ಹುತ್ತಕೆ ಹಾಲು ಎರೆಯುವ ಬದಲಾಗಿ ಮಕ್ಕಳಿಗೆ ಹಾಲು ವಿತರಣೆ : ವಿದ್ಯಾರ್ಥಿನಿಯ ಕಾರ್ಯಕ್ಕೆ ಜನ ಮೆಚ್ಚುಗೆ

0
56

ಹುತ್ತಕೆ ಹಾಲು ಎರೆಯುವ ಬದಲಾಗಿ ಮಕ್ಕಳಿಗೆ ಹಾಲು ವಿತರಣೆ : ವಿದ್ಯಾರ್ಥಿನಿಯ ಕಾರ್ಯಕ್ಕೆ ಜನ ಮೆಚ್ಚುಗೆ

ಕನ್ನಡಮ್ಮ ಸುದ್ದಿ-ಸಂಕೇಶ್ವರ – ನಾಗರ ಪಂಚಮಿ ಅಂಗವಾಗಿ ಹುತ್ತಕ್ಕೆ ಹಾಲು ಎರೆಯುವ ಪದ್ದತಿ ಸಾಮಾನ್ಯವಾದದ್ದು . ಆದರೆ ಹುತ್ತಕೆ ಹಾಲು ಎರೆಯು ಪದ್ದತಿ ಬದಲಾಗಿ ಅದೆ ಹಾಲನ್ನು ಮಕ್ಕಳಿಗೆ ವಿತರಿಸುವ ಮೂಲಕ ಹುಕ್ಕೇರಿ ತಾಲ್ಲೂಕಿನ ಕೋಚರಿ ಗ್ರಾಮದ ವಿದ್ಯಾರ್ಥಿನಿ ಸುಜಾತಾ ಮತ್ತಿವಾಡ ಮಾದರಿಯಾಗಿದ್ದಾರೆ .

ಹುತ್ತಕ್ಕೆ ಹಾಲು ಸುರಿದು ವ್ಯರ್ಥ ಮಾಡದೆ ಅದೇ ಹಾಲನ್ನು ಸುಮಾರು ನಲವತ್ತು ಮಕ್ಕಳಿಗೆ ಕೊಡುವ ಮೂಲಕ ಬಸವ ಪಂಚಮಿಯನ್ನು ಕೋಚರಿ ಗ್ರಾಮದಲ್ಲಿ ಆಚರಿಸಿದರು.ವಿದ್ಯಾರ್ಥಿನಿಯ ಕಾರ್ಯಕ್ಕೆ ಮಾನವ ಬಂದುತ್ವ ವೇದಿಕೆ ಸಂಘಟನೆಯ ಮೆಚ್ವುಗೆ ವ್ಯಕ್ತ ಪಡೆಸಿ ನಿಮ್ಮ ನಡೆ ಇವತ್ತಿನ ಯುವತಿಯರಿಗೆ ಮಾದರಿಯಾಗಲಿ ಎಂದು ಮೆಚ್ವುಗೆ ವ್ಯಕ್ತ ಪಡೆಸಿದ್ದಾರೆ .

ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಅದ್ಯಕ್ಷರು ಹಾಗೂ ಕೆಪಿಸಿಸಿ ಕಾರ್ಯದ್ಯಕ್ಷರಾದ ಸತೀಶ ಜಾರಕಿಹೋಳಿ ಪ್ರತಿ ವರ್ಷದಂತೆ ಈ ವರ್ಷವು ನಾಗರ ಪಂಚಮಿ ದಿನದಂದು ಹುತ್ತಕ್ಕೆ ಹಾಲು ಸುರಿದು ವ್ಯರ್ಥ ಮಾಡದೆ ಅದೆ ಹಾಲನ್ನು ಬಡ ಮಕ್ಕಳಿಗೆ ವಿತರಿಸಿ ಎಂದು ಮನವಿ ಮಾಡಿದ್ದರು .ಅದರಂತೆ ಕೋಚರಿ ಗ್ರಾಮದ ವಿದ್ಯಾರ್ಥಿನಿ ಸುಜಾತ ಮತ್ತಿವಾಡ ಇಂದು ಹಾಲನ್ನು ಮಕ್ಕಳಿಗೆ ನೀಡಿ ನಾಗರ ಪಂಚಮಿಯನ್ನ ಬಸವ ಪಂಚಮಿಯನ್ನ ಆಚರಿಸಿದ್ದಾಳೆ .
ಸುಜಾತಳ ಜೊತೆ ಅವರ ತಂದೆ ಶಿವಪ್ಪ ಮತ್ತಿವಾಡ ಕೂಡ ಸಾಥ್ ನೀಡಿದ್ದು ,ಇವರ ವೈಚಾರಿಕ ಕಾರ್ಯಕ್ಕೆ ಮಾನವ ಬಂದುತ್ವ ವೇದಿಕೆ ರಾಜ್ಯ ಸಂಚಾಲಕ ರವಿಂದ್ರ ನಾಯ್ಕರ ಕೂಡ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತ ಪಡೆಸಿದ್ದಾರೆ .

loading...