ಹಿಂದೆ ಕಂಡ ಆನೆಗಳು ಗಣತಿ ಕಾರ್ಯದಲ್ಲಿ ಕಾಣಲಿಲ್ಲ- ದಟ್ಟಾರಣ್ಯದಲ್ಲಿ ಕಂಡದ್ದು ಒಂದೇ ಆನೆ – ಖಾಯಂ ವಾಸದ ಕುರುಹು ಸಿಕ್ಕಿಲ್ಲ

0
2510

ಮಹಾರಾಷ್ಟ್ರ ಅರಣ್ಯ ಪ್ರದೇಶದಿಂದ ಆನೆಗಳು ಕಾಕತಿ, ದಡ್ಡಿ ಪ್ರದೇಶಕ್ಕೆ ಬರುತ್ತವೆ.
ಬೆಳಗಾವಿ ಭಾಗದಿಂದ ಬಂದು ಧಾಮಣೆ ಮತ್ತು ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಬಂದು ವಾಸಿಸುತ್ತವೆ. ಮುಖ್ಯವಾಗಿ ಈ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತವೆ.

ಕನ್ನಡಮ್ಮ ಸುದ್ದಿ
ಬೆಳಗಾವಿ:20 ಖಾನಾಪುರ ಅರಣ್ಯ ಪ್ರದೇಶದಲ್ಲಿ ಸದ್ಯ ಆನೆಗಳ ಗಣತಿ ಕಾರ್ಯ ನಡೆದಿದೆ. ಬೆಳಗಾವಿ ಅರಣ್ಯ ಪ್ರದೇಶದಲ್ಲಿ ಸೆಪ್ಟಂಬರ್‍ನಿಂದ ಜನವರಿವರೆಗೆ ಸುಮಾರು 15 ರಿಂದ 20 ಆನೆಗಳು ಕಂಡು ಬರುವುದಾದರೂ ಅಧಿಕಾರಿಗಳು ಮಾತ್ರ ಒಂದೇ ಆನೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಭೀಮಗಡ ವನ್ಯಜೀವಿ ಧಾಮದಲ್ಲಿ ಆನೆಗಳ ಕಾಯಂ ವಾಸಸ್ಥಾನವಿಲ್ಲ, ಆದರೆ ಆನೆಗಳು ಆಹಾರ ಅರಸಿ ದಾಂಡೇಲಿ ಅಭಯಾರಣ್ಯದಿಂದ ವಲಸಿ ಬರುತ್ತವೆ. ಬೆಳಗಾವಿ ವಿಭಾಗದ ಗೋಲಿಹಳ್ಳಿ ವಲಯ ಅರಣ್ಯದಲ್ಲಿ ಒಂದು ಆನೆ ಇದೆ. ಅದು ಗಣತಿ ವೇಳೆ ಅಲ್ಲಿಯೇ ಕಂಡು ಬಂದಿದೆ. ಅದರ ಮಾಹಿತಿ ಈ ಗಣತಿಯಲ್ಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ದಾಂಡೇಲಿ, ಹಳಿಯಾಳ ಅರಣ್ಯ ವಲಯ ಪ್ರದೇಶದಿಂದ ಆನೆಗಳು ಬಂದು ಗೋಲಿಹಳ್ಳಿ, ನಾಗರಗಾಳಿ ಮತ್ತು ಲೋಂಡಾ ಪ್ರದೇಶದ ಕಾಡಿನಲ್ಲಿ ವಾಸಿಸುತ್ತವೆ.
ಮಹಾರಾಷ್ಟ್ರ ಅರಣ್ಯ ಪ್ರದೇಶದಿಂದ ಆನೆಗಳು ಕಾಕತಿ, ದಡ್ಡಿ ಪ್ರದೇಶಕ್ಕೆ ಬರುತ್ತವೆ.
ಬೆಳಗಾವಿ ಭಾಗದಿಂದ ಬಂದು ಧಾಮಣೆ ಮತ್ತು ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಬಂದು ವಾಸಿಸುತ್ತವೆ. ಮುಖ್ಯವಾಗಿ ಈ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತವೆ.
1970 ರಲ್ಲಿ ಮೊಟ್ಟ ಮೊದಲ ಸಲ ಅನೆ ಗಣತಿ ನಡೆದಿದೆ. ಗಣತಿ ಕಾರ್ಯವನ್ನು ಬ್ಲಾಕ್ ಹಂತದಲ್ಲಿ ಎಣಿಕೆ ಮಾಡಲಾಗುತ್ತಿದೆ. ಜತೆಗೆ ವಾಟರ್ ಹೋಲ್ ಎಣಿಕೆ ಕಾಆರ್ಯ ನಡೆಯುತ್ತಿದೆ. ಅಂದರೆ ಇದು ಕಾಡಿನಲ್ಲಿ ನೀರು ಕುಡಿಯಲು ಬಂದಾಗ ಆನೆಗಳನ್ನು ಎಣಿಸಲಾಗುತ್ತದೆ.ಕೊನೆಯದಾಗಿ ಲೈನ್ ಕೌಂಟಿಂಗ್ ಮೂಲಕ ಎಣಿಕೆ ಮಾಡಲಾಗುತ್ತದೆ. ಇದಕ್ಕೆ ಡಂಗ್ ಎಣಿಕೆ ಎನ್ನಲಾಗುತ್ತದೆ. ಡಂಗ್ ಎಂದರೆ ದೂರ ಮಾಪನ ಅಳವಡಿಸಿ ಹಗೂ ಆನೆಯ ಲದ್ದಿ ಮೂಲಕ ಎಣಿಕೆ ಮಾಡಲಾಗುತ್ತದೆ.
ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಕ್ಕೆ ಹೊಂದಿಕೊಂಡಿದೆ. ಮೂರು ರಾಜ್ಯಗಳಲ್ಲಿ ಆನೆಯ ಸಂತತಿಯ ವಾಸಸ್ಥಾನ ಇದೆ. ಖಾನಾಪುರ ತಾಲೂಕು ಪಕ್ಕದ ದಾಂಡೇಲಿ, ಖಾನಾಪುರ, ಗೋಲಿಹಳ್ಳಿ ಹಾಗೂ ನಾಗರಗಾಳಿ, ಜಾಂಬೋಟಿ, ಕಣಕುಂಬಿ, ಶಿರೋಲಿ ವಲಯ ಪ್ರದೇಶಗಳಿಗೆ ಅಕ್ಟೋಬರ್‍ನಿಂದ ಜೂನ್ ವರೆಗೆ ಭತ್ತದ ಗದ್ದೆಯ ಆಹಾರ ಆರಿಸಿ ವಲಸೆ ಬರುತ್ತವೆ.
ಆನೆಯ ವಯಸ್ಸು, ಲಿಂಗಕ್ಕನುಗುಣವಾಗಿ ಪ್ರತ್ಯೇಕ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತದೆ. ಆನೆಯ ಗಣತಿಯನ್ನು ಆನೆಯ ಚಲನ ವಲನ ಇರುವ ಪ್ರದೇಶದಲ್ಲಿ ನಕ್ಷೆ ತಯಾರಿಸಿ ಅದರ ಹೆಜ್ಜೆಯ ಗುರುತುಗಳನ್ನು ವೀಕ್ಷಿಸಲಾಯಿತು. ಹೆಣ್ಣು, ಗಂಡು ಹಾಗೂ ಮರಿಗಳನ್ನು ವಿಭಜಿಸಿ ಗಣತಿ ನಡೆಸಲಾಗುತ್ತದೆ.

ಕಾಡಿನಲ್ಲಿ ಬಿದಿರು ಹೆಚ್ಚಿರುವುದರಿಂದ ಅವುಗಳನ್ನು ತಿನ್ನಲು ಹೆಚ್ಚು ಅವಲಂಬಿತವಾಗಿವೆ. ಬಿದಿರು ಪ್ರತಿ 35-40 ವರ್ಷಕ್ಕೊಮ್ಮೆ ಹೂವು ಬಿಡುತ್ತದೆ. ಕಳೆದ ಮೂರು ವರ್ಷದ ಹಿಂದೆ ಬೆಳಗಾವಿ ಅರಣ್ಯ ವಿಭಾಗದಲ್ಲಿ ಬಿದಿರಿನ ಹೂವು ಉದುರಿದ್ದರಿಂದ ಬಿದಿರು ಅವನತಿ ಹೊಂದಿದೆ. ಈಗ ಅದು ಚಿಗುರೊಡೆಯುತ್ತಿದೆ.
ಬಿ.ವಿ.ಪಾಟೀಲ
ಡಿಎಫ್‍ಒ ಬೆಳಗಾವಿ

loading...