ಹಿಂದೂಗಳು  ಈ ದೇಶದ ಕೇಂದ್ರ ಬಿಂದು;  ಭೈಯ್ಯಾಜಿ ಜೋಷಿ

0
6

ಪಣಜಿ-  ಭಾರತಕ್ಕಾಗಿ  ಶ್ರಮಿಸಲು  ಬಯಸುವವರು  ಹಿಂದೂಗಳಿಗಾಗಿ ಕೆಲಸ ಮಾಡಬೇಕಾಗುತ್ತದೆ ಎಂದು  ಹೇಳಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ಸುರೇಶ್ ಭೈಯ್ಯಾಜಿ ಜೋಶಿ,  ಹಿಂದೂಗಳು  ಈ  ದೇಶದ      ಕೇಂದ್ರ  ಬಿಂದು    ಎಂದು ತಿಳಿಸಿದ್ದಾರೆ.
“ವಿಶ್ವಗುರು ಭಾರತ…       ರಾಷ್ಟ್ರೀಯ  ದೃಷ್ಟಿಕೋನ”  ಕುರಿತ ಎರಡು ದಿನಗಳ ಸಮಾವೇಶದಲ್ಲಿ  ಪಾಲ್ಗೊಳ್ಳಲು      ಗೋವಾದಲ್ಲಿರುವ  ಜೋಶಿ  ಆಂಗ್ಲ ಪತ್ರಿಕೆಯೊಂದಕ್ಕೆ  ನೀಡಿರುವ  ಸಂದರ್ಶದಲ್ಲಿ  ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತವನ್ನು  ಹಿಂದೂಗಳಿಂದ  ಬೇರ್ಪಡಿಸಿ  ನೋಡಲು  ಸಾಧ್ಯವಿಲ್ಲ.       ಭಾರತ ಇನ್ನೂ  ಜೀವಂತವಾಗಿದ್ದರೆ,       ಅದಕ್ಕೆ ಹಿಂದೂಗಳು  ಕಾರಣವಾಗಿದ್ದಾರೆ.  ಈ ರಾಷ್ಟ್ರದ  ಕೇಂದ್ರ ಬಿಂದು  ಹಿಂದೂಗಳು  ಆಗಿದ್ದಾರೆ. ಹಾಗಾಗಿ ,  ಈ ದೇಶದಲ್ಲಿ ಯಾರು ಕೆಲಸ ಮಾಡಲು ಬಯಸುತ್ತಾರೋ ಅವರು ಹಿಂದೂ ಸಮುದಾಯಕ್ಕಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಜೋಶಿ ಹೇಳಿದ್ದಾರೆ.
ಹಿಂದೂ ಸಮುದಾಯವನ್ನು ಬಲಪಡಿಸಲು, ಹಿಂದೂ ಸಮಾಜದ ಬಗ್ಗೆ ಜಾಗೃತಿ ಮೂಡಿಸಬೇಕು” ಎಂದು ಅವರು  ತಿಳಿಸಿದ್ದಾರೆ.
ಇದರರ್ಥ  ಮತ್ತೊಂದು  ಧರ್ಮದ  ವಿರುದ್ದ  ಕೆಲಸ ಮಾಡಬೇಕು ಎಂದಲ್ಲ,  ಪ್ರಾಥಮಿಕವಾಗಿ  ಹಿಂದೂಗಳಿಗಾಗಿ ಕೆಲಸಮಾಡಬೇಕು  ಎಂದು ಅವರು  ಹೇಳಿದ್ದಾರೆ.

loading...