ಹುಕ್ಕೇರಿ ತಾಲೂಕಿನ ಹುಲ್ಲೌಳಿಹಟ್ಟಿ ಗ್ರಾಮದ ದಿವ್ಯಜ್ಯೌತಿ ಲಿಂಗೈಕ್ಯ ಗುರುಸಿದ್ದ ಅಜ್ಜನವರ 12 ನೇ ಪುಣ್ಯ ಸ್ಮರಣೆ

0
6

 

.

 

ಮಾನವನು ತನ್ನ ಬದುಕಿಗಾಗಿ ಅಂದರೆ ಶರೀರ ಸಂಪತ್ತಿಗಾಗಿ, ಐಹಿಕ ಭೋಗ ಭಾಗ್ಯಗಳಿಗಾಗಿ ತನ್ನ ಇಡೀ ಜೀವಮಾನವನ್ನೇ ಕಳೆಯುತ್ತಿದ್ದು, ನಿಜ ಸುಖದ ಅರಿವು ಆತನಿಗೆ ಇಲ್ಲದೇ ಇರುವದರಿಂದ ಭಗವಂತನು ಕರುಣಿಸಿದ ಮಾನವ ಜನ್ಮವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾನೆ ಆದರೆ ಎಲ್ಲರೂ ಕೇವಲ ಐಹಿಕ ಸುಖಕ್ಕಾಗಿ ಬಳಲದೇ ತನ್ನ ತಾನು ಅರಿತುಕೊಂಡು ನಿಜ ಸುಖದ ಪರಮಾನಂದವನ್ನು ಸವಿಯುತ್ತಾರೆ ಅವರೇ ಮಹಾತ್ಮರು, ಶರಣರು, ಸಂತರು, ಋುಷಿಗಳು ಎನ್ನಿಸಿಕೊಳ್ಳುತ್ತಾರೆ. ಅವರು ತಮ್ಮ ಜೀವನವನ್ನಷ್ಟೆ ಅಲ್ಲ ಎಲ್ಲ ಮಾನವ ಕುಲಕೋಟಿಯ ಉದ್ದಾರಕ್ಕಾಗಿ ಶ್ರಮಿಸುತ್ತಾರೆ, ಅಂತಹವರ ಸಾಲಿನಲ್ಲಿ ನಿಲ್ಲುವ ಶರಣರೇ ಹುಲ್ಲೌಳಿಹಟ್ಟಿಯ ಶರಣ ಸದ್ಗುರು ಗುರುಸಿದ್ದ ಅಜ್ಜನವರು.

ಗುರುಸಿದ್ದ ಅಜ್ಜನವರು, ಬಾಲ್ಯದಿಂದಲೇ ಆದ್ಯಾತ್ಮಿಕ ಚಿಂತನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಶಿರಗೂರದ ಸದ್ಗುರು ಕಲ್ಮೇಶ್ವರ ಮಹಾರಾಜರಿಂದ ಆಧ್ಯಾತ್ಮಿಕ ದೀಕ್ಷೆ ಪಡೆದು ಗುರುವಿನ ಅಂತ:ಕರಣದ ಉಪದೇಶಾಮೃತವನ್ನು ಪಡೆದು ತಮ್ಮ ಜೀವನವನ್ನು ಸಾರ್ಧಕ ಮಾಡಿಕೊಂಡ ಮಹಾತ್ಮರು.  ಸದಾ ಆಧ್ಯಾತ್ಮಿಕ ಚಿಂತನೆಯಲ್ಲಿಯೆ ತೊಡಗಿದ ಇವರು ಲೌಖಿಕದೊಂದಿಗೆ ಪಾರಮಾರ್ಥಿಕ ಜಿಂತನೆಯಲ್ಲಿ ತೊಡಗಿಸಿಕೊಂಡು ಶಿಜಾಣನು ಲೌಖಿಕ ಪಾರಮಾರ್ಥವೆರಡನು ಮಾನದಿಂ ನಡೆಸುತಿಹನಿಂತುಷಿ ಎಂಬ ನಿಜಗುಣರ ಉಕ್ತಿಯಂತೆ ನಡೆದು ತೋರಿಸಿದವರು ಗುರುಸಿದ್ದಜ್ಜನವರು ಪ್ರಪಂಚದಲ್ಲಿ ಇದ್ದು ಇಲ್ಲದಂತೆ ಇದ್ದ ಇವರು ಪ್ರತಿ ನಿತ್ಯ ಭಜನೆ ಮಾಡುತ್ತ ಆಧ್ಯಾತ್ಮಿಕ ರಸಗವಳವನ್ನು ಉಣಬಡಿಸುತ್ತ ಎಲ್ಲರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದರು, ಅವರು ಎಲ್ಲಿ ಇರುತ್ತಿದ್ದರೋ ಅಲ್ಲಿ ಯಾವುದೇ ಸಮಯವಾಗಲಿ, ಯಾವುದೇ ಸ್ಥಳವಾಗಲಿ ಅಲ್ಲಿ ಅವರು ಆಧ್ಯಾತ್ಮಿಕ ಚಿಂತನೆಯಲ್ಲಿ ಮಗ್ನರಾಗುತ್ತಿದ್ದರು, ಅವರ ಜೀವನದಲ್ಲಿ ಆಧ್ಯಾತ್ಮಿಕತೆಯು ಹಾಸು ಹೊಕ್ಕಾಗಿತ್ತು.

ತಮ್ಮ ಜೀವನ ಪರ್ಯಂತ ಹುಲ್ಲೌಳಿಹಟ್ಟಿ ಗ್ರಾಮವಲ್ಲದೇ ಹುಕ್ಕೇರಿ ತಾಲೂಕಿನ ಶಿರಹಟ್ಟಿ, ಸಾರಾಪೂರ, ಕುರಣಿ, ಹಂಚಿನಾಳ ಇನ್ನೂ ಹತ್ತು ಹಲವು ಗ್ರಾಮಗಳಲ್ಲಿ ಭಜನಾ ಮಂಡಳಗಳನ್ನು ಹುಟ್ಟು ಹಾಕಿ ಸಾಮಾನ್ಯರಲ್ಲಿ ಹುದುಗಿದ ಅಸಾಮಾನ್ಯ ಶಕ್ತಿಯನ್ನು ಹೊರಹೊಮ್ಮಿಸಿ ಮಾನವ ಜನ್ಮದ ಸಾರ್ಥಕತೆಯನ್ನು ತಿಳಿಸಿಕೊಟ್ಟರು. ಸುತ್ತಲಿನ ಹಲವಾರು ಗ್ರಾಮಗಳಲ್ಲದೆ ನೆರೆಯ ಮಹಾರಾಷ್ಟ್ತ್ರದ ಹಲವಾರು ಗ್ರಾಮಗಳಲ್ಲಿ ಮೇಲಿಂದ ಮೇಲೆ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಜನರಲ್ಲಿ ಭಕ್ತಿ ಭಾವಗಳನ್ನು ತುಂಬುತ್ತ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದರೊಂದಿಗೆ ಅವರಿಂದ ಸಹಸ್ರಾರು ಜನ ಮಾನವ ಜನ್ಮದ ಗುಟ್ಟನ್ನು ಅರಿಯುವಲ್ಲಿ ಸಾಫಲ್ಯತೆಯನ್ನು ಕಂಡುಕೊಳ್ಳುವಂತಾಗಿದೆ. ಇಂದಿನವರೆಗೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಹುಲ್ಲೌಳಿಹಟ್ಟಿ ಗ್ರಾಮದ ಜನತೆ ಹಾಗೂ ಸುತ್ತಲಿನ ಗ್ರಾಮಗಳಲ್ಲಿಯ ಅವರ ಪ್ರಭಾವಳಿಗೆ ಬಂದ ಎಲ್ಲರೂ ಅವರ ಪುಣ್ಯಾರಾಧನೆಯಲ್ಲಿ ತೊಡಗಿಕೊಂಡು ಭಗವತ್ಚಿಂತನೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.  ಇಂತಹ ಪುಣ್ಯ ಪುರುಷರ ಪುಣ್ಯಾರಾಧನೆಯು ಇದೇ ತಿಂಗಳು ಬುಧವಾರ ದಿನಾಂಕ: 05.10.2011 ರಂದು ಜರುಗಲಿದ್ದು, ಸಾಯಂಕಾಲ ಪೂಜೆ, ಪ್ರವಚನ ಹಾಗೂ ಭಜನೆಗಳೊಡಗೂಡಿ ಬೆಳಗಿನ ಜಾವದವರೆಗೆ ಜರುಗಿ ಮುಂಜಾನೆ ಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಲ ಹೊಂದುವದು. ಪುಣ್ಯಾರಾಧನೆಯಲ್ಲಿ ಮನ ನೀಡಿ ತನುವ ತೊಡಗಿಸಿ ಪುಣೀತರಾಗೋಣ ಬನ್ನಿ.

 

ಲೇಖನ : ಬಿ.ಎಸ್.ಪಾಟೀಲ ಹುಕ್ಕೇರಿ

 

loading...

LEAVE A REPLY

Please enter your comment!
Please enter your name here