ಹೊಸ‌ ಐದು ಪ್ರಮುಖ ನಗರಗಳಿಗೆ ವಿಮಾನ ಸೇವೆಗೆ ಚಾಲನೆ ನೀಡಿದ ಡಾ.ಕೋರೆ

0
17

ಬೆಳಗಾವಿ

ಬೆಳಗಾವಿಯ ಸಾರ್ವಜನಿಕರಿಗೆ ಇಂದಿನಿಂದ ಐದು ಪ್ರಮುಖ ನಗರಳಿಗೆ ವಿಮಾನ ಸೇವೆ ದೊರಕಲಿರುವುದು ಹೆಮ್ಮೆಯ ಸಂಗತಿ ಎಂದು ರಾಜ್ಯ ಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅಭಿಪ್ರಾಯಪಟ್ಟರು.

ಶುಕ್ರವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತೀರುಪತಿ, ಮೈಸೂರು, ಪುಣೆ,‌ಕೊಲ್ಲಾಪು ಮಾರ್ಗದ ಟ್ರೂಜೆಟ್ ವಿಮಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರು, ಮುಂಬೈ, ಹೈದ್ರಾಬಾದ್ ಸೇರಿದಂತೆ ದಕ್ಷಿಣ ಭಾರದ ವಿವಿಧ ಪ್ರಮುಖ ನಗರಗಳ ಮಧ್ಯೆ ಬೆಳಗಾವಿಯಿಂದ ಸರಾಸರಿ 30 ವಿಮಾನಗಳು ಬಂದು ಹೋಗುತ್ತಿವೆ. ಚಳಿಗಾಳದ ವೇಳಾಪಟ್ಟಿಯಲ್ಲಿ ಇನಷ್ಟು ವಿಮಾನಗಳು ಸೇರ್ಪಡೆಗೊಳ್ಳಲು ಕಳೆದ ಆರು ತಿಂಗಳ ಹಿಂದೆ ಬೆಳಗಾವಿ ವಿಮಾನ ನಿಲ್ದಾಣದ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಉಡಾನ್ ೩ ಯೋಜನೆಯಡಿಯಲ್ಲಿ ಕಡಪಾ, ಮೈಸೂರು, ತಿರುಪತಿ, ಹೈದ್ರಾಬಾದಗೆ ನಾಲ್ಕು ಹೊಸ ಮಾರ್ಗಗಗಳಿಗೆ ಬೆಳಗಾವಿಯಿಂದ ವಿಮಾನ ಸೇವೆ ದೊರೆತಿದೆ
ಕೊಲ್ಲಾಪುರದಿಂದ ಬೆಳಗಾವಿ ಮಾರ್ಗವಾಗಿ ಕಡಾಪಗೆ ಹೊಸ ಮಾರ್ಗ ಆರಂಭಿಸಿದೆ.. ಅದರಂತೆ ಮೈಸೂರು, ಕೊಲ್ಲಾಪುರ, ತಿರುಪತಿಯ ವಿಮಾನಗಳು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಸೇವೆ ಆರಂಭಿಸಲಿ ವಿಮಾನ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ ಎಂದರು.

ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಂದ್ರಕುಮಾರ ಮೌರ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...