ಹಿರೆಹೊನ್ನಿಹಳ್ಳಿಯಲ್ಲಿ ಶ್ರೀ ರೇಣುಕಾಚಾರ್ಯರ ಜಯಂತ್ಸೋವ

0
52


ಕಲಘಟಗಿ 28: ನಮ್ಮ ಸುತ್ತಲಿನ ಸಮಾಜದಲ್ಲಿ ಸೇವಾ ಮನೋಭಾವನೆಯಿಂದ ಕಾರ್ಯೊನ್ಮುಖರಾದಾಗ ಮಾತ ಶಾಂತಿ/ಸಮೃಧ್ದಿಯುಂದ ಬದುಕಲು ಸಾಧ್ಯ ಎಂದು ಶ್ರೀಶೈಲ ಶ್ರೀ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡುತ್ತಿದ್ದರು. ಆಚಾರ್ಯರ ಜನ್ಮ ದಿನವನ್ನು ಹಾಗೂ ಯುಗಮಾನೋತ್ಸವ ಆಚರಿಸುವುದರಿಂದ ಅವರ ಆದರ್ಶಗಳನ್ನು ಅರಿತು ಅಂತಹ ಮಹನೀಯರಿಗೆ ನಾವು ಗೌರವ ಸಮರ್ಪಿಸಿದ್ದಂತಾಗುತ್ತದೆ ಹಾಗೂ ಮನುಷ್ಯರು ಪರಮಾತ್ಮನ ದ್ಯಾನ ಪೂಜೆ ದಾನ ಧರ್ಮಗಳಲ್ಲಿ ನಂಬಿಕೆ ಇಡಿ.ಯೋಗ ಸಾಧನೆÉಯಿಂದ ಅದ್ಭತವಾದ ಶಕ್ತಿ ಮಾನವರಲ್ಲಿ ಜಾಗೃತವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಜಿ,ಪಂ. ಸದಸ್ಯೆ ಈರವ್ವ ದಾಸನಕೊಪ್ಪ ನೆರವೆರಿಸಿದರು. ಹನ್ನೇರಡುಮಠದ ಶ್ರೀ ರೇವಣಶಿದ್ಧ ಶಿವಾಚಾರ್ಯ ಸ್ವಾಮಿಜಿ,ಗ್ರಾ ಪಂ ಅಧ್ಯಕ್ಷ ಸಹದೇವ ಧನಿಗೊಂಡ,ವಿಜಯಪೂರ ಕರಿಮಂಠನಾಳದ ಶಿವಕುಮಾರ ಸ್ವಾಮಿಜಿ,ಯಲ್ಲಪ್ಪ ದಾಸನಕೊಪ್ಪ ಮಾತನಾಡಿದರು.ಇದಕ್ಕೂ ಮುನ್ನ ಸಂಜೆ ಶ್ರೀ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳನ್ನು ಮಂಗಲವಾಧ್ಯಗಳೊಂದಿಗೆ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆತರಲಾಯಿತು.ತಾ ಪಂ ಸದಸ್ಯೆ ಬಸವ್ವ ಮೂಗಣ್ಣವರ,ಗ್ರಾ ಪಂ ಉಪಾಧ್ಯಕ್ಷೆ ಶಂಕ್ರವ್ವ ಮಡ್ಲಿ,ಚನ್ನಪ್ಪ ಕೊಣಗೂಣಿಸಿ,ಶಂಕ್ರಲಿಂಗ ಕೆಲಗೇರಿ,ಚಂದ್ರಗೌಡ ಪಾಟೀಲ,ಹಾಲಯ್ಯ ಹಿರೇಮಠ,ಗುರುಸಿದ್ದಪ್ಪ ಮೂಗದ ಮುಂತಾದವರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here