ಹೆಬ್ಬಾಳ ಜಿ.ಪಂ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು

0
207

ಹೆಬ್ಬಾಳ ಜಿ.ಪಂ ಉಪ ಚುನಾವಣೆ
ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು

ಕನ್ನಡಮ್ಮ ಸುದ್ದಿ -ಹುಕ್ಕೇರಿ : ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಜಿ.ಪಂ ಉಪ ಚುನಾವಣಾ ಫಲಿತಾಂಶ ಇಂದು ಹೊರ ಬಿದ್ದದೆ. ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಮಗದುಮ್ಮ ಬಿಜೆಪಿ ಅಭ್ಯರ್ಥಿ ವಿರುದ್ದ 5439 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ .

ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಪ್ರತೀಷ್ಠೆಯಾಗಿದ್ದ ಹೆಬ್ಬಾಳ ಜಿ.ಪ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಹಾಂತೇಶ ಮಗದುಮ್ಮ ,ಬಿಜೆಪಿ ಅಭ್ಯರ್ಥಿಯಾಗಿ ಸತೀಶ ಮಗದುಮ್ಮ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ರವಿಂದ್ರ ಖೋತ ಸ್ಪರ್ದಿಸಿದ್ದರು .
ಈ ಹಿಂದೆ ಈ ಕ್ಷೇತ್ರ ದಿ. ಗಂಗಾಧರ ಸ್ವಾಮಿ ತವಗಮಠ ಆಯ್ಕೆಯಾಗಿದ್ದು , ಅವರ ಅಕಾಲಿಕ ನಿಧನ ಹಿನ್ನೆಲೆ ಈ ಉಪ ಚುನಾವಣಾ ನಡೆದಿತ್ತು .

ಇಂದು ಹುಕ್ಕೇರಿ ತಹಶಿಲ್ದಾರರ ಕಚೇರಿಯಲ್ಲಿ ಮತ ಎಣಿಕೆ ನಡೆದು ಫಲಿತಾಂಶ ಹೊರ ಬಿದ್ದಿದೆ.
ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಮಗದುಮಗೆ 11298 ಮತಗಳು ಪಡೆದಿದ್ದು ,
ಬಿಜೆಪಿ ಅಭ್ಯರ್ಥಿ ಸತೀಶ್ ಮಗದುಮಗೆ 5850
ಒಟ್ಟು 5439 ಮತಗಳ ಅಂತರದಿಂದ ಕಾಂಗ್ರೆಸ್ ಗೆ ಜಯ ಸಾಧಿಸಿ ತಮ್ಮ ತೆಕ್ಕೆಗೆ ಕ್ಷೇತ್ರ ಉಳಿಸಿಕೊಂಡಿದೆ .

ಕಾಂಗ್ರೆಸ್ ಸಂಭ್ರಮಾಚರಣೆ :

ಉಪ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದಂತೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು , ಪರಸ್ಪರ ಗುಲಾಲ ಎರಚಿ ಸಂಭ್ರಮಿಸಿದರು .

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಿರಣಸಿಂಗ್ ರಜಪೂತ , ಗಣೇಶ ಪಾಟೀಲ ,ಆನಂದ ತವಗಮಠ ,ಸುರೇಶ ಹುದ್ದಾರ ಸೇರಿದಂತೆ ಇತರರು ಇದ್ದರು .

loading...