ಹಿಂದಿ ಹೇರಿಕೆಗೆ ಸತೀಶ ಜಾರಕಿಹೊಳಿ ವಿರೋಧ : “ಕನ್ನಡ ಭಾಷೆಯೇ ನಮಗೆ ಬಹು ಮುಖ್ಯ”

0
23

ಹಿಂದಿ ಹೇರಿಕೆಗೆ ಸತೀಶ ಜಾರಕಿಹೊಳಿ ವಿರೋಧ : “ಕನ್ನಡ ಭಾಷೆಯೇ ನಮಗೆ ಬಹು ಮುಖ್ಯ”

ಕನ್ನಡಮ್ಮ ಸುದ್ದಿ -ಗೋಕಾಕ:  ಕರ್ನಾಟಕದಲ್ಲಿ ಮೊದಲುಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು, ಕನ್ನಡ ಭಾಷೆಯೇ ನಮಗೆ ಬಹುಮುಖ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ  ಸತೀಶ ಜಾರಕಿಹೊಳಿ ಹಿಂದಿ ಹೇರಿಕೆಗೆ ವಿರೋಧ  ವ್ಯಕ್ತಪಡಿಸಿದ್ದಾರೆ.

ಗೋಕಾಕ ನಗರದ ಹಿಲ್ ಗಾರ್ಡನ್ ತಮ್ಮ ನಿವಾಸದಲ್ಲಿ  ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಈ ಹಿಂದೆಯೂ ದೇಶ್ಯಾದ್ಯಂತ ಹಿಂದಿ ಹೇರಿಕೆಗೆ ನಡೆದಿತ್ತು. ಹಲವು ರಾಜ್ಯಗಳು ಇದನ್ನು ಖಂಡಿಸಿದ್ದವು. ಮೊದಲು ಪ್ರಾದೇಶಿಕ ಭಾಷೆಗೆ ಒತ್ತು ನೀಡಬೇಕು. ಇಲ್ಲಿಯವರೆಗೂ  ಕನ್ನಡ ಭಾಷೆಯಲ್ಲಿ ಆಡಳಿತ ನಡೆಸಿದ್ದೇವೆ. ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಆ ನಂತರ  ಆಸ್ತಕಿ  ಇದ್ದವರು ತಮಗಿಷ್ಟದ ಭಾಷೆ ಕಲಿಯುತ್ತಾರೆ ಎಂದಿದ್ದಾರೆ .

ಇನ್ನು ಕೊರೊನ ವೇಳೆ ವೈದ್ಯಕೀಯ  ಸಿಬ್ಬಂದಿಗೆ ಅಗತ್ಯ ಸೌಲಭ್ಯ ನೀಡುವ ವಿಚಾರವಾಗಿ  ಪ್ರತಿಕ್ರಿಯಿಸಿದ ಅವರು , ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ಅಗತ್ಯ  ಸೌಲಭ್ಯಗಳನ್ನು ವಿತರಿಸಬೇಕು. ಕೆಲವು ಸಿಬ್ಬಂದಿಗಳಿಗೆ ವೇತನವಾಗಿಲ್ಲ. ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದನೆ ಮಾಡಬೇಕು.   ವೈದ್ಯಕೀಯ ಸಿಬ್ಬಂದಿಗಳಿಗೆ ವಿರೋಧ ಪಕ್ಷದ ಬೆಂಬಲ ನೀಡುತ್ತೆದೆ ಎಂದು ಹೇಳಿದ್ದಾರೆ .

loading...