ಹುಕ್ಕೇರಿ ನೀರಾವರಿ ಯೋಜನೆಯನ್ನು ಹೋರಾಟದ ಮೂಲಕವೇ ಪಡೆದುಕೊಳ್ಳಬೇಕು: ಸಚಿವ ಎ.ಬಿ.ಪಾಟೀಲ

0
36

ಹುಕ್ಕೇರಿ07:  ಹುಕ್ಕೇರಿ ಪಟ್ಟಣದ ಜನತೆ ಮುಗ್ಧರಾಗಿರುವುದರಿಂದ ನೀರಾವರಿ ಯೋಜನೆಯನ್ನು ಹೋರಾಟದ ಮೂಲಕ ಪಡೆದುಕೊಳ್ಳಬೇಕಾದ ಪ್ರಸಂಗ ಬಂದಿದೆ ಎಂದು ಮಾಜಿ ಸಚಿವ ಎ.ಬಿ.ಪಾಟೀಲ ನುಡಿದರು.
ಹಳೇ ತಹಶೀಲ್ದಾರ ಕಾರ್ಯಾಲಯದೆದುರು ರೈತ ಹಿತರಕ್ಷಣಾ ವೇದಿಕೆಯವರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಳೆದ ತಿಂಗಳಿನಿಂದ ಪಟ್ಟಣದ ಜನರಲ್ಲಿ ನೀರಾವರಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಭೆಗಳ ಮೂಲಕ ಜನ ಜಾಗೃತಿ ಉಂಟು ಮಾಡಿದ ಬಳಿಕ ಸಾವಿರಾರು ಜನತೆ ಎಚ್ಚೆತ್ತುಕೊಂಡದ್ದು ವಿಷಾದಕರ.ಸಂಕೇಶ್ವರ ಪಟ್ಟಣಕ್ಕೆ ತಮ್ಮ ಅವಧಿಯಲ್ಲಿ ಕುಡಿಯುವ ನೀರಿನ ಯೋಜನೆ ಪ್ರಾರಂಭವಾದ ನಂತರ ಹುಕ್ಕೇರಿಗೆ ಬಂದಿದೆ.ತಾವು ಚುನಾವಣೆಯಲ್ಲಿ ಮತಗಳನ್ನು ಹಣಕ್ಕೆ ಮಾರಿಕೊಳ್ಳುವ ಮೂಲಕ ಈ ದುರ್ಗತಿ ಬಂದಿದೆ ಎಂದರು.ಕೇವಲ 3 ಕಿ.ಮೀ ಅಂತರದಲ್ಲಿ ನದಿಯ ನೀರು ದೊರಕುವಂತಿದ್ದರು, ಪಟ್ಟಣದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರಕಿಲ್ಲವೆಂದರೆ ತಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳ ಕಾಳಜಿ ಪ್ರಶ್ನಿಸುವಂತಿದೆ.ಆದರೂ ಸುಮ್ಮನಿರುವುದನ್ನು ಕಂಡರೆ ಅತ್ಯಂತ ನೋವಿನ ಸಂಗತಿ.ಇನ್ನಾದರೂ ಎಚ್ಚೆತ್ತುಕೊಂಡು ಹೋರಾಟ ಮಾಡಿ ನಿಮ್ಮ ಅಭಿವೃದ್ಧಿಗೆ ಶೃಮಿಸುವಂತಹವರನ್ನು ಬೆಂಬಲಿಸಿ ಎಂದರು.ತಮ್ಮ ಬೇಡಿಕೆ ಕುರಿತು ನೀರಾವರಿ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ.ಬರುವ ಶುಕ್ರವಾರ ಅಧಿಕಾರಿಗಳು ಆಗಮಿಸಿ ಸರ್ವೆ ಮಾಡಿ ಕ್ರಿಯಾ ಯೋಜನೆ ತಯಾರಿಸಲು ಸೂಚಿಸಿದ್ದೇನೆ ಎಂದರು.ಆದಷ್ಟು ಬೇಗ ತಮ್ಮ ಹೋರಾಟಕ್ಕೆ ಪ್ರತಿಫಲ ದೊರಕುತ್ತದೆ ಎಂದು ಭರವಸೆಯಿತ್ತರು.

ಡಿ.ಸಿ.ಸಿ ಬ್ಯಾಂಕ ನಿರ್ದೇಶಕ ಹಿರಿಯ ಸಹಕಾರಿ ಡಿ.ಟಿ.ಪಾಟೀಲ ಹಾಗೂ ಬಿ.ಆರ್ ಸಂಗಪ್ಪಗೋಳ ಮಾತನಾಡಿ ಹಣ ಮತ್ತು ಹೆಂಡಕ್ಕೆ ಮತ ಮಾರಿಕೊಳ್ಳಬೇಡಿ,ಒಂದು ವೇಳೆ ಅಂತಹ ಆಮಿಷ ಸ್ವೀಕರಿಸಿದರು.ಕೊಟ್ಟವರು ತಮ್ಮ ಕಿಸೆಯಿಂದ ಕೊಟ್ಟಿರುವುದಿಲ್ಲ.ಆದ್ದರಿಂದ ಯೋಗ್ಯ ವ್ಯಕ್ತಿಗಳಿಗೆ ಮತ ನೀಡಿ ಆಯ್ಕೆಗೊಳಿಸಿ ಎಂದರು. ಚಂದ್ರಶೇಖರ ಗಂಗನ್ನವರ, ಡಾ.ಎಸ್.ಕೆ.ಮಕಾನದಾರ, ಸೋಮಶೇಖರ ಮಠಪತಿ, ವಸಂತ ನಿಲಜಗಿ, ವಿಜಯ ರವದಿ, ನಜೀರ ಮೋಮಿನ ದಾದಾ. ಶಿವಾನಂದ ಜಿರಲಿ, ಗುಂಡು ಪಾಟೀಲ, ನ್ಯಾಯವಾದಿ ಎ.ಬಿ.ಕರನಿಂಗ, ಆಶಾ ಸಿಂಗಾಡಿ ಮೊದಲಾದವರು ಮಾತನಾಡಿ ನೀರಾವರಿ ಯೋಜನೆಯ ಅವಶ್ಯಕತೆ ವಿವರಿಸಿ ಇಲ್ಲಿಯವರೆಗೆ ಗಮನ ಹರಿಸದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಯ ಅಧ್ಯಕ್ಷ ನ್ಯಾಯವಾದಿ ರಾಮಚಂದ್ರ ಜೋಶಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದಕ್ಕೂ ಪೂರ್ವದಲ್ಲಿ ಬೆಳಗಿನ 6 ಗಂಟೆಯಿಂದ ಕೋರ್ಟ ವೃತ್ತ,ಬೈಪಾಸ್ ರೋಡ ಮೊದಲಾದ ಸ್ಥಳಗಳಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ವಾಹನ ಸಂಚಾರ ನಿರ್ಬಂಧಿಸಿದ್ದರು.ಬೆಳಗಿನ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ತೆರಳಲು ಆಗಮಿಸಿದ್ದ ಚಿಕ್ಕ ಮಕ್ಕಳು ಸೇರಿದಂತೆ ಎಲ್ಲರೂ ವಾಹನಗಳಿಲ್ಲದೆ ಪರದಾಡುತ್ತಾ ಸತ್ಯಾಗೃಹಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದರು.ಒಟ್ಟಾರೆ ಹುಕ್ಕೇರಿ ಪಟ್ಟಣ ಸಂಪೂರ್ಣ ಸ್ಥಬ್ಧಗೊಳ್ಳುವ ಮೂಲಕ ಬಂದ್ ಯಶಸ್ವಿಯಾಯಿತು.ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಿ.ಎಸ್.ಐ ಹಸನ್ ಮುಲ್ಲಾ ನೇತೃತ್ವ್ವದಲ್ಲಿ ಸೂಕ್ತ ಬಂದೋಬಸ್ತ ಕ್ರಮ ಕೈಗೊಂಡಿದ್ದರು.
ಸಭೆಯಲ್ಲಿ ಉದಯ ಹುಕ್ಕೇರಿ,ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ರವಿ ಕರಾಳೆ,ತಮ್ಮಣ್ಣಗೌಡ ಪಾಟೀಲ,ಸೋಮಶೇಖರ ಗಂಧ, ಇಸ್ಮಾಯಿಲಬೇಗ ಇನಾಮದಾರ,ರಾಜಶೇಖರ ಮುಚ್ಚಂಡಿ,ಅಶೋಕ ಅಂಕಲಗಿ,ಮಹಾದೇವ ಪಾಟೀಲ,ರೇಖಾ ಚಿಕ್ಕೋಡಿ,ಶೈಲಾ ದೊಡಲಿಂಗನ್ನವರ, ತಾ.ಪಂ ಸದಸ್ಯೆ ಚಂದ್ರವ್ವಾ ಮಗದುಮ್ಮ ಸೇರಿದಂತೆ ಅನೇಕ ಮುಖಂಡರು,ರೈತರು,ವ್ಯಾಪಾರಸ್ಥರು,ಕ.ರ.ವೇ ಸದಸ್ಯರು,ಅಂಬೇಡ್ಕರ ಜನ ಜಾಗೃತಿ ಸದಸ್ಯರು,ಹಾಲು ಮತ ಸಮಾಜ ಬಾಂಧವರು,ಮಹಿಳಾ ಸಂಘಟನೆಗಳ ಸದಸ್ಯರಿದ್ದರು. ಸುಭಾಸ ನಾಯಿಕ ಸ್ವಾಗತಿಸಿ,ಭೀಮಶಿ ಗೋರಕನಾಥ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here