ಹೃದಯವಂತರೇ ನಿಜವಾದ ಸಿರಿವಂತರು; ಶಿವಕುಮಾರ ಮಹಾಸ್ವಾಮಿಗಳು

0
30

 

ಮೋಳೆ;- ಸಂತಸದ ಬದುಕಿಗೆ ಸಮೃದ್ಧಿ ಅವಶ್ಯ, ಅಂತರಂಗ ಬಹಿರಂಗ ಸಮೃದ್ದಗೊಂಡಾಗ ಬದುಕು ಸುಂದರಗೊಳ್ಳುತ್ತದೆ. ಭೌತಿಕ ಸಂಪತ್ತಿಗಿಂತ ಅಧ್ಯಾತ್ಮದ ಸಂಪತ್ತು ಸುಖ ಸೋತೋಷಕ್ಕೆ ಮಖ್ಯ. ಹೃದಯವಂತರೇ ನಿಜವಾದ ಸಿರಿವಂತರೆಂದು ಬೀದರದಚಿದಂಬರಾಶ್ರಮದ ಪ.ಪೂ ಶ್ರೀ ಶಿವಕುಮಾರ ಮಹಾಸ್ವಾಮಿಗಳು ನುಡಿದರು.
ರವಿವಾರ ದಿ.20 ರಂದು ಪಾರ್ಥನಹಳ್ಳಿ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯ ಉದ್ಘಾಟನೆ, ಹಾಗೂ ಶ್ರೀ ಶರಣ ಬಸವೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಮಾತನಾಡಿದ ಅವರು ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಸಂಸ್ಕøತಿ-ಸಂಸ್ಕಾರ ಪರಂಪರೆ ಆದರ್ಶಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆಯಿದೆ. ಜನಸಾಮಾನ್ಯರಲ್ಲಿ ಸತ್ಯ ¸ಶುದ್ದ ಜೀವನ, ಕಾಯಕ ನಿಷ್ಟೆ ಬೆಳೆಸುವ ಜವಾಬ್ದಾರಿ ಹೆತ್ತವರ ಮೇಲಿದೆ ಎಂದರು.
ಪಾಲಕರು ಮಕ್ಕಳಿಗೆ ಕೇವಲ ಶಿಕ್ಷಣದ ಪದವಿಗಳನ್ನು ಕೊಡಿಸಿದರೆ ಸಾಲದು ತಂದೆಯಾದವರು ಮೊದಲು ನೈತಿಕ ಶಿಕ್ಷಣ ನೀಡಬೇಕೆಂದು. ಇಂದು ಬಹಳಷ್ಟು ತಂದೆಯಾದವರು ತಮ್ಮ ಹೊಣೆಗಾರಿಕೆಯನ್ನು ಮರೆತು, ಮಕ್ಕಳಿಗೆ ತಂದರಯಾಗದೆ (ಗಾರ್ಡಿಯನ್)ಸಂಬಂಧಿಕಾಗಿದ್ದಾರೆ. ತಂದೆಗಿರುವ ಜವಾಬಾದರಿ ಗಾರ್ಡಿಯನ್ನಗಳಾದವರಿಗೆ ಇರುವದಿಲ್ಲ, ಹೀಗಾದರೆ ಮುಂದೊಂದು ದಿನ ನಿಮ್ಮ ಮಕ್ಕಳೇ ನಿಮಗೆ ವೈರಿಗಳಾಗುತ್ತಾರೆ. ಮಕ್ಕಳಿಗೆ ಸದಾಚಾರ, ಸತ್ ಚರೀತ್ರೆ, ಗುರು-ಹಿರಿಯರನ್ನು ಗೌರವದಿಂದ ಕಾಣುವುದನ್ನು ಯಾರು ಮಕ್ಕಳಿಗೆ ಕಲಿಸುತ್ತಾರೋ ಅವರೇ ನಿಜವಾದ ತಂದೆ ಎಂದು ಮಾರ್ಮಿಕವಾಗಿ ನುಡಿದರು.
ಮನುಷ್ಯನ ಭೌತಿಕ ಬದುಕು ಶ್ರೀಮಂತಗೊಂಡರೆ ಸಾಲದು, ಆಂತರಿಕ ಬದುಕು ಬಲಗೊಳ್ಳಲು ಅಗತ್ಯವಿದೆ. ಅಂತರಂಗ ಬಹಿರಂಗ ಶುದ್ದವಾಗಿಟ್ಟುಕೊಂಡು ಮನಸ್ಸು, ಭಾವ, ಹೃದಯ ಸ್ವಚ್ಚವಾಗಿಟ್ಟುಕೊಳ್ಳುವಂತೆ ಹೇಳಿದರು.
ಒಂದು ತಿಂಗಳ ಪರ್ಯಂತರ ಪ್ರವಚನ ನೀಡಿದ ಮಾತೋಶ್ರೀ ಶಶಿಕಲಾ ಮಾತಾಜೀ, ಶ್ರೀ ಶಂಕರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅಥಣಿ ಶಾಸಕರಾದ ಲಕ್ಷ್ಮಣ ಸವದಿಯವರು ನೂತನ ಸರಕಾರಿ ಪ್ರೌಢ ಶಾಲೆಯನ್ನು ಉದ್ಘಾಟಿಸಿದರು, ಕಾಗವಾಡ ಶಾಸಕ ರಾಜು ಕಾಗೆಯವರು ಅಧ್ಯಕ್ಷತೆವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪಣ್ಣ ಸವದಿ, ನಿರ್ದೇಶಕರಾದ ಗುಳಪ್ಪ ಜತ್ತಿ, ಗುರಬಸು ತೆವರಮನಿ,ಜಿ.ಪಂ ಸದಸ್ಯ ನಿಂಗಪ್ಪ ಖೋಕಲೆ, ಶಿಕ್ಷಣಾಧಿಕಾರಿ ಎಮ್.ಬಿ. ಭಜಂತ್ರಿ, ಶಿದರಾಯ ತೇಲಿ, ಬಾಹುಸಾಹೇಬ ಜಾಧವ, ಶಿವಾನಂದ ಮುಜಗೋಣ್ಣವರ,ಅಪ್ಪಣ್ಣ ಮುಜಗೋಣ್ಣವರ, ಶಿವಾನಂದ ಗೊಲಬಾವಿ, ರಾಜಾರಾಮ ಚವ್ಹಾಣ, ಲಕ್ಷ್ಮಣ ಮುದಣ್ಣವರ, ಬಸಪ್ಪ ಮಗದುಮ್, ದಸ್ತಗೀರ ಮೋಳೆ ಸೇರಿದಂತೇ ಗ್ರಾಮಹ ಹಲವಾರು ಮುಖಂಡರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here