ಹುಕ್ಕೇರಿ ಶ್ರೀಗಳ ಆಶೀರ್ವಾದ ಪಡೆದ ಹೆಬ್ಬಾಳ್ಕರ್

0
37


ಬೆಳಗಾವಿ
ಮೇ.12 ರಂದು ಕಳೆದ ವರ್ಷ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮತದಾರರು ರಾಜಕೀಯ ಪುನರುಜನ್ಮ ನೀಡಿದ ಹಿನ್ನೆಲೆಯಲ್ಲಿ ಇಂದು ನನ್ನ ಜನ್ಮ ದಿನ ಬದಲಾವಣೆ ಮಾಡಿಕೊಂಡಿದ್ದೇನೆ ಎಂದು ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಭಾನುವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ನನ್ನ ಜನ್ಮ ದಿನಾಚರಣೆಯ ಫೆ.14 ನನ್ನ ಜನ್ಮದಿನಾಚಾರಣೆ.ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮತದಾರರು ಕಳೆದ ಮೇ.12ರ ವಿಧಾನಸಭಾ ಚುನಾವಣೆಯ ಫಲಿತಾಂಶದಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿ ರಾಜಕೀಯದಲ್ಲಿ ಮರು ಹುಟ್ಟು ನೀಡಿದ ಅವರ ಕೃತಜ್ಞತೆಯ ಸಲುವಾಗಿ ಇಂದು ನನ್ನ ಜನ್ಮ ದಿನಾಚಾರಣೆ ಆಚರಿಸಿಕೊಳ್ಳುತ್ತಿದ್ದೇನೆ ಎಂದರು.
ಕಾಕತಾಳಿಯ ಎನ್ನುವಂತೆ ಇಂದು ವಿಶ್ವ ಅಂತಾರಾಷ್ಟ್ರೀಯ ತಾಯಂದಿರ ದಿನಾಚಾರಣೆ ಇರುವುದರಿಂದ ಇಂದೇ ನನ್ನ ಗ್ರಾಮೀಣ ಕ್ಷೇತ್ರದ ಮತದಾರರು ಪ್ರಚಂಡ ಬಹುಮತಗಳಿಂದ ಗೆಲ್ಲಿಸಿಕೊಟ್ಟಿದ್ದಾರೆ. ಇದು ನನ್ನ ಪುಣ್ಯ. ನಾನು ಅವರ ಮನೆಯ ಮಗಳಾಗಿ ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಶ್ವ ತಾಯಂದಿರ ದಿನಾಚರಣೆ ಇಡೀ ದೇಶದಲ್ಲಿ ಮೊದಲಿಗರು ಮತದಾನದ ಫಲಿತಾಂಶದ ದಿನದಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಬ್ಬರೆ. ಕೇವಲ ಒಂದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಧಿಕಾರ ಬರುತ್ತದೆ. ಹೋಗುತ್ತದೆ. ನಿರಂತರ ಜನರ ಸಂಪರ್ಕದಲ್ಲಿದ್ದುಕೊಂಡು ಅವರ ಕಷ್ಟಗಳನ್ನು ಆಲಿಸಬೇಕು ಎಂದು ಆಶೀರ್ವದಿಸಿದರು.

ವೀರುಪಾಕ್ಷಯ್ಯ ನೀರಲಿಗಿಠ, ಶರಥ್ ಪಾಟೀಲ, ಅರವಿಂದ ಜೋಶಿ ಡಾ. ನಂದಿಶ, ಬಾಳಗೌಡ ಪಾಟೀಲ, ಉದಯ ಹುಲಿಕಾಂತಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
—————–

loading...