ಹುಕ್ಕೇರಿ ತಾಲೂಕಿಗೆ ಇಂದು “ಅ”ಮಂಗಳವಾರ ಒಂದೆ ದಿನ ತಾಲೂಕಿನಲ್ಲಿ ೨೧ ಜನರಲ್ಲಿ ಕೊರೊನ ಸೊಂಕು ಪತ್ತೆ

0
79

ಹುಕ್ಕೇರಿ ತಾಲೂಕಿಗೆ ಇಂದು “ಅ”ಮಂಗಳವಾರ
ಒಂದೆ ದಿನ ತಾಲೂಕಿನಲ್ಲಿ ೨೧ ಜನರಲ್ಲಿ ಕೊರೊನ ಸೊಂಕು ಪತ್ತೆ

ಕನ್ನಡಮ್ಮ ಸುದ್ದಿ-ಸಂಕೇಶ್ವರ : ಬೆಳಗಾವಿ ಜಿಲ್ಲೆಯ ಪಾಲಿಗೆ ಇಂದು ಅಮಂಗಳವಾರವಾಗಿ ಪರಿಣಮಿಸಿದೆ .ಇಂದು ಸಂಜೆ ಬಿಡುಗಡೆಯಾದ ಹೆಲ್ತ್ ಬುಲಿಟಿನ್ ಪ್ರಕಾರ ಕುಂದಾನಗರಿಯಲ್ಲಿ ಬರೋಬರಿ ೫೧ ಕೊರೊನ ಪ್ರಕರಣ ಪತ್ತೆಯಾಗಿದ್ದು ,ಈ ಮೂಲಕ ಕೊರೊನ ಗ್ರಾಮೀಣ ಭಾಗದ ಜನರನ್ನ ಬೆಚ್ಚಿ ಬಿಳಿಸಿದೆ . ಈ ಪೈಕಿ ಹುಕ್ಕೇರಿ ತಾಲೂಕಿನಲ್ಲಿ ಇಂದು ೨೧ ಪ್ರಕರಣ ಪತ್ತೆಯಾಗಿವೆ .

ಇಂದು ಪತ್ತೆಯಾದ ಬಹುತೇಕ ಸೊಂಕಿತರು ಮಹಾರಾಷ್ಟ್ರದ ವಲಸಿಗರಾಗಿದ್ದಾರೆ.ಇದಕ್ಕೆ ಜಿಲ್ಲಾಡಳಿತ ಹಾಗೂ ತಾಲೂಕು ಆಡ  ಯಡವಟ್ಟಿಂದ ಗ್ರಾಮಗಳಿಗೂ ಡೆಡ್ಲಿ ಕೊರೊನಾ ಎಂಟ್ರಿ ಕೊಟ್ಟಿದ್ದು ಎಂಬ ಮಾತು ಕೇಳಿ ಬಂದಿದೆ . ಮುಂಬೈನಿಂದ ವಾಪಸ್ ಆಗಿದ್ದ ಹಲವರಲ್ಲಿ ಕೊರೊನಾ ಸೋಂಕು ದೃಡವಾಗಿದ್ದು ,ಮುಂಬೈ ನಂಜು ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬಿದೆ.

ವರದಿ ಬರೋ‌ ಮೊದಲೇ ಕ್ವಾರಂಟೈನ್ ಕೇಂದ್ರದಿಂದ ಮನೆಗೆ ಬಿಡುಗಡೆ ಮಾಡಿದವರಲ್ಲೇ ಸೋಂಕು ಕಾಣಿಸಿಕೊಂಡಿದ್ದು. 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ದು ವ್ಯರ್ಥ ಆದಂತಾಗಿದೆ.

ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಕ್ಷೇತ್ರದ ದಡ್ಡಿ, ಕೋಟ್, ಬೀದ್ರೆವಾಡಿ, ದುಂಡಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇಂದು 21 ಜನರಿಗೆ ಕೊರೊನಾ ವೈರಸ್ ತಗುಲಿದ್ದು, ತಾಲೂಕು ಆಡಳಿತ ಹರ ಸಾಹಸ ಮಾಡಿ ಪಾಸಿಟಿವ್ ಜನರನ್ನು ಸ್ಥಳಾಂತರ ಮಾಡುತ್ತಿದ್ದಾರೆ.
ಯಮಕನಮರ್ಡಿ ಭಾಗದ ದಡ್ಡಿ ಗ್ರಾಮದಲ್ಲಿ – 12, ಕೋಟ್ – 3, ಮೋದಗಾ -2, ಮನಗುತ್ತಿ – 2 , ಬೀದ್ರೇವಾಡಿ – 1, ದುಂಡಗಟ್ಟಿ 2, ಹೀಗೆ ಒಟ್ಟು 21 ಜನರಿಗೆ ಕೊರೊನಾ ವೈರಸ್ ತಗುಲಿದೆ.

loading...