾವಿ ಕನ್ನಡಿಗರು ಸೇರಿದ್ದು ಹೆಮ್ಮೆಯ ಸಂಗತಿ: ಎಂ.ಎಸ್.ನರಸಿಂಹಮೂರ್ತಿ

0
30


ಬೆಳಗಾವಿ

ಹಾಸ್ಯ ಸಂಜೆಗೆ ಬೆಳಗಾವಿಯಲ್ಲಿ ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ಸೇರಿರುವುದು ಅಭಿಮಾನದ ಸಂಗತಿ ಎಂದು ಪಾಪಾ ಪಾಂಡು ಖ್ಯಾತಿಯ ಎಂ.ಎಸ್.ನರಸಿಂಹಮೂರ್ತಿ ಹೇಳಿದರು.

ಶನಿವಾರ ನಗರದ ಐಎಂಇಆರ್ ಸಭಾಂಗಣದಲ್ಲಿ ಮದುವೆ ಸುಖ ಜೀವನಕ್ಕೆ ಕಾರಣವೇ ಎಂಬ ಹರಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಾಸ್ಯ ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯವಾಗಿದೆ. ಬೆಳಗಾವಿಯಂಥ ಜಿಲ್ಲೆಯಲ್ಲಿ ಹಾಸ್ಯ ಸಂಜೆಯ ಕಾರ್ಯಕ್ರಮಕ್ಕೆ ಕನ್ನಡದ ಹಾಸ್ಯ ಪ್ರೀಯರು ಇಷ್ಟೊಂದು ಸಂಖ್ಯೆಯಲ್ಲಿ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.

ಬಹಳ ಸರಳವಾದ ಜೋಕುಗಳನ್ನು ಹೇಳಿದಾಗ ಹಾಸ್ಯ ಪ್ರೀಯರಿಗೆ ಬಹು ಬೇಗವಾಗಿ ಮನಕ್ಕೆ‌ ಮುಟ್ಟುತ್ತದೆ. ಹಾಸ್ಯಕ್ಕೆ ತನ್ನದೆಯಾದ ಕೊಡುಗೆ ಇದೆ. ಅದನ್ನು ಆಹ್ವಾದಿಸುವ ಸ್ವಾದ ಎಲ್ಲರಿಗೂ ಇರಬೇಕು ಅಂದಾಗ ಮಾತ್ರ ಮನುಷ್ಯರು ಆರೋಗ್ಯ ಸದೃಢವಾಗಿರುತ್ತದೆ ಎಂದು ಹೇಳಿದರು.

ಐಎಂಇಆರ್ ಅಧ್ಯಕ್ಷ ಆರ್.ಎಸ್.ಮುತಾಲಿಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನುಷ್ಯರು ಕೆಲಸದ ಒತ್ತಡ ಹಾಗೂ ಟಿ.ವಿ.ಗಳ ಮುಂದೆ ಕುಳಿತು ಹಾಸ್ಯವನ್ನು‌ ದೂರ ಮಾಡಿಕೊಳ್ಳುತ್ತಿದ್ದಾರೆ. ಹರಟೆ ಹಾಗೂ ಹಾಸ್ಯದೊಂದಿಗೆ ಬೆರೆಯುವುದು ಅವಶ್ಯವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗುಂಡೇನಟ್ಟಿ ಮಧುಕರ, ಬೆಳಗಾವಿಯಲ್ಲಿ ಹಾಸ್ಯಕೂಟ 2014ರಲ್ಲಿ ಪ್ರಾರಂಭವಾಯಿತು. ಬೆಳಗಾವಿಯಲ್ಲಿ ಸಾಕಷ್ಟು ಸಂಘ, ಸಂಸ್ಥೆಗಳಿದ್ದವು.‌ಆದರೆ ಹಾಸ್ಯ ಪ್ರೀಯರಿಗೆ ಒಂದು ಸಂಘ ಇರಲಿಲ್ಲ. 2014 ಏಪ್ರಿಲ್ ನಲ್ಲಿ ಹಾಸ್ಯ ಕಾರ್ಯಕ್ರಮ ಪ್ರಾರಂಭವಾಗಿ ಈಗ ಹೆಮ್ಮರವಾಗಿ ಬೆಳೆದಿದೆ ಎಂದರು.

2014ರಿಂದ ಇಲ್ಲಿಯವರೆಗೂ ತಪ್ಪದೆ ಎರಡನೇ ಶನಿವಾರ ಹಾಸ್ಯ ಸಂಜೆ ಕಾರ್ಯಕ್ರಮ ಆಯೋಜನೆ ಮಾಡಿ ನಗೆಯಲ್ಲಿ ಸಾಧನೆ ಮಾಡಿದ ಗಂಗಾವತಿ ಪ್ರಾಣೇಶ ಸೇರಿದಂತೆ ಹಲವು ಗಣ್ಯರ ನೇತೃತ್ವದಲ್ಲಿ ಹಾಸ್ಯ ಸಂಜೆಯ ಬೃಹತ್ ಕಾರ್ಯಕ್ರಮ‌ ನಡೆಸಿದ್ದೇವು ಎಂದು ಹೇಳಿದರು.

ಜಿ.ಎಸ್.ಸೋನಾರ, ಶಾಂತಾ ಆಚಾರ್ಯ, ಬಿ.ಕೆ.ಕುಲಕರ್ಣಿ, ನಿರಜಾ ಗಣಾಚಾರಿ, ಎಲ್.ಎಸ್.ಶಾಸ್ತ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...