ಹುಕ್ಕೇರಿ ತಾಲೂಕಿಗೆ ತಪ್ಪದ ಕೊರೊನ ಕಾಟ: ಇಂದು ಮತ್ತೆ 27 ಜನರಲ್ಲಿ ಸೊಂಕು ದೃಡ

0
170

ಹುಕ್ಕೇರಿ ತಾಲೂಕಿಗೆ ತಪ್ಪದ ಕೊರೊನ ಕಾಟ: ಇಂದು ಮತ್ತೆ 27 ಜನರಲ್ಲಿ ಸೊಂಕು ದೃಡ

ಕನ್ನಡಮ್ಮ ಸುದ್ದಿ-ಸಂಕೇಶ್ವರ : ಕೊರೊನ ಸೊಂಕು ತನ್ನ ಅಟ್ಟಹಾಸ ಮುಂದುವರೆದಿದ್ದು ,ಬೆಳಗಾವಿ ಜಿಲ್ಲೆಯಲ್ಲಿ ತನ್ನ ರುದ್ರ ನರ್ತನ ಮುಂದುವರೆಸಿದ್ದು ,ಈ ಪೈಕಿ ಹುಕ್ಕೇರಿ ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ ಹೆಚ್ಚುತ್ತ ಸಾಗಿದ್ದು ,ಇಂದು ಮತ್ತೆ 27 ಜನರಲ್ಲಿ ಕೊರೊನ ಸೊಂಕು ದೃಡ ಪಟ್ಟಿದೆ .

ಹುಕ್ಕೇರಿ ತಾಲೂಕಿನಲ್ಲಿ ಗುರುವಾರ 27 ಜನರಿಗೆ ಕೊರೊನಾ ಸೋಂಕು ದೃಡಪಟ್ಟು ತಾಲೂಕಿನ ಜನರಲ್ಲಿ ಆತಂಕ ಹೆಚ್ಚಿಸಿದೆ .
ಇಂದು ಅತಿ ಹೆಚ್ಚು ಕೋವಿಡ್ ಕೇಸ್ ದೃಡ ಪಟ್ಟಿದ್ದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾದರೆ ಅಧಿಕಾರಿಗಳು ಸೋಂಕೀತರ ಮತ್ತು ಅವರ ಸಂಪರ್ಕದ ವ್ಯಕ್ತಿಗಳ ಪತ್ತೆ ಹಚ್ಚುವದು ಹಾಗೂ ಸೋಂಕಿತರ ಮನೆಯಿಂದ 50 ಮೀಟರ್ ಸುತ್ತಲು ಶಿಲ್ ಡೌನ ಮಾಡುವ ಕಾರ್ಯ ಮಾಡುತ್ತಿದ್ದಾರೆ.

ಇಂದು ಪತ್ತೆಯಾದವರು ಹುಕ್ಕೇರಿ ನಗರದಲ್ಲಿ 1, ಶಿರಗಾಂವ ಗ್ರಾಮದಲ್ಲಿ 11, ಅವರಗೋಳ ಗ್ರಾಮದಲ್ಲಿ 5, ನೋಗಿನ್ಯಾಳ ಗ್ರಾಮದಲ್ಲಿ 1, ಸುಲ್ತಾನಪೂರ ಗ್ರಾಮದಲ್ಲಿ 5, ಬೆಣಿವಾಡ , ಮದಿಹಳ್ಳಿ ಮತ್ತು ಬೆಲ್ಲದ ಬಾಗೆವಾಡಿ ಗ್ರಾಮಗಳಲ್ಲಿ ಸೋಂಕಿತರ ಮಾದರಿ ಪಾಸೀಟಿವ್ ಬಂದಿದೆ ಒಟ್ಟು 27 ಜನರಲ್ಲಿ ಸೊಂಕು ಕಾಣಿಸಿಕೊಂಡಿದೆ .

loading...