ಹೊನಕುಪ್ಪಿಯಲ್ಲಿ ಅಕ್ರಮ ಜಿಲೆಟಿನ್ ಸ್ಪೋಟಕ ಪತ್ತೆ

0
13

ಹೊನಕುಪ್ಪಿಯಲ್ಲಿ ಅಕ್ರಮ ಜಿಲೆಟಿನ್ ಸ್ಪೋಟಕ ಪತ್ತೆ

ಬೆಳಗಾವಿ : ಕೌಜಲಗಿ  ಸಮೀಪದ ಹೊನಕುಪ್ಪಿ ಗ್ರಾಮದಲ್ಲಿ ಅನುಮತಿ ಪಡೆಯದೆ ಅಕ್ರಮವಾಗಿ ಸಂಗ್ರಹಿಸಿಟ್ಟ ಜಿಲೆಟಿನ್ ಸ್ಪೋಟಕ ವಸ್ತುಗಳನ್ನು ಕುಲಗೋಡ ಪೋಲಿಸರು ಶನಿವಾರದಂದು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಹೊನಕುಪ್ಪಿ ಗ್ರಾಮದ ಭೀಮಪ್ಪ ಬಸಪ್ಪ ಹೆಗಡೆ ಎಂಬುವರ ಹೊಲದಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ಗೊಲಬಾಂವಿ ಗ್ರಾಮ ಗೋಪಾಲ ಬಸವಪ್ರಭು, ಸೋರಗಾಂವಿ, ಗಿರಿಮಲ್ಲಪ್ಪ ಬಸಪ್ಪ ಸಿದ್ದಾಪೂರ, ಬಬಲೇಶ್ವರ ಪಟ್ಟಣದ ರಾಜೇಶ ಮೊನಪ್ ಬಡಿಗೇರ ಹಾಗೂ ಹೊನಕುಪ್ಪಿಯ ಭೀಮಪ್ಪ ಬಸಪ್ಪ ಹೆಗಡೆ ಇವರುಗಳು ಸರಕಾರದ ಯಾವುದೇ ಅಧೀಕೃತವಾದ ಅನುಮತಿ ಪಡೆಯದೇ ಜಿಲೆಟಿನ್ ಸ್ಪೋಟಕ ಪದಾರ್ಥಗಳನ್ನು ಸ್ಪೂಲುಗೊಳಿಸಲು ಸಂಗ್ರಹಿಸಿಟ್ಟಿದ್ದು, ಮಾಹಿತಿಯನ್ನಾಧರಿಸಿ ಕುಲಗೋಡ ಪೋಲಿಸರು ಪತ್ತೆ ಹೆಚ್ಚಿದ್ದಾರೆ.
ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ, ಗೋಕಾಕ ಡಿ.ಎಸ್.ಪಿ. ಮೂಡಲಗಿ ಸಿ.ಪಿ.ಐ. ಇವರ ಮಾರ್ಗದರ್ಶನದಲ್ಲಿ ಕುಲಗೋಡ ಪೋಲಿಸ್ ಠಾಣೆಯ ಪಿ.ಎಸ್.ಐ. ಎಚ್.ಕೆ. ನೇರಳೆ, ಸಿಬ್ಬಂದಿಗಳಾದ ವಿ.ಆರ್.ಗಲಬಿ, ಬಿ.ಬಿ.ಬಿರಾದಾರ, ಎಸ್.ಪಿ. ಮುಗ್ಗನವರ ಅವುರಗಳ ತಂಡ ಹೊನಕುಪ್ಪಿಯಲ್ಲಿ ದಾಳಿ ಮಾಡಿ, ೧೫೮ ಜಿಲೆಟಿನ್, ೫೧ ಇಡಿ ಕೇಬಳ್‌ಗಳು, ಅಕಿ=೧೦೦೦ ರೂ. ಬ್ಲಾಸ್ಟಿಂಗ್ ಚಾರ್ಜರ್ ಬ್ಯಾಟರಿ, ಪವರ್ ಟ್ಯಾಂಕ್ ಕಂಪನಿಯ ಟ್ಯಾಂಕರ್ ಸ್ಪೋಟಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರಾಜೇಶ ಮೊನಪ್ಪ ಬಡಿಗೇರ ಪತ್ತೆಗಾಗಿ ವಿಶೇಷ ತಂಡ ರಚಿಸಿ ಪೋಲಿಸರು ಬಲೆ ಬೀಸಿದ್ದಾರೆ.

loading...